ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ರೋಟರಿಯಿಂದ ₹ 38 ಲಕ್ಷ ವೆಚ್ಚದ ಉಪಕರಣಗಳ ಕೊಡುಗೆ

ಬೋಧನಾ ಆಸ್ಪತ್ರೆಯಲ್ಲಿರುವ ರಕ್ತನಿಧಿ ಕೇಂದ್ರ, 25ರಂದು ವಿಜಯ ರಾಘವೇಂದ್ರ ಭಾಗಿ
Last Updated 22 ನವೆಂಬರ್ 2021, 16:20 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಹೊರ ವಲಯದ ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆರೋಟರಿ, ಸಿಲ್ಕ್‌ಸಿಟಿ, ರೋಟರಿ ಜಿಲ್ಲೆ 3181, ಅಂತರರಾಷ್ಟ್ರೀಯ ರೋಟರಿ ಸಹಭಾಗಿತ್ವದಲ್ಲಿ ಒದಗಿಸಲಾಗಿರುವ ₹ 38 ಲಕ್ಷ ವೆಚ್ಚದ ಅತ್ಯಾಧುನಿಕ ಯಂತ್ರೋಪರಣಗಳ ಉದ್ಘಾಟನಾ ಕಾರ್ಯಕ್ರಮ ಇದೇ 25ರಂದು ನಡೆಯಲಿದೆ.

ಅದೇ ದಿನ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ನೇತ್ರದಾನ ನೋಂದಣಿ ಶಿಬಿರವನ್ನೂ ಆಯೋಜಿಸಲಾಗಿದೆ.

ರೋಟರಿ ಸಂಸ್ಥೆಯ ಮಾಜಿ ಗವರ್ನರ್‌ ಡಾ.ಆರ್‌.ಎಸ್‌.ನಾಗಾರ್ಜುನ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ನೀಡಿದರು.

‘ಗಡಿ ಜಿಲ್ಲೆಗೆ ಅಭಿವೃದ್ದಿ ಹಾಗೂ ಉತ್ತಮ ಆರೋಗ್ಯ ಸೇವೆ ದೊರೆಯಬೇಕೆಂಬ ನಿಟ್ಟಿನಲ್ಲಿ ರೋಟರಿ ಸಂಸ್ಥೆ 30 ವರ್ಷಗಳಿಂದಲೂ ಸೇವಾ ಕಾರ್ಯದಲ್ಲಿ ನಿರತವಾಗಿದೆ. ರಕ್ತನಿಧಿ ಕೇಂದ್ರಕ್ಕೆ ಆಧುನಿಕ ಯಂತ್ರೋಪಕರಣ ಖರೀದಿಸಿ ನೀಡಲಾಗುತ್ತಿದೆ. ಜನರು ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಪ್ರಾಣ ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು’ ಎಂದರು.

‘ನಗರದ ಕ್ಷೇಮಾ ಆಸ್ಪತ್ರೆಯಲ್ಲಿ ಮೂರು ಡಯಾಲಿಸ್ ಯಂತ್ರವನ್ನು ನೀಡಿ, ಉಚಿತವಾಗಿ ಡಯಾಲಿಸ್ ಮಾಡಲಾಗುತ್ತಿದೆ. ಈಗ ಮತ್ತೊಂದು ಯಂತ್ರವನ್ನು ದಾನಿಗಳ ಸಹಾಯದಿಂದ ಅಳವಡಿಸಿ, ಜಿಲ್ಲೆಯ ಬಡವರಿಗೆ ಉಚಿತವಾಗಿ ಡಯಾಲಿಸಿಸ್ ಮಾಡಿಸಲಾಗುತ್ತಿದೆ’ ಎಂದು ಹೇಳಿದರು.

‘ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ 25ರ ಸಂಜೆ 4 ಗಂಟೆಗೆ ನಡೆಯುವ ಸಮಾರಂಭವನ್ನು ವಿಶ್ವ ರೋಟರ‍್ಯಾಕ್ಟ್ ಸಮಿತಿಯ ಸಹ ಅಧ್ಯಕ್ಷ ಡಾ.ರವಿ ವಡ್ಲಮನಿ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ ಗವರ್ನರ್‌ ಎ.ಆರ್.ರವೀಂದ್ರ ಭಟ್, ವೈದ್ಯಕೀಯ ಕಾಲೇಜಿನ ಡೀನ್ ಡಾ.ಜಿ.ಎಂ.ಸಂಜೀವ್, ರೋಟರಿಯನ್ ಕೃಷ್ಣಶೆಟ್ಟಿ, ಎಂ.ರಂಗನಾಥಭಟ್, ರತ್ನ ಪ್ರಭಾಕರ್, ಡಿಎಚ್‌ಒ ಡಾ.ವಿಶ್ವಶ್ವೇರಯ್ಯ, ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ್, ರಕ್ತನಿಧಿ ಕೇಂದ್ರದ ಡಾ.‌ಎನ್.ಎಸ್.ದಿವ್ಯ ಭಾಗವಹಿಸಲಿದ್ದಾರೆ’ ಎಂದರು.

ವಿಜಯ ರಾಘವೇಂದ್ರ ಚಾಲನೆ:ರೋಟರಿ ಸಿಲ್ಕ್ ಸಿಟಿಯ ವಲಯ ಪ್ರತಿನಿಧಿ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿ, ‘ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ ಸಹಯೋಗದಲ್ಲಿ ನಟ ಪುನೀತ್ ರಾಜಕುಮಾರ್ ಸ್ಮರಣಾರ್ಥ ಅದೇ ದಿನ ಬೋಧನಾ ಕಾಲೇಜು ಆಸ್ಪತ್ರೆಯ ಸಭಾಂಗಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಹಾಗೂ ನೇತ್ರದಾನ ನೋಂದಣಿ ಶಿಬಿರ ಆಯೋಜಿಸಲಾಗಿದೆ.

ನಟ ವಿಜಯರಾಘವೇಂದ್ರ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ.ಶಿಬಿರವು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ. ರಕ್ತದಾನಿಗಳು ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ, ನೇತ್ರದಾನಕ್ಕೆ ನೋಂದಣಿ ಮಾಡಬೇಕು. ಮಾಹಿತಿಗೆ 9972848796 ಸಂಪರ್ಕಿಸಬಹುದು’ ಎಂದರು.

ರೋಟರಿ ಅಧ್ಯಕ್ಷ ಎ.ಶ್ರೀನಿವಾಸನ್‌, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಎಸ್.ಪ್ರವೀಣ್,ಸದಸ್ಯ ಜಿ.ಆರ್.ಅಶ್ವಥ್‌ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT