ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಮಾದಪ್ಪನ ಸನ್ನಿಧಿಯಲ್ಲಿ ರುದ್ರಾಕ್ಷಿ ವಾಹನ

Published 23 ನವೆಂಬರ್ 2023, 14:46 IST
Last Updated 23 ನವೆಂಬರ್ 2023, 14:46 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರನ ಭಕ್ತರೊಬ್ಬರು ರುದ್ರಾಕ್ಷಿ ವಾಹನವನ್ನು ನಿರ್ಮಾಣ ಮಾಡಿ ಕೊಡುಗೆಯಾಗಿ ನೀಡಿದ್ದುರ್, ಇಂದು ಮಾದಪ್ಪನ ಸನ್ನಿಧಿಗೆ ನೂತನ ರುದ್ರಾಕ್ಷಿ ವಾಹನ ಬಂದು ನಿಂತಿತು.

 ಬೆಟ್ಟಕ್ಕೆ ವೈದ್ಯ ಭಕ್ತರಿಂದ ಕೊಡುಗೆ ಬಂದ ವಾಹನವನ್ನು, ಟಿ.ನರಸೀಪುರ ತಾಲ್ಲೂಕಿನ ಸೋಸಲೆ ಹೋಬಳಿಯ ವ್ಯಾಸ ರಾಜಪುರ (ಕೆಬ್ಬೆ)ಯಲ್ಲಿ ಸುಸ್ಥಿರವಾಗಿ ಮಂಜುನಾಥ ಸ್ವಾಮಿ ಜನರಲ್ ಎಂಜಿನಿಯರಿಂಗ್ ವರ್ಕ್ಸ್‌‌‌ನಲ್ಲಿ ತಯಾರಿಸಲಾಗಿದೆ.

ಈ ನೂತನ ವಾಹನ ತಯಾರಿಕೆಯಲ್ಲಿ ಬನ್ನಿ ಮರ, ಮತ್ತಿ ಮರ, ಹೊನ್ನೆ ಮರ, ಬಾಗೇಮರ ಹಾಗೂ ತೇಗಿನ ಮರ ಸೇರಿ ಐದು ಜಾತಿ ಮರ ಬಳಕೆ ಮಾಡಿ 15.5 ಅಡ್ಡಿ ಎತ್ತರ, 9.4 ಹಾಗೂ 6.3 ಸುತ್ತಳತೆ ಇದೆ. ಈ ಹುಲಿವಾಹನವನ್ನು ಶಿಲ್ಪಿಗಳಾದ ಎಸ್.ಸಿದ್ದರಾಜು, ಕೆ.ಸ್ವಾಮಿ ಆಚಾರ್, ಸಿ.ರಾಜು, ಟಿ.ಎಸ್.ಪ್ರಕಾಶ್, ಎಸ್.ಮಂಜುನಾಥ್ ಬಿ ಅವರು ಸುಮಾರು ತಿಂಗಳು ಕಾಲ ಭಕ್ತಿಯಿಂದ ಸುಂದರ ಕಲಾ ಕೃತಿಗಳ ಕೆತ್ತನೆ ಮಾಡಿ ಪೂರ್ಣಗೊಳಿಸಿದರು.

 ಸೇವಾಕರ್ತರಾದ ಮಾದಪ್ಪನಿಗೆ ವೈದ್ಯರ ಕುಟುಂಬ ವರ್ಗ, ಮಹದೇಶ್ವರ ನರ್ಸಿಂಗ್ ಹೂಂ ಮೈಸೂರು  ಹರಕೆ ರೂಪದಲ್ಲಿ ಕೊಡುಗೆ ನೀಡಿದರು.

ಈ ವಾಹನವನ್ನು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾದಿಕಾರಕ್ಕೆ ಸೋಸಲೆಯ ಕೆಬ್ಬೆಯಲ್ಲಿ ವಿಶೇಷ ಪೂಜೆ ಮಾಡಿ ಬುಧವಾರ ಮಾದಪ್ಪ ದೇವಾಲಯಕ್ಕೆ ಹಸ್ತಾಂತರಿಸಲಾಗಿದ್ದು, ಬುಧವಾರ ರಾತ್ರಿ ದೇವಾಲಯದ ವಾಹನದಲ್ಲಿ ಈ ರುದ್ರಾಕ್ಷಿ ವಾಹನ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT