ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ದಿನವಿಡಿ ಕಾಡಿದ ಪುಷ್ಯ ಮಳೆ ವೈಭವ

Published 23 ಜುಲೈ 2023, 14:37 IST
Last Updated 23 ಜುಲೈ 2023, 14:37 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಾದ್ಯಂತ ಪುಷ್ಯ ಮಳೆ ಭಾನುವಾರ ಜನ ಜೀವನವನ್ನು ಕಾಡಿತು. ನಸುಕಿನಿಂದಲೇ ಮೋಡದ ವಾತಾವರಣ ಇದ್ದು, ಬೆಳಗಿನಿಂದಲೇ ಸೋನೆ ಮಳೆ ದಿನವಿಡಿ ಹನಿಯಿತು.

ಕೃಷಿಕರು ಮಳೆ ನಡುವೆ ಉಳುವ, ಬಿತ್ತುವ ಕೆಲಸ ಮುಂದುವರಿಸಿದರೆ, ಶ್ರಮಿಕರು ಹೊಲ, ಗದ್ದೆಗಳ ಕೆಲಸ ಮುಗಿಸಲು ಪರದಾಡಿದರು. ಜಾನುವಾರು ಸಾಕಣೆದಾರರು ಹನಿಯುವ ತುಂತುರು ನಡುವೆ ಸಂಜೆ ಛತ್ರಿ ಇಡಿದು ಮನೆಯಗಳತ್ತ ಹೆಜ್ಜೆ ಹಾಕಿದರು.

ಶೀತಗಾಳಿ, ತುಂತುರು ಮಳೆ ದಿನವಿಡಿ ಕಾಡಿತು. ಬೆಟ್ಟದಲ್ಲಿ ಹಿತಕರ ವಾತಾವರಣ ಕಂಡುಬಂದಿದ್ದು, ಚಳಿ ತುಂಬಿತ್ತು. ಸಣ್ಣ ಮಳೆ ಮನೆಯಿಂದ ಹೊರ ಬರದಂತೆ ಮನೆ ಮಂದಿಯನ್ನು ಕಾಡಿತು. ದೇವಳಕ್ಕೆ ಬಂದಿದ್ದ ಭಕ್ತರು ಮತ್ತು ಸಂತೆಗೆ ಬಂದಿದ್ದ ಗ್ರಾಹಕರು ಕಾಯಿಪಲ್ಯ ಕೊಳ್ಳಲು ಪರದಾಡಿದರು. ಪಟ್ಟಣದಲ್ಲಿ ಸಂಜೆ ಮಳೆ ವಾಹನ ಸವಾರರಲ್ಲಿ ಮೈನಡುಕ ತಂದರೆ, ಅಲ್ಲಲ್ಲಿ ವಾಹನ ನಿಲ್ಲಿಸಿ ಸುರಕ್ಷಿತ ತಾಣಗಳಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT