ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌: ಮಾಂಸದ ಬೆಲೆ ಹೆಚ್ಚಳ

ತರಕಾರಿ ಧಾರಣೆ ಯಥಾಸ್ಥಿತಿ, ಹೂವಿಗೆ ಹೆಚ್ಚಿದ ಬೇಡಿಕೆ
Last Updated 26 ಮೇ 2020, 1:26 IST
ಅಕ್ಷರ ಗಾತ್ರ

ಚಾಮರಾಜನಗರ: ಈದ್ ಉಲ್ ಫಿತ್ರ್ ಹಬ್ಬದ ಕಾರಣಕ್ಕೆ ಮಾಂಸದ ಮಾರುಕಟ್ಟೆಯಲ್ಲಿ ಚಿಕನ್, ಮಟನ್ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ.

ತರಕಾರಿಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಹೂವುಗಳ ಪೈಕಿ ಮಲ್ಲಿಗೆ ಸ್ವಲ್ಪ ತುಟ್ಟಿಯಾಗಿದೆ.

ಲಾಕ್‌ಡೌನ್‌ ಸಡಿಲಿಕೆಗೊಂಡ ನಂತರ ಮಾಂಸಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಚಿಕನ್‌ ಬೆಲೆ ಹೆಚ್ಚಳವಾಗಿತ್ತು. ಈದ್‌ ಹಬ್ಬದ ಸಂದರ್ಭದಲ್ಲಿ ಮಟನ್‌ಗೂ ಬೇಡಿಕೆ ಇರುವುರಿಂದ ಅದರ ಬೆಲೆಯೂ ಕೆಜಿಗೆ ₹30ರಿಂದ ₹50ರವೆಗೆ ಹೆಚ್ಚಾಗಿದೆ.

ಚಾಮರಾಜನಗರದಲ್ಲಿ ಸೋಮವಾರ ಕೆಜಿ ಚಿಕನ್‌ಗೆ ₹200ರಿಂದ ₹230ರವರೆಗೂ ಬೆಲೆಯಿತ್ತು. ಮಟನ್‌ಗೆ ₹600ರಿಂದ ₹640ವರೆಗೆ ಇತ್ತು. ಕೆಲವು ಅಂಗಡಿಗಳಲ್ಲಿ ₹660 ಎಂಬ ಫಲಕವೂ ನೇತಾಡುತ್ತಿತ್ತು.

ಮೊಟ್ಟೆಯ ಧಾರಣೆಯಲ್ಲಿ ಈ ವಾರ ವ್ಯತ್ಯಾಸವಾಗಿಲ್ಲ. ಸಗಟು ಮಾರುಕಟ್ಟೆಯಲ್ಲಿ 100 ಮೊಟ್ಟೆಗೆ ₹364 ಇದೆ. ಕಳೆದವಾರವೂ ಇಷ್ಟೇ ಇತ್ತು. ಬೇಡಿಕೆಗೆ ಅನುಗುಣವಾಗಿ ದರದಲ್ಲಿ ಬದಲಾವಣೆ ಆಗುತ್ತದೆ ಎಂದು ಹೇಳುತ್ತಾರೆ ವ್ಯಾಪಾರಿಗಳು‌.

ತರಕಾರಿ ಮಾರುಕಟ್ಟೆಯಲ್ಲಿ ಹಿಂದಿನ ದರವೇ ಮುಂದುವರಿದಿದೆ.

‘ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು ಲಭ್ಯವಿವೆ. ಹಾಗಾಗಿ, ಯಾವ ತರಕಾರಿಯ ಬೆಲೆಯೂ ಹೆಚ್ಚಾಗಿಲ್ಲ. ಎರಡು ಮೂರು ವಾರಗಳಿಂದ ಬೆಲೆ ಒಂದೇ ರೀತಿಯಲ್ಲಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು

ಬಹುತೇಕ ಹಣ್ಣುಗಳ ಬೆಲೆಯಲ್ಲೂ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಮಾವಿನ ಹಣ್ಣುಗಳಿಗೆ ಬೇಡಿಕೆ ಇದ್ದರೂ, ಬೆಲೆ ₹70 ಒಳಗಡೆಯೇ ಇದೆ. ಬಾದಾಮಿ, ರಸಪುರಿ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ.

ಚೇತರಿಸಿದ ಪುಷ್ಪೋದ್ಯಮ

ಲಾಕ್‌ಡೌನ್‌ನ ಅವಧಿಯಲ್ಲಿ ತೀರ ಸಂಕಷ್ಟಕ್ಕೆ ಸಿಲುಕಿದ್ದ ಹೂವಿನ ಉದ್ಯಮ ಈಗ ಚೇತರಿಸುತ್ತಿದೆ. ವಾರದಿಂದ ವಾರಕ್ಕೆ ಹೂವುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಧಾರಣೆಯೂ ಏರುಗತಿಯಲ್ಲಿ ಸಾಗಿದೆ.

ಈದ್‌ ಹಬ್ಬದ ಕಾರಣಕ್ಕೆ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿ ಮಲ್ಲಿಗೆಯ ಬೆಲೆ ₹100 ಏರಿಕೆಯಾಗಿದೆ. ಕಳೆದವಾರ ಕೆಜಿ ಮಲ್ಲಿಗೆಗೆ ₹100 ಇತ್ತು. ಈ ವಾರ ₹200 ಆಗಿದೆ. ಸುಗಂಧ ರಾಜ ಬೆಲೆ ₹10 ಇಳಿದಿದೆ.

‘ನಮ್ಮ ಪರಿಸ್ಥಿತಿ ಸುಧಾರಿಸುತ್ತಿದೆ. ಹೂವುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ವಾರ ಮಲ್ಲಿಗೆಗೆ ಹೆಚ್ಚು ಗ್ರಾಹಕರಿದ್ದಾರೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT