ಚಾಮರಾಜನಗರ: ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ 36 ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಜುಲೈ 15ರಂದು ಚಾಮರಾಜನಗರ ಬಂದ್ ಮಾಡಲು ಆಕ್ಸಿಜನ್ ದುರಂತ ನ್ಯಾಯಕ್ಕಾಗಿ ಹೋರಾಟ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಕನ್ನಡಪರ, ಪ್ರಗತಿಪರ, ದಲಿತ ಸಂಘಟನೆಗಳ ಮುಖಂಡರ ಹಾಗೂ ಸಂತ್ರಸ್ತರನ್ನೊಳಗೊಂಡ ಸಭೆಯಲ್ಲಿ ಸರ್ವಾನುಮತದಿಂದ ಜಿಲ್ಲಾಕೇಂದ್ರವನ್ನು ಬಂದ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಮುಖಂಡ ಸಿ.ಎಂ.ಕೃಷ್ಣಮೂರ್ತಿ ‘ನ್ಯಾಯಕ್ಕಾಗಿ, ಸೂಕ್ತ ಪರಿಹಾರಕ್ಕಾಗಿ ನಾಲ್ಕು ವರ್ಷಗಳಿಂದ ಸಂತ್ರಸ್ತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ಇದುವರೆಗೂ ನೀಡಿರುವ ಭರವಸೆಗಳೆಲ್ಲ ಹುಸಿಯಾಗಿರುವ ಹಿನ್ನೆಲೆಯಲ್ಲಿ ಬಂದ್ ಮಾಡುವ ಮೂಲಕ ಬಿಸಿ ಮುಟ್ಟಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದರು.

‘ಜುಲೈ 3ರಂದು ಜಿಲ್ಲಾಡಳಿತ ಭವನದಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸಂತ್ರಸ್ತರಿಗೆ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡುವ ವಿಚಾರವಾಗಿ ಖಚಿತ ನಿರ್ಧಾರ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡುವ ಘೋಷಣೆ ಮಾಡಿಸಬೇಕು. ಇಲ್ಲವಾದರೆ ಚಾಮರಾಜನಗರ ಬಂದ್ ಮಾಡಿ ಜಿಲ್ಲೆಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಬಂದ್ಗೆ ಚಾಮರಾಜನಗರದ ವ್ಯಾಪಾರಿಗಳು, ಸರಕು ಸಾಗಣೆ ವಾಹನ ಮಾಲೀಕರು, ಆಟೊ, ಬಸ್ ಮಾಲೀಕರು, ಹೋಟೆಲ್, ರೆಸ್ಟೋರೆಂಟ್, ಶಾಲಾ ಕಾಲೇಜು, ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಬೆಂಬಲ ನೀಡಬೇಕು. ಸಂತ್ರಸ್ತರ ಪರವಾದ ಹೋರಾಟಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಎಸ್ಡಿಪಿಐ ರಾಜ್ಯ ಸಮಿತಿ ಕಾರ್ಯದರ್ಶಿ ಅಬ್ರಾರ್ ಅಹಮದ್ ಮಾತನಾಡಿ, ‘ಸಂತ್ರಸ್ತರಿಗೆ ನ್ಯಾಯ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಚಾಮರಾಜನಗರ ಬಂದ್ಗೆ ಎಸ್ಡಿಪಿಐ ಪಕ್ಷ ಹಾಗೂ ಜಿಲ್ಲಾ ಮುಸ್ಲಿಂ ಒಕ್ಕೂಟ ಕೂಡ ಬೆಂಬಲಿಸುವ ನಿರ್ಧಾರ ಮಾಡಿದ್ದು ಯಶಸ್ವಿಯಾಗಲಿದೆ’ ಎಂದರು.

ಬಂದ್ ಪೂರ್ವಭಾವಿಯಾಗಿ ಸಂಘಟನೆಗಳ ನಾಯಕರು, ಸಂತ್ರಸ್ತರು ಜೊತೆಯಾಗಿ ನಗರದ ವಾಣಿಜ್ಯ ಉದ್ಯಮಿಗಳು, ಸಣ್ಣ ವ್ಯಾಪಾರಿಗಳು, ಆಟೊ, ಲಾರಿ ಚಾಲಕರನ್ನು ಭೇಟಿಯಾಗಿ ಬಂದ್ಗೆ ಸಹಕಾರ ಕೋರಬೇಕು ಎಂದು ಸಲಹೆ ನೀಡಿದರು.

ಅರಕಲವಾಡಿ ನಾಗೇಂದ್ರ ಮಾತನಾಡಿ, ‘ಬಂದ್ ನೇತೃತ್ವವನ್ನು ಸಂತ್ರಸ್ತರೇ ವಹಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಕ್ಷೇತ್ರದ ಶಾಸಕರು, ಸಂಸದರನ್ನು ಪ್ರಶ್ನೆ ಮಾಡಬೇಕು. ಜಿಲ್ಲಾಡಳಿತ ದ್ವಾರವನ್ನು ಬಂದ್ ಮಾಡಿ ಆಡಳಿತ ವರ್ಗಕ್ಕೆ ಎಚ್ಚರಿಕೆ ನೀಡಬೇಕು’ ಎಂದು ಅಭಿಪ್ರಾಯಪಟ್ಟರು.

ಮುಖಂಡರಾದ ದೊಡ್ಡಿಂದುವಾಡಿ ಸಿದ್ದರಾಜು, ನಮ್ಮನೆ ಪ್ರಶಾಂತ್ ಮಾತನಾಡಿ ‘ದುರಂತದಲ್ಲಿ ಮೃತಪಟ್ಟ 36 ಕುಟುಂಬಗಳ ಸದಸ್ಯರು ಹೋರಾಟದಲ್ಲಿ ಭಾಗವಹಿಸಿದರೆ ಮಾತ್ರ ಬಂದ್ ಯಶಸ್ವಿಯಾಗುತ್ತದೆ’ ಎಂದು ಸಲಹೆ ನೀಡಿದರು.

ದುರಂತ ಸಂಭವಿಸಿ ನಾಲ್ಕು ವರ್ಷ ಕಳೆದರೂ ಸಿಗದ ನ್ಯಾಯ ಕಪ್ಪುಬಾವುಟ ಪ್ರದರ್ಶನ: ಹೋರಾಟಗಾರರ ಸಲಹೆ ಸಂತ್ರಸ್ತರ ನೇತೃತ್ವದಲ್ಲಿ ಬಂದ್ ಮಾಡಲು ನಿರ್ಧಾರ

ಸರ್ಕಾರದ ಭರವಸೆ ಹುಸಿಯಾಗಿದ್ದು ಬಂದ್ ಅನಿವಾರ್ಯ. ಸಂತ್ರಸ್ತರು ಹೋರಾಟದ ಮುಂಚೂಣಿಯಲ್ಲಿರಬೇಕು
ನಿಜಧ್ವನಿ ಗೋವಿಂದರಾಜು ಕನ್ನಡಪರ ಸಂಘಟನೆಗಳ ಹೋರಾಟಗಾರ

ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ

ಆಕ್ಸಿಜನ್ ದುರಂತ ಪ್ರಕರಣದಲ್ಲಿ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ದುರಂತ ಸಂಬಂಧ ರಚಿಸಲಾಗಿದ್ದ ಆಯೋಗಗಳು ಸಲ್ಲಿರುವ ವರದಿಗಳನ್ನು ಬಹಿರಂಗಗೊಳಿಸದೆ ಮುಚ್ಚಿಡಲಾಗಿದ್ದು ಈ ಸಂಬಂಧ ಕಾನೂನು ಹೋರಾಟ ಮಾಡಬೇಕಾದ ಅಗತ್ಯವಿದೆ. ಅದಕ್ಕೂ ಮುನ್ನ ಜಿಲ್ಲೆಯ ಎಲ್ಲ ಶಾಸಕರು ಸಚಿವರು ಸಂಸದರನ್ನು ಭೇಟಿಯಾಗಿ ಮನವಿ ಸಲ್ಲಿಸೋಣ ಅಹಿಂಸಾತ್ಮಕವಾಗಿ ಹೋರಾಟ ರೂಪಿಸೋಣ ಎಂದು ಹೋರಾಟಗಾರ ಪುಣಜನೂರು ದೊರೆಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.