ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಟ್ ಸರ್ಕಿಟ್: 50ಕ್ಕೂ ಹೆಚ್ಚು ಟಿವಿಗೆ ಹಾನಿ

ನಷ್ಟ ಭರಿಸಿಕೊಡುವಂತೆ ಸೆಸ್ಕ್‌ಗೆ ಗ್ರಾಮಸ್ಥರ ಆಗ್ರಹ
Last Updated 18 ಅಕ್ಟೋಬರ್ 2020, 7:16 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಶನಿವಾರ ಶಾರ್ಟ್ ಸರ್ಕಿಟ್ ಉಂಟಾಗಿ ಸುಮಾರು 50ಕ್ಕೂ ಹೆಚ್ಚು ಟಿವಿ ಮತ್ತು ಬಲ್ಬ್‌ಗಳಿಗೆ ಹಾನಿಯಾಗಿದೆ.

ಶನಿವಾರ ಮಧ್ಯಾಹ್ನ ಕಬ್ಬು ತುಂಬಿದ ಲಾರಿ ತೆರಳುತ್ತಿದ್ದಾಗ ಡೊಳ್ಳಾಗಿದ್ದ ವಿದ್ಯುತ್ ತಂತಿಗಳಿಗೆ ತಗುಲಿದೆ. ಇದರಿಂದ ಹೆಚ್ಚಿನ ವಿದ್ಯುತ್ ಏಕಮುಖವಾಗಿ ಪ್ರವಹಿಸಿ ಮನೆಗಳ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟುಹೋಗಿವೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮದ ಸುತ್ತಮುತ್ತ ವಿದ್ಯುತ್ ತಂತಿಗಳು ಡೊಳ್ಳು ಬಿದ್ದಿರುವ ಬಗ್ಗೆ ಹತ್ತಾರು ಬಾರಿ ಸೆಸ್ಕ್ ಕಚೇರಿಗೆ ತೆರಳಿ ದುರಸ್ತಿ ಮಾಡುವಂತೆ ಒತ್ತಾಯಿಸಲಾಗಿತ್ತು. ಮೊದಲೇ ದುರಸ್ತಿ ಮಾಡಿದ್ದರೆ ವಸ್ತುಗಳು ಸುಡುತ್ತಿರಲಿಲ್ಲ. ಹಾಗಾಗಿ, ಹಾನಿಗೊಳಗಾದ ವಸ್ತುಗಳಿಗೆ ಸೆಸ್ಕ್ ನಷ್ಟ ಭರಿಸಿಕೊಡಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಿಬ್ಬಂದಿಯನ್ನು ಗ್ರಾಮಸ್ಥರು ಒತ್ತಾಯಿಸಿದರು.

ಹಬ್ಬದ ಸಂಭ್ರಮವನ್ನು ನೋಡುತ್ತಿದ್ದಾಗಲೇ ಮನೆಗಳ 50ಕ್ಕೂ ಹೆಚ್ಚು ಟಿವಿ ಸುಟ್ಟಿವೆ. ಶಬ್ದದೊಂದಿಗೆ ಕೆಲ ಮನೆಗಳ ಟಿ.ವಿಗಳು ಒಡೆದಿವೆ. ಹಾಗಾಗಿ, ಸೆಸ್ಕ್ ನಷ್ಟದ ಹೊಣೆ ಹೊರಬೇಕು ಎಂದು ಗ್ರಾಮದ ಮಹೇಶ್, ಗುರುಸ್ವಾಮಿ ಮತ್ತು ಮಹಾಂತಕುಮಾರ ಆಗ್ರಹಿಸಿದರು.

ಎಇಇ ಸುರೇಶ್ ಮಾಹಿತಿ ನೀಡಿ, ‘ಗ್ರಾಮಕ್ಕೆ ಎಂಜಿನಿಯರ್ ವೆಂಕಟೇಶ್ ಮೂರ್ತಿ ಮತ್ತು ಸಿಬ್ಬಂದಿ ತೆರಳಿ ನಷ್ದದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕಬ್ಬು ತುಂಬಿದ ಲಾರಿ ಸಂಚಾರಿಸುವಾಗ ವಿದ್ಯುತ್ ತಂತಿ ತುಂಡಾಗಿದೆ. ಕಬ್ಬು ಕಟಾವು ಮಾಡುವ ಕ್ಷೇತ್ರ ಪಾಲಕರು ಹಾನಿಗೆ ಒಳಗಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ರಿಪೇರಿ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT