ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಪ್ಪ ದಂಪತಿಗೆ ಮುತ್ತುರಾಜ್‌ ಪ್ರಶಸ್ತಿ

ಡಾ.ರಾಜ್‌ಕುಮಾರ್‌ ಜನ್ಮದಿನ, ಈಶ್ವರಿ ಟ್ರಸ್ಟ್‌ನಿಂದ ಕಾರ್ಯಕ್ರಮ
Published 25 ಏಪ್ರಿಲ್ 2024, 4:39 IST
Last Updated 25 ಏಪ್ರಿಲ್ 2024, 4:39 IST
ಅಕ್ಷರ ಗಾತ್ರ

ಚಾಮರಾಜನಗರ: ಡಾ.ರಾಜ್‌ಕುಮಾರ್ ಅವರು ಪೌರಾಣಿಕ, ಸಾಮಾಜಿಕ ಪಾತ್ರ ಹಾಗೂ ಗಾಯನದಲ್ಲಿ ಸೈ ಎನಿಸಿಕೊಂಡ ಮಹಾನ್‌ ನಟ. ಅವರು ಕನ್ನಡದಲ್ಲಿ ಮಾಡಿದ ಪಾತ್ರಗಳನ್ನು ಬೇರೆ ಭಾಷೆಗಳ ನಟರು ಮಾಡುತ್ತಿದ್ದರು ರಂದು ಬರಹಗಾರ ಎಸ್.ಲಕ್ಷ್ಮೀನರಸಿಂಹ ಬುಧವಾರ ಹೇಳಿದರು. 

ನಗರದಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಶಂಕರಪುರ ಬಡಾವಣೆಯಲ್ಲಿ ಡಾ.ರಾಜ್‌ಕುಮಾರ್ ಅವರ 95ನೇ ಜನ್ಮದಿನದ ಪ್ರಯುಕ್ತ ಡಾ.ರಾಜ್‌ಕುಮರ್ ನಿಕಟ ವರ್ತಿಗಳಾದ ಚಂದ್ರಪ್ಪ ಮತ್ತು ವಿಮಲಾಂಬ ದಂಪತಿಗೆ ಮುತ್ತುರಾಜ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಡಾ.ರಾಜ್‌ಕುಮಾರ್ ಅವರು ಚಾಮರಾಜನಗರಕ್ಕೆ ಬಂದಗಲೆಲ್ಲಾ ಚಂದ್ರಪ್ಪನವರು ನೋಡದೆ ಹೋಗುತ್ತಿರಲಿಲ್ಲ. ಕೆಲವು ಸಂದರ್ಭದಲ್ಲಿ ತಮ್ಮ ವೈಯುಕ್ತಿಕ ಬದುಕಿನ ಬಗ್ಗೆಯೂ ಅವರು ಸಲಹೆ ಕೇಳುತ್ತಿದ್ದರು’ ಎಂದು ತಿಳಿಸಿದರು.

ಸಿಂಹ ಮೂವಿ ಪ್ಯಾರಡೈಸ್ ಮಾಲೀಕ ಎ.ಜಯಸಿಂಹ ಮಾತನಾಡಿ, ‘ಚಂದ್ರಪ್ಪನವರು ಪೃಥ್ವಿರಾಜ್ ಕಪೂರ್‌ರಂತಹ ಮೇರು ನಟರನ್ನು ತಮ್ಮ ಅಣ್ಣ ಮಲ್ಲಿಕ್ ಅವರ ನಿರ್ಮಾಣದ ಸಾಕ್ಷಾತ್ಕಾರ ಚಿತ್ರದಲ್ಲಿ ಪಾತ್ರ ಮಾಡುವಂತೆ ಮಾಡಿದ್ದರು. ಚಂದ್ರಪ್ಪ ಮತ್ತು ಡಾ.ರಾಜ್‌ಕುಮಾರ್ ಅವರ ಒಡನಾಟವನ್ನು ಬಣ್ಣಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಸಮಾರಂಭದಲ್ಲಿ ಗಣ್ಯರು ಚಂದ್ರಪ್ಪ– ವಿಮಲಾಂಬ ದಂಪತಿಗೆ ಮುತ್ತುರಾಜ್‌ ಪ್ರಶಸ್ತಿ ಪ್ರದಾನ ಮಾಡಿದರು. 

ಈಶ್ವರಿ ಸೋಷಿಯಲ್ ಟ್ರಸ್ಟ್‌ನ ಸಿ.ಎಂ.ವೆಂಕಟೇಶ್ ಮಾತನಾಡಿದರು. 

ರಂಗಭೂಮಿ ಕಲಾವಿದ ಘಟಂ ಕೃಷ್ಣ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎನ್.ನಂಜುಂಡಸ್ವಾಮಿ, ಕಲಾವಿದರಾದ ಮುಡಿಗುಂಡ ಜೆ.ಮೂರ್ತಿ, ಕಿರಣ್, ಸುರೇಶ್‌ನಾಗ್, ಹರದನಹಳ್ಳಿ ನಟರಾಜು, ಶ್ರೀಧರ್, ಅನಂತ ಪ್ರಸಾದ್ ಭಾಗವಹಿಸಿದ್ದರು. 

‘ಕೋಟ್ಯಂತರ ಹೃದಯದಲ್ಲಿ ಶಾಶ್ವತ’

ನಗರದ ಜೈ ಹಿಂದ್ ಕಟ್ಟೆಯಲ್ಲಿ  ಋಗ್ವೇದಿ ಯೂತ್ ಕ್ಲಬ್ ಮತ್ತು ಜೈ ಹಿಂದ್ ಪ್ರತಿಷ್ಠಾನದ ವತಿಯಿಂದ ಡಾ.ರಾಜ್‌ಕುಮಾರ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಜೈಹಿಂದ್‌ ಪ್ರತಿಷ್ಠಾನದ ಸುರೇಶ್ ಎನ್ ಋಗ್ವೇದಿ ‘ರಾಜ್‌ ಕುಮಾರ್ ಕನ್ನಡ ಚಲನಚಿತ್ರ ರಂಗದ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಚಾಮರಾಜನಗರ ಅವರಿಗೆ ಸ್ವರ್ಗದ ಬಾಗಿಲಾಗಿತ್ತು. ಗಾಜನೂರು ಚಾಮರಾಜನಗರ ಅವರಿಗೆ ಪ್ರಾಣಅಂತಹ ಪ್ರತಿಭಾವಂತ ಹಾಗೂ ಜೀವನ ಮೌಲ್ಯದ ವ್ಯಕ್ತಿಯನ್ನು ಪಡೆದ ಚಾಮರಾಜನಗರ ಜಿಲ್ಲೆ ನಿಜಕ್ಕೂ ಪುಣ್ಯ ಜಿಲ್ಲೆ’ ಎಂದರು.  ಕವಯತ್ರಿ ಮಂಜುಳಾ ಮಾತನಾಡಿದರು. ಡಾ. ಎಸ್‌.ಪಿ ಬಾಲಸುಬ್ರಮಣ್ಯ ಗಾನಗಂಧರ್ವ ಕಲಾ ವೇದಿಕೆಯ ಅಧ್ಯಕ್ಷ ಶಿವಣ್ಣ ರಾಜ್‌ಕುಮಾರ್  ಅವರ ಗೀತೆಗಳನ್ನು ಹಾಡಿದರು. ನಿವೃತ್ತ ಮುಖ್ಯ ಶಿಕ್ಷಕಿ ನಾಗರತ್ನ ರಘುನಾಥ್ ರವಿ ಕುಸುಮಾ  ಋಗ್ವೇದಿ ಶಲ್ವ ಪಿಳ್ಳೆ ಅಯ್ಯಂಗಾರ್ ಶ್ರಾವ್ಯ ಸುಮನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT