ಶುಕ್ರವಾರ, ಜುಲೈ 30, 2021
23 °C

ಚಾಮರಾಜನಗರದಲ್ಲಿ ಗುಂಡಿ ಬಿದ್ದ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹೊಂಡ ಗುಂಡಿಗಳಿಂದಾಗಿ ವಾಹನಗಳು ಸಂಚರಿಸಲು ಸಾಧ್ಯವಾಗದ ಸ್ಥಿತಿ ತಲುಪಿದ್ದ, ರಾಷ್ಟ್ರೀಯ ಹೆದ್ದಾರಿ 209ರ ಅಟ್ಟುಗೂಳಿಪುರದಿಂದ ಪುಣಜನೂರುವರೆಗಿನ ರಸ್ತೆಯನ್ನು ದುರಸ್ತಿ ಕೆಲಸ ಗುರುವಾರ ಆರಂಭವಾಗಿದೆ.  

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ ಮೂಲಕ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಆರಂಭಿಸಿದ್ದಾರೆ. 8 ರಿಂದ 12 ದಿನಗಳೊಳಗೆ ರಸ್ತೆಯನ್ನು ದುರಸ್ತಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಬುಧವಾರ ಹೇಳಿದ್ದರು. 

ಅಲ್ಲದೇ ಖುದ್ದಾಗಿ ರಸ್ತೆಯ ದುಃಸ್ಥಿತಿಯನ್ನೂ ಪರಿಶೀಲನೆ ನಡೆಸಿದ್ದರು. ತಕ್ಷಣವೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದ್ದರು. 

ಮಣ್ಣು ಹಾಕಿದರೆ ಸಾಲದು: ‘ಗುಂಡಿಗಳಿಗೆ ಮಣ್ಣು ಮುಚ್ಚುವುದರಿಂದ ಏನೂ ಪ್ರಯೋಜನವಾಗದು, ಮಳೆಗೆ ಮತ್ತೆ ಮೊದಲಿನ ಸ್ಥಿತಿಯೇ ಆಗಲಿದೆ. ಗುಂಡಿಗಳಿಗೆ ವ್ಯವಸ್ಥಿತವಾಗಿ ಜಲ್ಲಿ ಟಾರು ಹಾಕಿ ಮುಚ್ಚಬೇಕು’ ಎಂದು ಸಾರ್ವಜನಿಕರು, ವಾಹನಗಳ ಚಾಲಕರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.