ಸೋಮವಾರ, ಜನವರಿ 27, 2020
23 °C
ಚಾಮುಲ್‌: ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ

ಹಾಲು ಉತ್ಪಾದಕರಿಗೆ ₹ 1.50 ಪ್ರೋತ್ಸಾಹಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿ ಲೀಟರ್‌ ಹಾಲಿಗೆ ₹ 1.5 ಪ್ರೋತ್ಸಾಹಧನ ನೀಡಲು ಜಿಲ್ಲಾ ಹಾಲು ಒಕ್ಕೂಟ (ಚಾಮುಲ್‌) ನಿರ್ಧರಿಸಿದೆ. ಹೊಸ ದರ ಬುಧವಾರದಿಂದಲೇ (ಜ.1) ಜಾರಿಗೆ ಬಂದಿದೆ. 

‘27ರಂದು ನಡೆದಿದ್ದ ಚಾಮುಲ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಹಾಲಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಜಿಲ್ಲೆಯಲ್ಲಿ 40 ಸಾವಿರ ಹಾಲು ಉತ್ಪಾದಕರಿದ್ದು, ಸದ್ಯ ಪ್ರತಿ ದಿನ 2.15 ಲಕ್ಷ ಲೀಟರ್‌ ಸಂಗ್ರಹವಾಗುತ್ತಿದೆ. 

3.5ಕ್ಕಿಂತ ಹೆಚ್ಚಿನ ಜಿಡ್ಡು (ಫ್ಯಾಟ್‌) ಅಂಶ ಹಾಗೂ 8.5ಕ್ಕಿಂತ ಹೆಚ್ಚು ಎನ್‌ಎನ್‌ಎಫ್‌ ಹೊಂದಿರುವ ಲೀಟರ್‌ ಹಾಲಿಗೆ, ಉತ್ಪಾದಕರಿಗೆ ಕನಿಷ್ಠ ₹ 25.50 (ಹಿಂದಿನ ದರ ₹ 24) ನೀಡಲು ಚಾಮುಲ್‌ ನಿರ್ಧರಿಸಿದೆ. ಹಾಲು ಉತ್ಪಾದಕ ಸಂಘಗಳಿಗೆ ಒಂದು ಲೀಟರ್‌ಗೆ ₹ 27.15 ಪಾವತಿಸಲು ತೀರ್ಮಾನಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು