ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಪೈರ್‌ ಅವಾರ್ಡ್‌: ರಾಷ್ಟ್ರಮಟ್ಟಕ್ಕೆ ಪೂಜಾ ಆಯ್ಕೆ

Last Updated 17 ಫೆಬ್ರುವರಿ 2020, 4:44 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಸಾಗಡೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಪೂಜಾ ಅವರು ಇನ್‌ಸ್ಪೈರ್‌ ಅವಾರ್ಡ್‌ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಫೆ.14 ಮತ್ತು 15ರಂದು ನಡೆದಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪೂಜಾ ಅವರು‘ಐಒಟಿ (ಇಂಟರ್‌ನೆಟ್ ಆಫ್‌ ತಿಂಗ್‌) ಮೂಲಕ ಆರೋಗ್ಯ ನಿಯಂತ್ರಣ ವ್ಯವಸ್ಥೆ’ಯ ಮಾದರಿಯನ್ನು ಪ್ರದರ್ಶಿಸಿದ್ದರು.ವಿಜ್ಞಾನ ಶಿಕ್ಷಕ ದೊಡ್ಡರಸಯ್ಯ ಅವರ ಮಾರ್ಗದರ್ಶನದಲ್ಲಿ ಈ ಮಾದರಿಯನ್ನು ಸಿದ್ಧಪಡಿಸಿದ್ದ ಪೂಜಾ ಅವರುಜ. 30 ಮತ್ತು 31ರಂದು ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು.

‘ರೋಗಿಯ ನಾಡು ಮಿಡಿತ ಹಾಗೂ ದೇಹದ ಉಷ್ಣತೆಯನ್ನು ವೈರ್‌ಲೆಸ್‌ ವಿಧಾನದಿಂದ ವೈದ್ಯರು ಎಲ್ಲಿಂದ ಬೇಕಾದರೂ ಪರೀಕ್ಷಿಸಬಹುದಾದ ಮಾದರಿಯನ್ನು ಪೂಜಾ ಸಿದ್ಧಪಡಿಸಿದ್ದಾಳೆ. ಆಕೆ ಈಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎಚ್‌.ಬಿ.ಪ್ರಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT