ಭಾನುವಾರ, ಮೇ 22, 2022
22 °C

ವಿಶ್ವ ದಾದಿಯರ ದಿನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ವಿವಿಧ ಆಸ್ಪತ್ರೆಗಳು, ನರ್ಸಿಂಗ್‌ ಕಾಲೇಜುಗಳಲ್ಲಿ ಗುರುವಾರ ವಿಶ್ವ ದಾದಿಯರ ದಿನವನ್ನು ಆಚರಿಸಲಾಯಿತು. 

ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮನುಕುಲಕ್ಕೆ ಅವರು ನೀಡಿದ ಸೇವೆ, ತ್ಯಾಗವನ್ನು ಸ್ಮರಿಸಲಾಯಿತು.  

ಜಿಲ್ಲಾಸ್ಪತ್ರೆ: ನಗರದ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ (ತಾಯಿ ಮಗುವಿನ ಆಸ್ಪತ್ರೆ) ನಡೆದ ಕಾರ್ಯಕ್ರಮದಲ್ಲಿ ಫ್ಲಾರೆನ್ಸ್‌ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್, ಅರವಳಿಕೆ ತಜ್ಞ ಡಾ.ಮಹೇಶ್.ಎಂ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ನವೀನ್ ಚಂದ್ರ, ಡಾ.ಭಾರತಿ, ಡಾ.ರಾಜೇಶ್ವರಿ. ಶುಶ್ರೂಷಕಾ ಸೂಪರಿಂಟೆಂಡೆಂಟ್‌ ಗೀತಾ, ಮಹದೇವ್.ಎಲ್, ಜವರನಾಯಕ, ಮಹೇಶ್, ಮಹದೇವಸ್ವಾಮಿ, ಚಂದನ್, ಸವಿತಾ, ಪುಟ್ಟಲಿಂಗಮ್ಮ, ವೈದ್ಯರು, ನರ್ಸ್‌ಗಳು, ಸಿಬ್ಬಂದಿ ಇದ್ದರು. 

ಜೆಎಸ್ಎಸ್ ಆಸ್ಪತ್ರೆ: ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಗೋವಿಂದಶೆಟ್ಟಿ ಅವರು, ‘ಆಸ್ಪತ್ರೆಗೆ ಬರುವ ರೋಗಿಗಳಿಗೆ ಶುಶ್ರೂಷಕರು ಉತ್ತಮ ಸೇವೆ ನೀಡಬೇಕು. ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು’ ಎಂದು ಸಲಹೆ ನೀಡಿದರು.

ನರ್ಸಿಂಗ್ ಮೇಲ್ವಿಚಾರಕಿ ಶಕುಂತಳಾ, ಮೂಳೆ ತಜ್ಞ ಡಾ.ಲಿಖಿತ್, ಮಕ್ಕಳ ತಜ್ಞೆ  ಡಾ.ಮಾನಸ, ನರ್ಸ್‌ಗಳು, ಸಿಬ್ಬಂದಿ ಇದ್ದರು. 

ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು: ಜೆಸ್‌ಎಸ್‌ ನರ್ಸಿಂಗ್‌ ಕಾಲೇಜಿನಲ್ಲಿ ದಾದಿಯರ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪ‍ರ್ಧೆಗಳನ್ನು ಏರ್ಪಡಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ಜಿ.ವಿನಯ್‌ಕುಮಾರ್‌ ಅವರು, ‘ಆರೋಗ್ಯ ಕಾಪಾಡುವ ವೃತ್ತಿಯಲ್ಲಿ ದಾದಿಯರ ಪಾತ್ರ ಅತಿಮುಖ್ಯ. ಆಸ್ಪತ್ರೆಗಳಿಗೆ ಇಲ್ಲವೇ ಕ್ಲಿನಿಕ್‌ಗಳಿಗೆ ಭೇಟಿ ನೀಡಿದರೆ, ಮೊದಲು ನರ್ಸ್‌ಗಳು ನಮ್ಮನ್ನು ನಗುಮುಖದಿಂದ ಮಾತನಾಡಿಸುತ್ತಾರೆ. ನಮ್ಮ ಕಷ್ಟದಲ್ಲಿ ಭಾಗಿಯಾಗಿ ಧೈರ್ಯ ತುಂಬುತ್ತಾರೆ’ ಎಂದರು. 

ಉಪನ್ಯಾಸಕಿ ಮಧು ಅವರು ಮಾತನಾಡಿದರು. ಉಪನ್ಯಾಸಕರಾದ ಸಂಧ್ಯಾ, ಉಷಾ, ಸುಶ್ಮಿತಾ, ಸಂದೇಶ್, ಮಾದೇವಸ್ವಾಮಿ ಹಾಗೂ ವಿದ್ಯಾರ್ಥಿಗಳು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.