‘ನೀರಾವರಿ ರಸ್ತೆ ಅಭಿವೃದ್ಧಿಗೆ ಪ್ರಸ್ತಾವ’
ಕ್ಷೇತ್ರದಲ್ಲಿ ಗುಂಡಾಲ್ ಹುಬ್ಬೆ ಹುಣಸೆ ರಾಮನಗುಡ್ಡ ಹೂಗ್ಯಂ ಡ್ಯಾಂ ಉಡುತರೆ ಕಿರೆಪಾತೆ ಕೌಳಿಕಟ್ಟೆ ಡ್ಯಾಂ ಗೋಪಿನಾಥಂ ಡ್ಯಾಂ ಸೇರಿದಂತೆ ಒಟ್ಟು 8 ಅಣೆಕಟ್ಟೆಗಳಿದೆ. ಇವೆಲ್ಲದಕ್ಕೂ ನೀರು ತುಂಬಿಸುವ ಸಂದರ್ಭ ಒದಗಿದೆ. ಮುಚ್ಚಿ ಹೋಗಿರುವ ತೋಡು ಕಾಲುವೆ ಮುಖ್ಯ ಕಾಲುವೆ ದುರಸ್ತಿ ಪೈಪ್‍ಲೈನ್‍ಗಳು ಜತೆಗೆ ಸತ್ತೇಗಾಲದಿಂದ ಮಾರ್ಟಳ್ಳಿ ಕಿರೆಪಾತೆ ವರೆಗಿನ 20ಕೆರೆಗಳಿಗೆ ನೀರು ತುಂಬಿಸುವುದು. ₹200 ಕೋಟಿ ವೆಚ್ಚದಲ್ಲಿ ಉಡುತೊರೆ ಹಳ್ಳಕ್ಕೆ ನೀರು ತುಂಬಿಸುವ ಯೋಜನೆ ₹12 ಕೋಟಿ ಅನುದಾನದಲ್ಲಿ ಹೂಗ್ಯಂ ಡ್ಯಾಂ ಅಭಿವೃದ್ಧಿ ಪಾರ್ಕ್ ನಿರ್ಮಾಣ ಹಾಗೂ ಚೆಕ್ ಡ್ಯಾಂ ನಿರ್ಮಾಣ ಅಭಿವೃದ್ಧಿಗೆ ಒಟ್ಟು ₹1440 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಿದ್ದೇನೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಹಣ ಬಿಡುಗಡೆಯಾದರೆ ₹40 ಸಾವಿರ ಎಕರೆ ಕೃಷಿ ಪ್ರದೇಶಕ್ಕೆ ಸಮೃದ್ಧವಾಗಿ ನೀರು ಸಿಗುತ್ತದೆ ಎಂದರು. ಗುಂಡಾಲ್ ರಸ್ತೆ ಮತ್ತೀಪುರ -ಕೊತ್ತನೂರು ರಸ್ತೆ ಲೊಕ್ಕನಹಳ್ಳಿ ರಸ್ತೆ ಅಭಿವೃದ್ಧಿಗೆ ₹80 ಕೋಟಿ ಅನುದಾನ ಬಿಡುಗಡೆಯಾಗಿದೆ ಫೆ.9 ರಂದು ಸಂಸದ ಸುನೀಲ್ ಬೋಸ್ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ₹200 ಕೋಟಿ ವೆಚ್ಚದಲ್ಲಿ ಹನೂರು-ಮಹದೇಶ್ವರ ಬೆಟ್ಟದ ಕೆಶಿಪ್ ರಸ್ತೆಗೆ ಪ್ರಸ್ತಾವ ಹನೂರಿನಲ್ಲಿ ಬಸ್ ಡಿಪೋ ನಿರ್ಮಾಣ ತಾಲ್ಲೂಕು ಆಸ್ಪತ್ರೆ ನಿರ್ಮಾಣ ಬೆಟ್ಟದಲ್ಲಿ ಅಗ್ನಿ ಶಾಮಕ ಠಾಣೆ ಮುಂತಾದವುಗಳ ಬಗ್ಗೆ ಚರ್ಚೆಯಾಗಲಿದೆ. ಕ್ಷೇತ್ರದ 32 ಹಾಡಿಗಳ ಪೈಕಿ 12 ಹಾಡಿಗಳಿಗೆ ಬೆಳಕಿರಲಿಲ್ಲ ಇದೀಗ ಈ ಕೆಲಸ ಆಗುತ್ತಿದೆ ಎಂದರು.