ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿತಾ ಸಮಾಜಕ್ಕೆ ಸ್ಮಶಾನ ಭೂಮಿ ನೀಡುವಂತೆ ಮನವಿ

Published 21 ಸೆಪ್ಟೆಂಬರ್ 2023, 17:00 IST
Last Updated 21 ಸೆಪ್ಟೆಂಬರ್ 2023, 17:00 IST
ಅಕ್ಷರ ಗಾತ್ರ

ಚಾಮರಾಜನಗರ: ನಗರ ವ್ಯಾಪ್ತಿಯಲ್ಲಿ ಸವಿತಾ ಸಮಾಜ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ಭೂಮಿಯನ್ನು ನೀಡುವಂತೆ ಸಮುದಾಯದ ಮುಖಂಡರು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಗುರುವಾರ  ಮನವಿ ಸಲ್ಲಿಸಿದರು.

ನಗರದಲ್ಲಿ ಶಾಸಕರನ್ನು ಭೇಟಿ ಮಾಡಿದ ಮುಖಂಡರು, ‘ಸ್ವಾತಂತ್ರ್ಯ ಪೂರ್ವದಿಂದಲೂ ನಗರದ ಹೊರವಲಯದಲ್ಲಿರುವ ಸರ್ವೆ ನಂ‌ 619ರ ಭೂಮಿಯಲ್ಲಿ ಸಮುದಾಯದ ಯಾರೇ ಮೃತಪಟ್ಟರೂ ಅವರ ಅಂತಿಮ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಇತ್ತೀಚೆಗೆ ಈ ಜಾಗದಲ್ಲಿ ಶವ ಸಂಸ್ಕಾರ ಮಾಡದಂತೆ ನಮಗೆ ಕೆಲವರು ತಿಳಿಸಿದ್ದಾರೆ. ಇದರಿಂದ ನಮಗೆ ದಿಕ್ಕೇ ತೋಚದಂತಾಗಿದೆ’ ಎಂದು ಹೇಳಿದರು. 

‘ನಮ್ಮ ಪೂರ್ವಿಕರ ಸಮಾಧಿಗಳನ್ನು ನಾಶಪಡಿಸಿ, ಸ್ಮಶಾನದ ಜಾಗವನ್ನು ಸಮತಟ್ಟು ಮಾಡಲಾಗಿದೆ. ಇದರಿಂದ ನಮ್ಮ ಪೂರ್ವಿಕರ ಸಮಾಧಿ ಗುರುತು ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಸವಿತಾ ಸಮಾಜದವರು ಸೇರಿದಂತೆ ಇನ್ನಿತರ ಸಮುದಾಯದವರಿಗೆ ಶವ ಸಂಸ್ಕಾರಕ್ಕೆ ಅಲ್ಲಿ ಅವಕಾಶ ನೀಡದಿದ್ದರೆ ನಾವೆಲ್ಲ ಏನು ಮಾಡಬೇಕೆಂಬುದು ತಿಳಿಯದಾಗಿದೆ. ಹೀಗಾಗಿ, ಅದೇ ಜಾಗದಲ್ಲಿ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಮನವಿ ಆಲಿಸಿದ ಶಾಸಕರು, ‘ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮುದಾಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸವಿತಾ ಸಮಾಜದ ಗೌರವಾಧ್ಯಕ್ಷ ಮುದ್ದುಮಾಧು, ಉಪಾಧ್ಯಕ್ಷ ರಂಗಸ್ವಾಮಿ, ತಾಲ್ಲೂಕು ಅಧ್ಯಕ್ಷ ಬಸವಣ್ಣ, ಮುಖಂಡರಾದ ನಂಜೆದೇವರು, ನಿಂಗರಾಜು, ಚಂದ್ರಶೇಖರ್, ನಿಂಗಪ್ಪ, ಮಹದೇವ, ನಾಗೇಂದ್ರ, ನಾಗ, ಮಾದೇಶ, ಕುಮಾರ್ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT