ಮುಂಬೈ: ಆರಂಭ ಆಟಗಾರ ಆಯುಷ್ ಜೇಥ್ವಾ ಜೊತೆಗೆ ಮನನ್ ಭಟ್ ಮತ್ತು ಅಭಿಜ್ಞಾನ್ ಕುಂಡು ಅವರ ಭರ್ಜರಿ ಶತಕಗಳ ನೆರವಿನಿಂದ ಮುಂಬೈ ತಂಡ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮೂರನೇ ದಿನವಾದ ಸೋಮವಾರ ಆಟ ಕೊನೆಗೊಂಡಾಗ 7 ವಿಕೆಟ್ಗೆ 616 ರನ್ ಗಳಿಸಿದೆ. ಆ ಮೂಲಕ 376 ರನ್ಗಳ ಭಾರಿ ಮುನ್ನಡೆ ಪಡೆದಿದೆ.

ಇದರೊಂದಿಗೆ ಪಂದ್ಯ ಕರ್ನಾಟಕದ ಕೈಎಟಕಿನಿಂದ ದೂರವಾಯಿತು. ಮಂಗಳವಾರ ಪಂದ್ಯದ ಕೊನೆಯ ದಿನವಾಗಿದ್ದು, ಕರ್ನಾಟಕ ತಂಡ ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗುವುದೇ ಎಂಬುದಷ್ಟೇ ಕುತೂಹಲದ ವಿಷಯ.

ಭಾನುವಾರ 1 ವಿಕೆಟ್ಗೆ 310 ರನ್ಗಳೊಡನೆ ಆಟ ಮುಂದುವರಿಸಿದ ಮುಂಬೈ ತಂಡದ ಮೊತ್ತವನ್ನು ಆಯುಷ್ (151, 353 ಎಸೆತ, 4x20, 6x1), ಮನನ್ (120, 238 ಎಸೆತ, 4x15, 6x1) ಮತ್ತು ಅಂತರರಾಷ್ಟ್ರೀಯ ಆಟಗಾರ ಅಭಿಜ್ಞಾನ್ (159, 214ಎಸೆತ, 4x17, 6x5) ಏರಿಸುತ್ತ ಹೋದರು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಕರ್ನಾಟಕ: 78.5 ಓವರುಗಳಲ್ಲಿ 240; ಮುಂಬೈ 187 ಓವರುಗಳಲ್ಲಿ 7 ವಿಕೆಟ್ಗೆ 617 (ಆಯುಷ್ ಜೇಥ್ವಾ 151, ಮನನ್ ಭಟ್ 120, ಅಭಿಜ್ಞಾನ್ ಕುಂಡು 159; ಸಮಿತ್ ದ್ರಾವಿಡ್ 71ಕ್ಕೆ2, ಅನೀಶ್ವರ ಗೌತಮ್ 12ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.