ಯಳಂದೂರು: ಸೋಲಿಗ ನುಡಿಗೆ ವರ್ಣಮಾಲೆಯ ಹಂಗಿಲ್ಲ. ಕನ್ನಡ-ತಮಿಳು ಭಾಷೆಗಳ ಜುಗಲ್ಬಂದಿಯಲ್ಲಿ ನುಲಿಯುವ ಶಬ್ದಗಳನ್ನು ಅವರ ಬಾಯ್ದೆರೆಯಲ್ಲಿ ಕೇಳುವುದೇ ಚಂದ.

ಇವರ ಕಾಡಿನ ಕಥೆಗಳನ್ನು ಕಟ್ಟಿಕೊಡುವ ಪದಗಳಿಗೆ ಲೆಕ್ಕ ಇಟ್ಟವರಿಲ್ಲ. ಪ್ರತಿ ಪಲ್ಲವಿಗೂ ಅಡವಿ, ನಿಸರ್ಗದ ಪ್ರಾಣಿ-ಪಕ್ಷಿಗಳ ಹೆಸರು ಪೋಣಿಸುತ್ತ ಹೇಳಿದರೆ; ಸುಂದರ ಹಾಡಾಗುತ್ತದೆ. ಜಾನಪದ ಸಾಹಿತ್ಯದ ಹೊನಲು ಹರಡುತ್ತದೆ. ಇಂತಹ ಸುಂದರ ಅನುಭೂತಿಗಳನ್ನು ಡಿಜಿಟಲ್ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ.

ದೆಹಲಿಯ ಐಡಿಯೋಸಿಂಕ್ ಮೀಡಿಯಾ ಕಂಬೈನ್ಸ್ ಮೊದಲ ಡಿಜಿಟಲ್ (ಸಂವಹನ) ಕಥೆಗಳ ಪ್ರದರ್ಶನವನ್ನು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದೆ. ಡಿಸೆಂಬರ್ 3ರಂದು ಯರಕನಗದ್ದೆ ಕಾಲೊನಿಯ ಅಡವಿ ಕೇಂದ್ರದಲ್ಲಿ ಸೋಲಿಗ ಸಮುದಾಯದ ಯುವ ಜನರ ಅನುಭವ ಕಥನಗಳ ಪ್ರದರ್ಶನ ನಡೆಯಲಿದೆ.

ಸೋಲಿಗರು ಪ್ರದರ್ಶಿಸುವ ನೃತ್ಯ, ಕುಣಿತದಲ್ಲೂ ವಿಶೇಷತೆ ಇದೆ. ಇವರು ತಮ್ಮ ಕಲಾ ಪ್ರದರ್ಶನದಲ್ಲಿ ಬಳಸುವ ವಾದ್ಯಗಳು ಇಂಪಾದ ನಾದ ಹೊಮ್ಮಿಸುತ್ತವೆ. ಕಲೆ, ಸಂಸ್ಕೃತಿ, ವನ ವೈವಿಧ್ಯ ಕುರಿತ ಸಣ್ಣಪುಟ್ಟ ಘಟನೆಗಳನ್ನು ಕೇಂದ್ರವಾಗಿಸಿ ಸಾಂಸ್ಕೃತಿಕವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಡಿಜಿಟಲ್ ಕಥೆಯಲ್ಲಿ ದಾಖಲಿಸಲಾಗಿದೆ.

‘ಸಂವಹನದ ಮೂಲಕ ತಳಮಟ್ಟದ ಜನರ ನ್ಯಾಯಕ್ಕಾಗಿ’ ಎಂಬ ಧ್ಯೇಯದಡಿ ಸೋಲಿಗ ಡಿಜಿಟಲ್ ಆಡಿಯೋ ಕಲೆಕ್ಟಿವ್ ಡಿಜಿಟಲ್ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಗಿರಿಜನರ ಸಾಕ್ಷರತೆ, ಸಾಮಾಜಿಕ ಪರಿವರ್ತನೆ, ಹಕ್ಕು, ಲಿಂಗ, ಸಮಾನತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳ ಮೇಲೆ ಘಮನ ಕೇಂದ್ರಿಕರಿಸಿ ಕೆಲಸ ಮಾಡುವ ಸಂಸ್ಥೆಯಾಗಿದೆ’ ಎನ್ನುತ್ತಾರೆ ಐಡಿಯೋಸಿಂಕ್ ಮೀಡಿಯಾ ಕಂಬೈನ್ಸ್ನ ವೇಣು ಆರೋರ.

ಸಮುದಾಯ ಆಧಾರಿತ ಡಿಜಿಟಲ್ ಮಾಧ್ಯಮದಲ್ಲಿ ಹಾಡಿ ಜನರ ಸಾಕ್ಷರತೆ, ಕಥೆ ಹೇಳುವ ರೀತಿ, ಸೋಲಿಗರಲ್ಲಿ ಡಿಜಿಟಲ್ ಬಳಕೆ ಉತ್ತೇಜನ, ಡಿಜಿಟಲ್ ಗುಂಪು ರಚನೆ, ಮಾಧ್ಯಮ ಕೌಶಲಗಳ ಅಭಿವೃದ್ಧಿ, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ, ಕಥಾಶೈಲಿ, ಸೋಲಿಗ ಭಾಷೆ, ಸಂಸ್ಕೃತಿ ಆಚರಣೆಗಳ ಮೇಲೆ ವೀಡಿಯೊ ತಯಾರಿಕೆಯ ಉದ್ದೇಶ ಹೊಂದಿದೆ ಎಂದರು.

ಸೋಲಿಗರ ಚರಿತ್ರೆಯ ‘ಅ ಆ ಇ ಈ’

ಜಿಲ್ಲೆಯ ಕಾಡು ಕುರುಬ ಮತ್ತು ಜೇನು ಕುರುಬ ಸಮುದಾಯಗಳ ಸಂಸ್ಕೃತಿ, ಹಕ್ಕು, ಸುಸ್ಥಿರ ಜೀವನೋಪಾಯ, ಆದಿವಾಸಿ ಅಭಿವೃದ್ಧಿ, ಶಿಕ್ಷಣ, ಕಾಡು ಸಂರಕ್ಷಣೆ ಮತ್ತು ಶಿಕ್ಷಣ ಕುರಿತ ಸಂಶೋಧನೆಗೆ ಡಿಜಿಟಲ್ ಉಪ ಕ್ರಮಗಳು ನೆರವು ಪಡೆಯಲಾಗಿದೆ. 20 ಯುವ ಜನರು 6 ತಿಂಗಳ ತರಬೇತಿ ಪಡೆದು ದೈನಂದಿನ ಬಹುಮುಖಿ ಸಂಪ್ರದಾಯ, ಕಲಾ ಪ್ರಾಕಾರಗಳ ಬಗ್ಗೆ ಮಾಹಿತಿ ಕಟ್ಟಿ ಕೊಡುವರು. ನಾಲ್ವರಿಗೆ ಶಿಷ್ಯ ವೇತನ ನೀಡಿ ಸೋಲಿಗರ ಚರಿತ್ರೆಯ ಆರಂಭದ ‘ಅ ಆ ಇ ಈ’ ಬಗ್ಗೆ ತಿಳಿಸುವ ಪ್ರಯತ್ನ ಕಿರು ಚಿತ್ರಗಳ ಭಾಗವಾಗಿದೆ ಎಂದು ಏಟ್ರೀ ಸಂಸ್ಥೆಯ ಸಂಶೋಧಕ ಡಾ. ಮಾದೇಗೌಡ ಹೇಳಿದರು.

ಪ್ರದರ್ಶನ: ಡಿ. 3ರಂದು ಮೊದಲ ಡಿಜಟಲ್ ಕಥೆಗಳ ಪ್ರದರ್ಶನ ಮಧ್ಯಾಹ್ನ 11ಕ್ಕೆ ಯರಕನಗದ್ದೆ ಕಾಲೊನಿಯಲ್ಲಿ ನಡೆಯಲಿದೆ. ರಾಜ್ಯ ಸೋಲಿಗ ಅಭಿವೃದ್ಧಿ ಸಂಘ ಹಾಗೂ ನವ ದೆಹಲಿಯ ಐಡಿಯೋಸಿಂಕ್ ಮೀಡಿಯಾ ಕಂಬೈನ್ಸ್ ಸಹಯೋಗ ಇರಲಿದೆ. ಜಿಲ್ಲಾಧಿಕಾರಿ ಶಿಲ್ಪನಾಗ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಲಾಲ್, ಅಧಿಕಾರಿ ಎಚ್.ಬಿಂದ್ಯಾ, ಸಂಶೋಧಕ ಡಾ.ಸಿ.ಮಾದೇಗೌಡ ಹಾಗೂ ಜಿಲ್ಲಾ ಬುಡಕಟ್ಟು ಸಂಘದ ಮುಖಂಡರು ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.