ಯಳಂದೂರು: ತಾಲ್ಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಸೋಮವಾರ ಸಾಮಾಜಿಕ ಲೆಕ್ಕ ತಪಾಸಣಾ ಕಾರ್ಯಕ್ರಮ ಅಧ್ಯಕ್ಷ ಮಲ್ಲೇಶ್ ನೇತೃತ್ವದಲ್ಲಿ ನಡೆಯಿತು.
ಪಿಡಿಒ ಉಷಾ ಮಾತನಾಡಿ, ‘2024- 25ನೇ ಸಾಲಿನ 15ನೇ ಹಣಕಾಸು ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 164 ಕಾಮಗಾರಿ ನಡೆದಿದೆ. ಗ್ರಾ.ಪಂ 151 ಕಾಮಗಾರಿ, ಪಿಆರ್‌ಎಲ್‌ಇಡಿ 13, ಅರಣ್ಯ ಇಲಾಖೆ 1 ಕಾಮಗಾರಿ ಪೂರೈಸಿದ್ದು ಒಟ್ಟು ₹45 ಲಕ್ಷ ವೆಚ್ಚ ಬಳಕೆಯಾಗಿದೆ’ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷೆ ಮುಬಾರಕ್ ಉನ್ನಿಸಾ, ನೋಡಲ್ ಅಧಿಕಾರಿ ಸುಮಲತಾ, ಲೆಕ್ಕ ಪರಿಶೋಧಕ ಪ್ರಸನ್ನ, ಸದಸ್ಯರಾದ ವರದರಾಜ್, ಲಕ್ಷ್ಮಿಪತಿ, ಲಕ್ಷ್ಮಿ ರಾಮು, ರತ್ನಮ್ಮ, ಸುವರ್ಣ, ಇಂದ್ರಮ್ಮ, ರಾಜೇಶ್ವರಿ ಇದ್ದರು.