ಗುಂಡ್ಲುಪೇಟೆ: ಮಹಾಶಿವರಾತ್ರಿ ಅಂಗವಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ತಾವರಗಟ್ಟೆ ಮಹದೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ವಿಶೇಷ ಪೂಜೆ ನಡೆಯಿತು.

ವರ್ಷಕೊಮ್ಮೆ ನಡೆಯುವ ಈ ವಿಶೇಷ ಪೂಜೆಯಲ್ಲಿ ಬುಡಕಟ್ಟು ಜನರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಶಿವರಾತ್ರಿ ಮಾರನೆಯ ದಿನ ಬಂಡೀಪುರದ ಅರಣ್ಯ ಇಲಾಖೆಯ ಸಹಕಾರದಿಂದ ವಿಶೇಷ ಪೂಜೆ ನಡೆಯಲಿದ್ದು, ಕಾಡಿನೊಳಗಿರುವ ದೇವಸ್ಥಾನಕ್ಕೆ ಖಾಸಗಿ ವಾಹನಗಳ ಸಂಚಾರ ನಿಷೇಧವಿರುವುದರಿಂದ ಸಫಾರಿ ವಾಹನಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಹಾಗೂ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪೊಲೀಸರು ಅವಕಾಶ ಮಾಡಿದ್ದರು.

ಹೆಚ್ಚಾಗಿ ಬುಡಕಟ್ಟು ಜನರು ಭಾಗವಹಿಸುವ ಈ ಜಾತ್ರೆಗೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಬುಡಕಟ್ಟು ಜನರು ವಿಶೇಷವಾಗಿ ನೃತ್ಯ ಮಾಡುವ ಮೂಲಕ ದೇವರನ್ನು ಒಲಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಬೇಧಬಾವವಿಲ್ಲದೆ ನೃತ್ಯ ಮಾಡಿದರು.

ಸಿ.ಎಫ್.ಪ್ರಭಾಕರನ್, ಎಸಿಎಫ್ ನವೀನ್ ಕುಮಾರ್ ಇದ್ದು ಪರಿಶೀಲಿಸಿದರು. ಕಾಡಿನೊಳಗೆ ಹೆಚ್ಚಿನ ಜನರು ಪ್ರವೇಶಿಸುವುದರಿಂದ ಯಾವುದೇ ಅನಾಹುತಗಳು ನಡೆಯದಂತೆ ಎಂದು ಅಗ್ನಿಶಾಮಕ ದಳದ ವಾಹನ ಮತ್ತು ಪೊಲೀಸರು ಇದ್ದರು.

ಸಂಚಾರಕ್ಕೆ ಅನಾನುಕೂಲ:

ಜಾತ್ರೆಗೆ ಹೆಚ್ಚು ಜನರು ಸೇರಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು. ಸಫಾರಿ ವಾಹನಗಳನ್ನು ಬಳಕೆ ಮಾಡಿಕೊಂಡಿದ್ದರು ಜೀಪು, ಜಿಪ್ಸಿಗಳು ಅಧಿಕಾರಿಗಳ ಕುಟುಂಬ ಮತ್ತು ಸಂಬಂಧಿಕರಿಗೆ ಸೀಮಿತವಾಗಿತ್ತು. ವ್ಯಾನ್ಗಳು ಬರುವವರೆಗೂ ಬಿಸಿಲಿನಲ್ಲಿ ಭಕ್ತರು ಕಾಯಬೇಕಾಯಿತು. ಭಕ್ತರು ಹಾಗೂ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳಿಗೆ ಪ್ರತ್ಯೇಕ ಊಟ ವ್ಯವಸ್ಥೆ ಮಾಡಲಾಗಿತ್ತು.

ಜಾತ್ರೆಗೆ ಹೆಚ್ಚಿನ ಜನರು ಬಂದಿದ್ದರಿಂದ ಬಿಸಿಲಿನಲ್ಲಿ ಕಾದು ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.