ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಟೆ ವಾದ್ಯ ಪರಿಣತ ಜ್ಯೋತಿಲಿಂಗಯ್ಯ

ಬಾಲ್ಯದಿಂದಲೇ ಮೊಳಗಿಸುತ್ತಿದ್ದಾರೆ ತಮಟೆ ಸದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿ
Last Updated 12 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಚಾಮರಾಜನಗರ:ಹೆಗಲಿಗೆ ಕುಣಿಕೆ ಏರಿಸಿ ತಮಟೆಯನ್ನು ಎದೆಯ ಎಡಭಾಗಕ್ಕೆ ಎತ್ತರಿಸಿಎಡಗೈಯನ್ನು ಕಂಠದ ಮೇಲೆ ಇಟ್ಟು, ಬಲಗೈನಲ್ಲಿ ಹಿಡಿದ ಕೋಲಿನಿಂದ ಹಲಗೆಗೆ ಬಡಿಯುತ್ತಾ ಜ್ಯೋತಿಲಿಂಗಯ್ಯ ಅವರು ನಾದವನ್ನು ಹೊಮ್ಮಿಸುತ್ತಿದ್ದರೆ, ಅದನ್ನು ಕೇಳಿಯೇ ಸವಿಯಬೇಕು.

ತಾಲ್ಲೂಕಿನ ಬಸವನಪುರದ ನಿವಾಸಿ, 38 ವರ್ಷದ ಜ್ಯೋತಿಲಿಂಗಯ್ಯ ಅವರು ತಮಟೆ ವಾದನದಲ್ಲೇ ಜೀವನ ರೂಪಿಸಿಕೊಂಡವರು.ತಮ್ಮಕೈಗೆ ಒಂದೂವರೆ ಅಡಿ ಬೆತ್ತ ಅಥವಾ ಬಿದಿರಿನ ಛಡಿ ಹಿಡಿದು ತಮಟೆ ಬಾರಿಸಲು ಮುಂದಾದರೆ ಬೇರೆಡೆ ಗಮನವೇ ಕೊಡುವುದಿಲ್ಲ. ತಮಟೆಯನಾದಕ್ಕೆ ಕಿವಿಕೊಟ್ಟವರು ಕುಣಿದು ಕುಪ್ಪಳಿಸುತ್ತಾರೆ. ತಾತನಿಂದ ಬಳುವಳಿಯಾಗಿ ಬಂದಿರುವ ತಮಟೆ ವಾದನ ಕಲೆಯನ್ನು ಜ್ಯೋತಿಲಿಂಗಯ್ಯ ಅವರು ಬಾಲ್ಯದಿಂದಲೇ ಕರಗತ ಮಾಡಿಕೊಂಡಿದ್ದಾರೆ.

2006ರಲ್ಲಿ 15 ಸದಸ್ಯರ ‘ಮಂಟೇಸ್ವಾಮಿ ತಮಟೆ ಕಲಾ ಸಂಘ’ ಎಂಬ ಕಲಾತಂಡ ರಚಿಸಿಕೊಂಡಿದ್ದರು. 2007ರಿಂದಉತ್ಸವ, ಮಂಟೇಸ್ವಾಮಿ ಕಂಡಾಯೋತ್ಸವ,ಮಹದೇಶ್ವರ ಪರಿಷೆ, ಜಾತ್ರೆ, ಕುಣಿತ, ಬಯಲಾಟ, ಸಾವು, ಮದುವೆ... ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ತಮಟೆ ಬಾರಿಸುತ್ತಿದ್ದಾರೆ.

ಸಕಲವಾದ್ಯ ಪ್ರವೀಣ:ಜ್ಯೋತಿಲಿಂಗಯ್ಯ ಅವರು ಓದಿರುವುದುಎರಡನೇತರಗತಿ ಮಾತ್ರ. ಶಿಕ್ಷಣ ಪಡೆಯದಿರುವುದು ಅವರ ಕಲೆಯ ಮೇಲೆ ಏನೂ ಪರಿಣಾಮ ಬೀರಿಲ್ಲ.ತಮಟೆಯೊಂದಿಗೆ ಡೋಲು, ನಗಾರಿ, ನಾಸಿಕ್‌ ಡೋಲು, ಸೈಡ್‌ ಡ್ರಮ್‌ಗಳನ್ನು ಬಾರಿಸುವ ಕಲೆಯೂ ಇವರಿಗೆ ಸಿದ್ಧಿಸಿದೆ. ತಮಟೆ ಕಲೆಯನ್ನು ಉಳಿಸಿ, ಬೆಳೆಸಬೇಕು ಎನ್ನುವುದು ಅವರ ಮನೋಭಿಲಾಷೆ.

ತರಬೇತಿ: ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಹಾಗೂ ನಿಟ್ರೆ ಗ್ರಾಮಗಳಲ್ಲಿ 7 ವರ್ಷದ ಹಿಂದೆ ಅನೇಕ ಆಸಕ್ತ ಯುವಕರಿಗೆ ಇವರು ತಮಟೆ, ಸೈಡ್‌ ಡ್ರಮ್‌ ಕಲಿಸಿ ತರಬೇತಿಯನ್ನು ನೀಡಿದ್ದಾರೆ. ತರಬೇತಿ ಪಡೆದವರು ವಿವಿಧ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಹೊರ ಜಿಲ್ಲೆಗಳಲ್ಲಿ ಭಾಗಿ: ಜ್ಯೋತಿಲಿಂಗಯ್ಯ ಅವರುತಮ್ಮತಂಡದೊಂದಿಗೆ ಮೈಸೂರು, ಚಾಮರಾಜನಗರ ದಸರಾ ಕಾರ್ಯಕ್ರಮವಲ್ಲದೆ ಬೆಂಗಳೂರು, ಹಂಪಿ ಉತ್ಸವದಲ್ಲೂ ತಮಟೆಯ ಸದ್ದು ಮೊಳಗಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮಟೆ ಸಂಸ್ಕೃತಿಯನ್ನುಹೊರದೇಶದಲ್ಲೂ ಪಸರಿಸಬೇಕು ಎನ್ನುವಕನಸುಹೊಂದಿದ್ದಾರೆ.

ನುರಿತ ತಂಡ: ‘ನಮ್ಮ ತಂಡದಲ್ಲಿ ತಮಟೆ, ನಗಾರಿ, ರಾಮ ಡೋಲು ಬಾರಿಸುವವರಿದ್ದಾರೆ. ಸರ್ಕಾರಿ ಕಾರ್ಯಕ್ರಮವಾದರೆ₹ 5 ಸಾವಿರ, ಖಾಸಗಿ ಕಾರ್ಯಕ್ರಮಕ್ಕೆ₹ 10 ಸಾವಿರ ಶುಲ್ಕ ಪಡೆಯುತ್ತೇವೆ. ತಳಮಟ್ಟದ ಕಲೆಯೊಂದಿಗೆ ಆರ್ಥಿಕವಾಗಿ ದುರ್ಬಲರಾಗಿರುವ ಕಲಾವಿದರನ್ನು ಸರ್ಕಾರ ಮತ್ತು ಇಲಾಖೆ ಗುರುತಿಸುವ ಕೆಲಸ ಮಾಡಬೇಕು’ ಎಂದುಅವರು‘ಪ್ರಜಾವಾಣಿ’ಗೆ ಹೇಳಿದರು.

ಬಡಕಲಾವಿದರನ್ನು ಆಯ್ಕೆ ಮಾಡಬೇಕು

‘ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ‘ಅಕ್ಕ ಸಮ್ಮೇಳನ’ ದಂತಹ ಕಾರ್ಯಕ್ರಮಗಳಿಗೆ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಡಿನ ಸಂಸ್ಕೃತಿ ಬಿಂಬಿಸುವ ಕಲೆಯನ್ನು ಜೀವಾಳವಾಗಿಸಿಕೊಂಡ ಅತ್ಯಂತ ಬಡ ಕಲಾವಿದರನ್ನು ಆಯ್ಕೆ ಮಾಡಿ ಕಳುಹಿಸುವ ಕೆಲಸ ಮಾಡಬೇಕು. ಇಲ್ಲವಾದರೆ ನೈಜ ಕಲಾವಿದರು ಅವಕಾಶ ವಂಚಿತರಾಗಿ ಕಲೆ ಮರೆಯಾಗುತ್ತದೆ’ ಎಂದು ಜ್ಯೋತಿಲಿಂಗಯ್ಯ ಸಹೋದರ ಲಿಂಗರಾಜು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT