ಶನಿವಾರ, ಮಾರ್ಚ್ 6, 2021
32 °C

ಸುಭಾಷ್‌ಚಂದ್ರ ಬೋಸ್ 125ನೇ ಜನ್ಮದಿನ: ಚಾಮರಾಜನಗರದಲ್ಲಿ ಮ್ಯಾರಾಥಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನೇತಾಜಿ ಸುಭಾಷ್‌ ಚಂದ್ರಬೋಸ್ ಅವರ 125ನೇ ಜನ್ಮದಿನಾಚರಣೆಯ ಅಂಗವಾಗಿ ಯುವ ಬ್ರಿಗೇಡ್ ವತಿಯಿಂದ ನಗರದಲ್ಲಿ ಶುಕ್ರವಾರ ಮ್ಯಾರಾಥಾನ್ ಓಟ ನಡಯಿತು.

ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಚಾಲನೆಗೊಂಡ ಓಟ ಭುವನೇಶ್ವರಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸುತ್ತಾನ್ ಷರೀಫ್ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ, ಡಿವೈಎಸ್ಪಿ ಕಚೇರಿಯಿಂದ ತಿರುಗಿ ಮತ್ತೆ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಮುಕ್ತಾಯ ಕಂಡಿತು.

ಮ್ಯಾರಾಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಪಟ್ಟಣ ಪೋಲಿಸ್ ಠಾಣೆಯ ಇನ್‌ಸ್ಪೆಕ್ಟರ್‌ ಮಹೇಶ್ ಅವರು,  ‘ಸುಭಾಷ್‌ ಚಂದ್ರ ಬೋಸ್ ಅವರು ಯುವಕರಿಗೆ ಸ್ಫೂರ್ತಿಯಾಗಿದ್ದರು. ಯುವ ಬ್ರಿಗೇಡ್ ವತಿಯಿಂದ ಅವರ ಸ್ಮರಿಸುವ ಕಾರ್ಯಕ್ರಮ ಅಯೋಜಿಸಿರುವುದು ಅರ್ಥಪೂರ್ಣವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ನಂಜನಗೂಡು ವಲಯದ ಸಂಚಾಲಕ ಚಂದ್ರಶೇಖರ್, ರಘು, ಹರ್ಷದ್‌ ಗೌಡ, ಫೃಥ್ವಿ, ಯಶವಂತ, ನಿಖಿಲ್, ಅಜಿತ, ರಾಘವ್, ಪ್ರವೀಣ್, ಕಿರಣ, ರಾಜು, ಶೇಖರ, ಪ್ರಸನ್ನ, ಮುಖಂಡರಾದ ಸುರೇಶ್ ನಾಯಕ, ಮಹದೇವನಾಯಕ, ಚಿನ್ನಸ್ವಾಮಿ, ಸುದರ್ಶನ್ ಗೌಡ, ಅಜಾದ್ ಹಿಂದೂ ಸೇನೆಯ ರಾಜ್ಯಾಧ್ಯಕ್ಷ ಎಂ.ಎಸ್.ಪೃಥ್ವಿರಾಜ್, ಜಿಲ್ಲಾಧ್ಯಕ್ಷ ಶಿವುವಿರಾಟ್, ಚಂದ್ರಶೇಖರ, ನಟರಾಜು ಇತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು