ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು | ಪಡಿತರ ಪಡೆಯಲು ಕಾದು ಸುಸ್ತಾದ ಜನ: ಆಕ್ರೋಶ

Published 30 ಜೂನ್ 2024, 14:28 IST
Last Updated 30 ಜೂನ್ 2024, 14:28 IST
ಅಕ್ಷರ ಗಾತ್ರ

ಯಳಂದೂರು: ಮದ್ದೂರು ಗ್ರಾಮದ ನ್ಯಾಯ ಬೆಲೆ ಅಂಗಡಿ ಸಕಾಲದಲ್ಲಿ ತೆರೆಯದೆ ಜನರು ಪಡಿತರ ಪಡೆಯಲು ಗಂಟಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ಭಾನುವಾರ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.

‘ಸಮಯಕ್ಕೆ ಸರಿಯಾಗಿ ನ್ಯಾಯಬೆಲೆ ಅಂಗಡಿ ಬಾಗಿಲು ತೆರೆಯುತ್ತಿಲ್ಲ.  ಜನರು ಪಡಿತರ ಪಡೆಯಲು ಗಂಟಗಟ್ಟಲೆ  ಕಾಯಬೇಕಿದೆ.   ವೃದ್ಧರು ಮತ್ತು ಮಹಿಳೆಯರು ಪರಿತಪಿಸಬೇಕಿದೆ’ ಎಂದು ಆಲ್ಕೆರೆ ಅಗ್ರಹಾರ ಗ್ರಾಮದ ಶಿವಣ್ಣನಾಯಕ ಹೇಳಿದರು.

ವರ್ಷಪೂರ್ತಿ ಇದೇ ಸಮಸ್ಯೆ ಇದೆ. ಆಹಾರಧಾನ್ಯ ಪಡೆಯಲು ಅಂಗಡಿ ಮುಂದೆ ನಿಲ್ಲಬೇಕಿದೆ. ಮಾಲೀಕರಿಗೆ ಸಮಯ ಸಿಕ್ಕಾಗ ನ್ಯಾಯಬೆಲೆ ಅಂಗಡಿ ಬಾಗಿಲು ತೆಗೆಯುತ್ತಾರೆ. ಅವರಿಗೆ ಕೆಲಸ ಇದ್ದಾಗ ಅಂಗಡಿ ಮುಚ್ಚುತ್ತಾರೆ. ಹಾಗಾಗಿ, ಪಡಿತರ ನೀಡುವ ಸಮಯವನ್ನು ಪ್ರದರ್ಶನ ಫಲಕದಲ್ಲಿ ನಮೂದಿಸಿಸುವ ಕೆಲಸ ಆಗಬೇಕಿದೆ.  ಅಧಿಕಾರಿಗಳು ತುರ್ತು ಕ್ರಮಕೈಗೊಳ್ಳಬೇಕು ಎಂದು  ಮದ್ದೂರು ಚೇತನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT