ಶನಿವಾರ, ಮಾರ್ಚ್ 25, 2023
23 °C
ಅದ್ಧೂರಿ ಮೆರವಣಿಗೆ, ವಿಶೇಷ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸಿದ ಚಿಣ್ಣರು

ಚಂದಕವಾಡಿ, ವೆಂಕಟಯ್ಯಛತ್ರದಲ್ಲಿ ಕಲಿಕಾ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ, ವೆಂಕಟಯ್ಯಛತ್ರ ಗ್ರಾಮದಲ್ಲಿ ಸೋಮವಾರ ಕಲಿಕಾ ಹಬ್ಬಕ್ಕೆ ಚಾಲನೆ ನೀಡಲಾಯಿತು. 

ಚಂದಕವಾಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ₹30 ಕೋಟಿ ವೆಚ್ಚದಲ್ಲಿ ವಸತಿ ಪದವಿ ಕಾಲೇಜು ಆರಂಭಿಸಲಾಗುವುದು. 1997 ರಿಂದೀಚೆಗೆ ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಉತ್ತಮವಾಗಿ ಬೆಳೆಯುತ್ತಿದೆ. ಜಿಲ್ಲೆಯಲ್ಲಿಯೇ ಎಲ್ಲ ಪದವಿಗಳನ್ನು ಪಡೆಯಬಹುದಾಗಿದೆ. ಮಕ್ಕಳು ಆಸಕ್ತಿ ವಹಿಸಿ ಓದಿನ ಕಡೆ ಗಮನಹರಿಸಬೇಕು. ಬದಲಾದ ವಿದ್ಯಮಾನದಲ್ಲಿ ಪಠ್ಯ ಪುಸ್ತಕದಲ್ಲಿನ ಕಲಿಕೆಯಲ್ಲಿ ಮಾತ್ರವಲ್ಲದೆ ನೋಡಿ ಕಲಿ ಮಾಡಿ ತಿಳಿ ಎಂಬ ವಿಷಯದೊಂದಿಗೆ ಮಕ್ಕಳು ಹುರುಪು ಹುಮ್ಮಸ್ಸಿನಿಂದ ಕಲಿಯಲು ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮ ನೀಡಿದೆ’ ಎಂದು ತಿಳಿಸಿದರು.

ಪ್ರಾಂಶುಪಾಲ ಸ್ವಾಮಿ ಮಾತನಾಡಿ, ಸಂಪನ್ಮೂಲ ವ್ಯಕ್ತಿ ಬಸವಣ್ಣ ಮಾತನಾಡಿದರು. 

ಮೆರವಣಿಗೆ: ಗ್ರಾಮದ ಲಕ್ಷ್ಮೀ ದೇವಿ ದೇವಸ್ಥಾನದಿಂದ ಶಾಲೆಯ ತನಕ ಮಕ್ಕಳು ವಿವಿಧ ವೇಷಭೂಷಣ ತೊಟ್ಟು ಪೂರ್ಣ ಕುಂಭ ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿದ್ದು ಕಾರ್ಯಕ್ರಮದಲ್ಲಿ ಗಮನ ಸೆಳಯಿತು.

ಉಪ ಪ್ರಾಂಶುಪಾಲ ಸುಬ್ರಹ್ಮಣ್ಯ, ಸಿಆರ್‌ಪಿ ಬಸವಣ್ಣ, ರೆಬೆಲ್ಲೋ.ಜೆ. ಪ್ರೌಢಶಾಲಾ ಸಂಘಟನಾ ಕಾರ್ಯದರ್ಶಿ ನೇಮಿರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷೆ ವರಲಕ್ಷ್ಮಿ, ಕೆಪಿಎಸ್ ಶಾಲೆಯ ನಾಮನಿರ್ದೇಶಕ ರಮೇಶ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಲ್ಲೇಶ್ , ಮುನಿರ್, ಲಕ್ಷ್ಮೀ, ಮಹೇಶ್, ಗುರುಮೂರ್ತಿ, ರಂಗಸ್ವಾಮಿ, ನಟರಾಜ್, ಮಲ್ಲು, ಸುಬ್ರಹ್ಮಣ್ಯ, ಮಹದೇವಸ್ವಾಮಿ, ನಂಜಂಡಸ್ವಾಮಿ, ನೀಲಮ್ಮ, ಸ್ಟೇಲ್ಲಾಮೇರಿ, ಸೈಮನ್ ಇದ್ದರು.

ಕಲಿಕೆ ನಿರಂತರವಾಗಿರಲಿ: ವೆಂಕಟಯ್ಯನಛತ್ರ ಗ್ರಾಮದಲ್ಲಿ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ , ‘ಕಲಿಕೆ ಜೀವನದ ಬುನಾದಿ. ಜೀವನ ಪ್ರಶ್ನೆ ಪತ್ರಿಕೆ ಕೊಟ್ಟು ನಮ್ಮ ಬಳಿ ಉತ್ತರ ಪಡೆಯುತ್ತದೆ. ಕಲಿಕೆಯನ್ನು ಜೀವನದ ಗುರಿಯಾಗಿ ಇಟ್ಟುಕೊಳ್ಳಬೇಕು. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಾಗಿ ಕಲಿಕೆಯತ್ತ ಆಕರ್ಷಿತರಾಗಬೇಕು’ ಎಂದರು. 

ವಿವಿಧ ಬಗೆಯ ಕಲಾತಂಡಗಳೊಂದಿಗೆ, ಎತ್ತಿನಗಾಡಿಯಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಶಾಲಾ ಮಕ್ಕಳು ವಿಶೇಷ ರೀತಿಯ ಉಡುಗೆ ತೊಟ್ಟು ಕಲಿಕಾ ಹಬ್ಬದಲ್ಲಿ ಸಂಭ್ರಮಿಸಿದರು.

ಪ್ರಾಂಶುಪಾಲರಾದ ನಾಗೇಶ್, ಮುಖ್ಯ ಶಿಕ್ಷಕಿ ನಾಗರತ್ನ, ಮುಖಂಡ ಶಮಿತ್ ಕುಮಾರ್, ಎಸ್.ಡಿ.ಎಂ.ಸಿ. ನಂಜುಂಡಸ್ವಾಮಿ, ಶಿಕ್ಷಕರಾದ ಲೋಕೇಶ್, ಮಲ್ಲೇಶ್, ಕಿರಣ್ ರಾಜ್, ನಟರಾಜ್, ವೆಂಕಟಚಲ, ಮಂಜುಳ, ಸುಜಾತ, ಸಿ.ಆರ್.ಪಿ ಮಾಲಿಂಗನಾಯಕ, ನಂದೀಶ್, ಶಿವಕುಮಾರ್, ರಾಮಯ್ಯ ಶಾಲೆಯ ಸಿಬ್ಬಂದಿ, ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು