ಭಾನುವಾರ, ಸೆಪ್ಟೆಂಬರ್ 22, 2019
25 °C
ಸ್ಥಳಕ್ಕೆ ಬಾರದ ಅರಣ್ಯ ಅಧಿಕಾರಿಗಳು: ಜನರ ಆಕ್ರೋಶ

ಬಂಡೀಪುರ ಅರಣ್ಯ ವಲಯ | ವ್ಯಕ್ತಿಯನ್ನು ಕೊಂದು, ಅಂಗಾಂಗ ತಿಂದ ಹುಲಿ

Published:
Updated:

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಚೌಡಹಳ್ಳಿ ಸಮೀಪ ಕರಿಕಲ್ಲ ಮುಂಟಿ ಬಳಿ ಹುಲಿ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಕೊಂದಿದೆ.

ಶನಿವಾರ ಸಂಜೆ ಘಟನೆ ನಡೆದಿದೆ. ಹುಲಿ ದೇಹದ ಕೆಲ ಭಾಗಗಳನ್ನು ಬಗೆದಿದ್ದು, ಒಂದು ಕಾಲನ್ನು ತಿಂದಿದೆ.

ಚೌಡಹಳ್ಲಿ ಗ್ರಾಮದ ಶಿವಮಾದಯ್ಯ(55) ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಎತ್ತುಗಳನ್ನು ಮೇಯಿಸುವಾಗ ದಾಳಿ ಮಾಡಿ, ಸುಮಾರು ಒಂದು ಕಿ.ಮೀ. ದೂರ ಬೆಟ್ಟಕ್ಕೆ ಎಳೆದೊಯ್ದಿದೆ.

ದಾಳಿ ಮಾಡಿದ ಸ್ಥಳದಲ್ಲಿ ಟವೆಲ್, ಚಪ್ಪಲಿ ಬಿದ್ದಿದೆವೆ. ಎಳೆದೊಯ್ದ ಜಾಡನ್ನು ಹಿಡಿದು ಹುಡುಕಿ ಮೃತ ದೇಹವನ್ನು ಪತ್ತೆ ಮಾಡಲಾಗಿದೆ.

ಬಾರದ ಅಧಿಕಾರಿಗಳು: ಗ್ರಾಮಸ್ಥರ ಆಕ್ರೋಶ

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಾರದಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹುಲಿಗೇನಾದರು ಆದರೆ ತಕ್ಷಣ ಸ್ಥಳಕ್ಕೆ ಬರುವ ಅಧಿಕಾರಿಗಳು ಜನ ಸತ್ತಾಗ ಏಕೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಹುಲಿ ದಾಳಿ ನಡೆಸಿದ ಸ್ಥಳದಲ್ಲಿ ಬಿದ್ದಿದ್ದ ಟವೆಲ್‌ ಮತ್ತು ಚಪ್ಪಲಿ

 

Post Comments (+)