ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನೂರು: ಮೆಕ್ಯಾನಿಕಲ್ಎಂಜಿನಿಯರ್‌ ಕೃಷಿ ಪ್ರೀತಿ

ಸಮಗ್ರ ಬೇಸಾಯದಲ್ಲಿ ತೆಂಗು, ಕಂಗು, ಬಾಳೆಯ ದರ್ಶನ
Last Updated 6 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಯಳಂದೂರು:ಹಿಡುವಳಿ ತುಂಬ ಹರಡಿದ ಕೆಂಪು ಮಣ್ಣು, ತಾಕಿನ ತುಂಬ ಹುಲ್ಲು, ಕಳೆ ಸಸ್ಯಗಳದ್ದೇ ದರ್ಬಾರು. ತೆಂಗು ಮತ್ತು ಕಂಗಿನ ಸಿಪ್ಪೆಗಳ ಹಾಸು, ಸದಾ ಜಿನುಗುವ ನೀರು... ಹೀಗಿದ್ದರೂ ಇವರು ಏಕ ಬೆಳೆ ಪದ್ಧತಿಯ ಸುಳಿಗೆ ಸಿಲುಕಿದವರಲ್ಲ. ಸ್ಥಳೀಯ ಸಂಪನ್ಮೂಲ ಬಳಸಿಕೊಂಡು, ಮಾರುಕಟ್ಟೆ ಸ್ಥಿತಿಗತಿಗೆ ಅನುಗುಣವಾಗಿ ಸಮಗ್ರ ಕೃಷಿಯಲ್ಲಿ ದೀರ್ಘಾವಧಿ ತೋಟಗಾರಿಕಾ ಬೆಳೆಗಳನ್ನು ಅಪ್ಪಿಕೊಂಡಿದ್ದಾರೆ.

- ಇದು ತಾಲ್ಲೂಕಿನ ಹೂನ್ನೂರು ಗ್ರಾಮದ ಸಾವಯವ ಕೃಷಿಕ ಪ್ರಸನ್ನ ಅವರ ಸಮಗ್ರ ಬೇಸಾಯದ ವಿವರ.

ಹೊನ್ನೂರು ಪ್ರಸನ್ನ ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ. ಕೈಹಿಡಿದಿದ್ದು ಮೇಟಿ ವಿದ್ಯೆ. ಕೃಷಿಯ ಮೇಲಿನ ಆಸೆಯಿಂದ ವಿದ್ಯಾಭ್ಯಾಸ ತೊರೆದರು. ಅದೇ ವೇಳೆ ಸಾವಯವ ಬೇಸಾಯ ಪಾಠವೇ ಇವರನ್ನು ಆಕರ್ಷಿಸಿತು. ಖರ್ಚು ಕಡಿಮೆ ಮಾಡಿ, ಜಮೀನಿನಲ್ಲಿ ಪ್ರಯೋಗಗಳನ್ನು ಮಾಡಿದರು. ಪ್ರಾಥಮಿಕ ಹಂತದಿಂದ ಸಮಗ್ರ ಬೇಸಾಯಕ್ಕೆ ತಮ್ಮನ್ನು ಒಡ್ಡಿಕೊಂಡರು. ಇದರ ಪರಿಣಾಮ ಈಗ ತೆಂಗು, ಅಡಿಕೆ, ಬಾಳೆ ಫಸಲು ಇವರ ತೋಟದಲ್ಲಿ ನಳನಳಿಸುತ್ತಿದ್ದು, ಫಸಲು ಕಟಾವಿಗೆ ಸಿದ್ಧವಾಗಿದೆ.

ಮಿಶ್ರಬೆಳೆ ವೈವಿಧ್ಯ: 9 ಎಕರೆ ಭೂಮಿ ಇದೆ. ೪ ಎಕರೆಯಲ್ಲಿ ತೆಂಗು, ಅಡಿಕೆ, ಬಾಳೆ ಬೆಳೆದಿದ್ದಾರೆ. 6x6 ಅಡಿ ಅಂತರದ ಸಾಲಿನಲ್ಲಿ 1000 ಅಡಿಕೆ ನಾಟಿ ಮಾಡಿದ್ದಾರೆ. ತಾಕಿನ ಸುತ್ತ ತೆಂಗಿನ ಗಿಡಗಳಿವೆ. ವರ್ಷಕ್ಕೆ ಒಮ್ಮೆ 1 ಎಕೆರೆಗೆ 10 ಟ್ರ್ಯಾಕ್ಟರ್ ಕುರಿಗೊಬ್ಬರ ಮತ್ತು ಕೋಳಿ ಹಿಕ್ಕೆಯನ್ನು ಸಮನಾಗಿ ಸೇರಿಸುತ್ತಾರೆ. ತೋಟದ ನಡುವೆ ಬೆಳೆಯುವ ಹುಲ್ಲುಕಳೆಗಿಡ ಹಾಗೂ ಏಕದಳ ಸಸಿಗಳನ್ನು ಮಣ್ಣಿನಲ್ಲಿ ಮಿಶ್ರ ಮಾಡುತ್ತಾರೆ.

‘ಇದರಿಂದ ಮರ, ಗಿಡಗಳು ಭೂಮಿಯಿಂದ ಸಾವಯವ ಸಾರಗಳನ್ನು ಹೀರಿಕೊಳ್ಳುತ್ತವೆ. ರಸಗೊಬ್ಬರದ ಮೇಲಿನ ಹೆಚ್ಚುವರಿ ಖರ್ಚನ್ನು ಉಳಿಸುತ್ತದೆ.
ಮಣ್ಣಿನಲ್ಲಿ ಹ್ಯೂಮಸ್ ಅಂಶವೂ ಹೆಚ್ಚಾಗುತ್ತದೆ’ ಎಂದು ಹೇಳುತ್ತಾರೆ ಪ್ರಸನ್ನ.

‘2 ಎಕರೆಯಲ್ಲಿ ನೇಂದ್ರ ಬಾಳೆಯನ್ನು ಆಧುನಿಕ ಕೃಷಿಗೆ ಒಳವಡಿಸಿದ್ದೇನೆ. ಇದರಲ್ಲಿ ಕೀಟನಾಶಕ ಮತ್ತು ರಸಗೊಬ್ಬರಕ್ಕೆ ಹೆಚ್ಚಿನ ಖರ್ಚು ಬೇಡುತ್ತದೆ. ಕೀಟಗಳ ಹಾವಳಿಯೂ ಹೆಚ್ಚು. ಹಲವು ವರ್ಷಗಳ ನಂತರ ಮಣ್ಣಿನ ಸವಕಳಿ ಹೆಚ್ಚಾಗಿ, ನೀರನ್ನು ಯಥೇಚ್ಛವಾಗಿ ಸೇರಿಸಬೇಕಿದೆ. ಹಾಗಾಗಿ, ಹೊಸದಾಗಿ ಸಾಗುವಳಿ ಮಾಡುವವರು ಆರಂಭದಲ್ಲಿ ಹಟ್ಟಿ ಗೊಬ್ಬರ, ಘನ ಜೀವಾಮೃತ, ಹಸಿರೆಲೆ ಗೊಬ್ಬರ ಬಳಸಿದರೆ ಕೆಲವೇ ವರ್ಷಗಳಲ್ಲಿ ಭೂಮಿ ಸಮೃದ್ಧ ಫಸಲು ನೀಡಲು ಸಿದ್ಧವಾಗುತ್ತದೆ. ಕಳೆ ಕತ್ತರಿಸಲು ಚಾಪ್ ಕಟರ್ ಹಾಗೂ ಉಳುಮೆಗೆ ಮಿನಿ ಟ್ರ್ಯಾಕ್ಟರ್ ಬಳಸಿದರೆ ಹೆಚ್ಚುವರಿ ವೆಚ್ಛವನ್ನು ತಗ್ಗಿಸಬಹುದು’ ಎನ್ನುವುದು ಅವರ ಅನುಭವದ ಮಾತು.

10 ಕ್ವಿಂಟಲ್‌ ಅಡಿಕೆ

ಪ್ರಸನ್ನ ಅವರು ಪ್ರತಿ ಅಡಿಕೆ ಮರಕ್ಕೂಹನಿನೀರಾವರಿವ್ಯವಸ್ಥೆ ಮಾಡಿದ್ದಾರೆ.ಸಂಗ್ರಹಿಸಿದ ಮಳೆ ನೀರನ್ನು ಕಾಲುವೆಮೂಲಕ ಹಾಯಿಸುತ್ತಾರೆ. ಅಡಿಕೆಸಿಪ್ಪೆ,ಕಡಲೆಹೊಟ್ಟು,ತರಗುಮಣ್ಣಿನ ತೇವಾಂಶದಲ್ಲಿಸದಾಕೊಳೆಯುವವ್ಯವಸ್ಥೆ ಮಾಡಿದ್ದಾರೆ.

‘ರೈತರು ಫಲವತ್ತಾದನೆಲದಲ್ಲಿವೃದ್ಧಿಸುವಅನುಪಯುಕ್ತಸಸ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಸಾಗುವಳಿಭೂಮಿಗೆಕಳೆನಾಶಕಸಿಂಪಡಿಸ ದಂತೆ ನೋಡಿಕೊಳ್ಳಬೇಕು’ ಎಂದು ಹೇಳುತ್ತಾರೆ ಪ್ರಸನ್ನ.

‘ಮೊದಲ ಸಲ 9 ಕ್ವಿಂಟಲ್‌ ಅಡಿಕೆ ಕೊಯ್ಲಾಗಿದೆ. ಕ್ವಿಂಟಲ್‌ಗೆ ₹55 ಸಾವಿರಕ್ಕೆ ಮಾರಾಟವಾಗಿದೆ. ಗುಣಮಟ್ಟದ ತೆಂಗಿಗೆ ಕೆಜಿಗೆ ₹24 ಬೆಲೆ ಸಿಕ್ಕಿದೆ. ಈ ಬಾರಿ ನೇಂದ್ರ ಬಾಳೆಗೂ ಉತ್ತಮ ಧಾರಣೆ ಇದೆ. ಮಾರುಕಟ್ಟೆಗೆ ಅನುಗುಣವಾಗಿ ನಾವು ಬೆಳೆ ಬೆಳೆಯಬೇಕು’ ಎಂದು ಸಲಹೆ ನೀಡುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT