ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈವಾರ ತಾತಯ್ಯ ಸಂದೇಶಗಳು ಸಮಾಜಕ್ಕೆ ಅವಶ್ಯಕ: ಆಶಾ

Last Updated 8 ಮಾರ್ಚ್ 2023, 6:20 IST
ಅಕ್ಷರ ಗಾತ್ರ

ಚಾಮರಾಜನಗರ: ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದ ಕೈವಾರ ತಾತಯ್ಯ ಅವರು ಅಂದಿನ ಕಾಲದಲ್ಲೇ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದವರು ಎಂದು ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಮಂಗಳವಾರ ತಿಳಿಸಿದರು.

ನಗರದ ವರನಟ ಡಾ. ರಾಜ್‌ಕಮಾರ್ ಜಿಲ್ಲಾ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಯೋಗಿನಾರೇಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೈವಾರ ತಾತಯ್ಯ ಅವರು ಸಮಾಜದಲ್ಲಿ ಬೇರೂರಿದ್ದ ಹಲವು ಮೂಢನಂಬಿಕೆ ಅನಿಷ್ಟ ಪದ್ದತಿಗಳ ವಿರುದ್ದ ಹೋರಾಟ ಮಾಡಿದ್ದರು. ಅವರ ಸಂದೇಶ, ತತ್ವಗಳು ಸಮಾಜಕ್ಕೆ ಅತ್ಯಂತ ಅವಶ್ಯಕ’ ಎಂದು ಆಶಾ ಅವರು ತಿಳಿಸಿದರು.

ಮೈಸೂರಿನ ಸೊಮಾನಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಮೇಶ್ ಮಾತನಾಡಿ, ‘ನಾಡು ಕಂಡ ಅಪೂರ್ವ ಸಂತರಲ್ಲಿ ಯೋಗಿನಾರೇಯಣ ಯತೀಂದ್ರರು ಕೂಡ ಒಬ್ಬರು. ಸಮ ಸಮಾಜಕ್ಕೆ ಹೊರಾಡಿದ ದೈವಭಕ್ತ. ವರ್ಣ ಭೇದ ನೀತಿಯನ್ನು ಕಟುವಾಗಿ ಟೀಕಿಸಿದರು. ಅಂದಿನ ಸಮಾಜವನ್ನು ತತ್ವಪದಗಳು, ಸಾಹಿತ್ಯ, ಪದ್ಯಗಳ ಮೂಲಕ ಎಚ್ಚರಿಸಿದ್ದರು’ ಎಂದರು.

‘ಆಡಂಬರದ ಪೂಜೆ ಪುರಸ್ಕಾರಗಳ ವಿರುದ್ಧ ಹೋರಾಡಿದ್ದರು. ಆತ್ಮಶುದ್ಧಿ, ತ್ಯಾಗದಿಂದ ಮಾತ್ರ ದೇವರನ್ನು ಒಲಿಸಲು ಸಾಧ್ಯ ಎಂದು ಹೇಳಿದ್ದರು’ ಎಂದರು.

ನಗರಸಭೆಯ ಸದಸ್ಯೆ ಎಚ್.ಎಸ್.ಮಮತ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಧರಣೇಶ್, ದಾಸಬಣಜಿಗರ ಸಂಘದ ಜಿಲ್ಲಾ ಅಧ್ಯಕ್ಷ ಎನ್. ಶ್ರೀನಿವಾಸ್‌ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ಸಮುದಾಯದ ಮುಖಂಡರಾದ ರಂಗರಾಮು, ಚಂದ್ರಶೇಖರ್ ಇತರರು ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಡೆದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಭಾವಚಿತ್ರದ ಮೆರವಣಿಗೆಗೆ ಚಾಮರಾಜೇಶ್ವರ ದೇವಾಲಯದ ಬಳಿ ನಗರಸಭೆ ಅಧ್ಯಕ್ಷೆ ಆಶಾ ನಟರಾಜು ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT