ಮಹದೇಶ್ವರ ಬೆಟ್ಟ: ಮಲೆ ಮಾದಪ್ಪನ ಸನ್ನಿಧಿಯಲ್ಲಿರುವ ಕಲ್ಯಾಣಿ ಕೊಳದ ನಿರ್ವಹಣೆ ಮಾಡದ ಪರಿಣಾಮ ಭಕ್ತರು ಜಾರಿಬಿದ್ದು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ.

ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿರುವ ಮಲೆ ಮಹದೇಶ್ವರನ ಬೆಟ್ಟಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆಯುತ್ತಾರೆ. ಉತ್ಸವ, ಅಮಾವಾಸ್ಯೆ, ಜಾತ್ರಾ ಮಹೋತ್ಸವಗಳಲ್ಲಿ ಭಕ್ತ ಸಾಗರವೇ ಬರುತ್ತದೆ. ಹೀಗೆ ಕ್ಷೇತ್ರಕ್ಕೆ ಬಂದವರಿಗೆ ಶುಚಿಯಾಗಲು ಸ್ನಾನಘಟ್ಟಗಳ ಕೊರತೆ ಇರುವುದರಿಂದ ಭಕ್ತರು ಅಂತರಗಂಗೆಯಲ್ಲಿರುವ ಕಲ್ಯಾಣಿ ಕೊಳದಲ್ಲಿ ಸ್ನಾನ ಮಾಡುತ್ತಾರೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಿಂದೇಳುವುದರಿಂದ ಹಾಗೂ ಕಲ್ಯಾಣಿಯೊಳಗೆ ಭಕ್ತರು ಬಿಸಾಡುವ ನಿರುಪಯುಕ್ತ ವಸ್ತುಗಳಿಂದ ಅನೈರ್ಮಲ್ಯ ಉಂಟಾಗಿ ಕ್ರಮೇಣ ಕೊಳೆತು ಕಲ್ಯಾಣಿಯ ಮೆಟ್ಟಿಲುಗಳಲ್ಲಿ ಪಾಚಿ ಕಟ್ಟುತ್ತಿದೆ. ಇದನ್ನು ಗಮನಿಸಿದ ಭಕ್ತರು ಪಾಚಿಯ ಮೇಲೆ ಕಾಲಿಟ್ಟು ಜಾರಿ ಕಲ್ಯಾಣಿ ಕೊಳದೊಳಗೆ ಬೀಳುತ್ತಿದ್ದಾರೆ.

‘ನಿಯಮಿತವಾಗಿ ಕಲ್ಯಾಣಿ ಕೊಳವನ್ನು ಶುಚಿಗೊಳಿಸದಿರುವುದು, ಪಾಚಿಯನ್ನು ತೆಗೆಯದಿರುವುದು ಸಮಸ್ಯೆಗೆ ಕಾರಣ ಎಂದು ದೂರುತ್ತಾರೆ ಭಕ್ತರು. ಪ್ರತಿದಿನ ಕಲ್ಯಾಣಿಯಲ್ಲಿ ಬಿದ್ದು ಭಕ್ತರು ಗಾಯ ಮಾಡಿಕೊಳ್ಳುತ್ತಿದ್ದಾರೆ. ಕೈಕಾಲು, ತಲೆಗೆ ಗಂಭೀರ ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಆಸ್ಪತ್ರೆ ಸೇರಬೇಕಾಗಿದೆ’ ಎಂದು ಭಕ್ತ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

‘ಕೆಆರ್ ನಗರದಿಂದ ಬಂದಿದ್ದ ವಿಜಯ್ ಎಂಬುವರು ಶುಕ್ರವಾರ ಮುಡಿ ಕೊಟ್ಟು ಸ್ನಾನ ಮಾಡಲು ಕಲ್ಯಾಣಿಕೊಳಕ್ಕೆ ಇಳಿಯುವಾಗ ಕಾಲು ಜಾರಿಬಿದ್ದು ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೇರೊಂದು ಆಸ್ಪತ್ರೆಗೆ ತೆರಳುವಂತೆ ಸೂಚಿಸಲಾಗಿದೆ’ ಎಂದು ಆಸ್ಪತ್ರೆಯ ಆರೋಗ್ಯ ಮಹಿಳಾ ಸಹಾಯಕಿ ತಿಳಿಸಿದ್ದಾರೆ.

ಘಟನೆ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಗಾಯಾಳು ವಿಜಯ್ ‘ಹಲವು ವರ್ಷಗಳಿಂದ ಮಾದೇಶ್ವರನ ದರ್ಶನಕ್ಕೆ ಬರುತಿದ್ದೇನೆ. ಈ ಬಾರಿಯೂ ಗುರುವಾರ ಸಂಜೆ ಕ್ಷೇತ್ರಕ್ಕೆ ಬಂದು ಶುಕ್ರವಾರ ಬೆಳಿಗ್ಗೆ ಮುಡಿ ತೆಗೆಸಿ ಸ್ನಾನ ಮಾಡಲು ಹೋದಾಗ ಪಾಚಿ ಕಟ್ಟಿದ್ದ ಮೆಟ್ಟಿಲು ಮೇಲೆ ಕಾಲಿಡುತ್ತಿದ್ದಂತೆ ಜಾರಿ ಬಿದ್ದು ತಲೆಗೆ ಪೆಟ್ಟು ಬಿದ್ದಿದೆ’ ಎಂದರು.

ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಭಕ್ತರಿಗೆ ಮೂಲಸೌಲಭ್ಯ ಕಲ್ಪಿಸಬೇಕು. ದೇವರ ಬಳಿ ಕಷ್ಟ ಹೇಳಿಕೊಳ್ಳಲು ಬರುವ ಭಕ್ತರೇ ಕ್ಷೇತ್ರದಲ್ಲಿ ಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಲ್ಯಾಣಿ ಕೊಳದಲ್ಲಿ ನೀರು ಹಸಿರು ಪಾಚಿಯಿಂದ ಕೂಡಿದ್ದು ಸ್ನಾನ ಮಾಡಲು ಯೋಗ್ಯವಿಲ್ಲದಂತಾಗಿದೆ. ಪಾಪ ಕಳೆದುಕೊಳ್ಳಲು ಕೊಳದಲ್ಲಿ ಮೀಯಲು ಬರುವ ಭಕ್ತರಿಗೆ ಅನಾರೋಗ್ಯ ಬರುವ ಆತಂಕ ಎದುರಾಗಿದೆ. ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕು’ ಎಂದು ಭಕ್ತರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.