ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಪ್ರಾಣಿಗಳಿಂದ 500 ಬಾಳೆಗಿಡ ನಾಶ

Published 9 ಮಾರ್ಚ್ 2024, 14:30 IST
Last Updated 9 ಮಾರ್ಚ್ 2024, 14:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಜಕ್ಕಳಿ ಗ್ರಾಮದ ಶೈಲೇಂದ್ರ ಎಂಬವರ ಬಾಳೆ ತೋಟಕ್ಕೆ ಕಾಡು ಪ್ರಾಣಿಗಳು ನುಗ್ಗಿ ಒಂದು ಎಕರೆ ಜಾಗದ ಬಾಳೆ ಸಸಿಗಳನ್ನು ನಾಶ ಮಾಡಿವೆ.

 ನಾಲ್ಕು ಎಕರೆ ಜಮೀನಿನಲ್ಲಿ ಬಾಳೆ ಗಿಡಗಳನ್ನು ಹಾಕಿದ್ದಾರೆ. ಒಂದು ಎಕರೆ ಅಷ್ಟು ಬಾಳೆ ಗಿಡಗಳನ್ನು ಕಾಡು ಪ್ರಾಣಿಗಳು ತುಳಿದು ತಿಂದು ನಾಶ ಮಾಡಿದೆ. ಹಂದಿ ಮತ್ತಿತರ ಕಾಡು ಪ್ರಾಣಿಗಳ ಧಾಳಿ ಇರಬಹುದು. ಶುಕ್ರವಾರ ಜಮೀನಿಗೆ ಹೋಗಿ ಬಾಳೆ ಗಿಡಗಳಿಗೆ ನೀರು ಹಾಕಿ ಮನೆಗೆ ಬಂದಿದ್ದೆ, ಬೆಳಿಗ್ಗೆ ಹೋಗಿ ನೋಡಿದಾಗ  500ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಲ್ಕೈದು ಕಾಡು ಪ್ರಾಣಿಗಳು ತುಳಿದು ತಿಂದು ಹಾಳು ಮಾಡಿವೆ ಎಂದು ಮಾಲೀಕ ಶೈಲೇಂದ್ರ ತಿಳಿಸಿದರು.

ಪ್ರತಿ ವರ್ಷವೂ ಕಾಡು ಪ್ರಾಣಿಗಳು ಬಾಳೆ ಬೆಳೆಯನ್ನು ನಾಶ ಮಾಡುತ್ತಿವೆ. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ  ಕ್ರಮ ಕೈಗೊಂಡಿಲ್ಲ. ನಾವು ಕಾಡುಪ್ರಾಣಿಗಳಿಗೆ ಹಲ್ಲೆ ಮಾಡಿದರೆ ನಮ್ಮ ವಿರುದ್ಧ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳುತ್ತಾರೆ ಆದರೆ ಈಗ ನಮ್ಮ ಫಸಲಿಗೆ ಕಾಡುಪ್ರಾಣಿಗಳು ಬಂದು ಹಾಳು ಮಾಡಿವೆ.  ಸಾಲ ಮಾಡಿ  ಬಾಳೆ ಬೆಳೆಯುತ್ತೇವೆ.  ಸೂಕ್ತ ಪರಿಹಾರ ನೀಡಬೇಕು’ ಎಂದು ಶೈಲೇಂದ್ರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT