ಚಾಮರಾಜನಗರ: ಮಾರುಕಟ್ಟೆಯಲ್ಲಿ ಟೊಮೆಟೊ ದರ ಮತ್ತೆ ಏರುಮುಖವಾಗಿದ್ದು, ಕೆ.ಜಿಗೆ 70ರಿಂದ 80ಕ್ಕೆ ತಲುಪಿದೆ. ಗುಣಮಟ್ಟ ಹಾಗೂ ಗಾತ್ರದ ಆಧಾರದ ಮೇಲೆ ಕನಿಷ್ಠ ₹50ರಿಂದ ₹80ರವರೆಗೂ ದರ ನಿಗದಿಪಡಿಸಲಾಗಿದೆ.

20 ದಿನಗಳ ಹಿಂದೆ ದಿಢೀರ್ ಏರಿಕೆ ಕಂಡಿದ್ದ ಟೊಮೆಟೊ ಕೆಲ ದಿನಗಳಲ್ಲಿ ಇಳಿಮುಖವಾಗಿತ್ತು. ಇದೀಗ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಶತಕದ ಗಡಿ ಮುಟ್ಟಬಹುದು ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.

‘ಸಾಂಬಾರ್, ರಸಂ, ಪಲ್ಯ, ಗೊಜ್ಜು ಸಹಿತ ಸಸ್ಯಹಾರಿ ಹಾಗೂ ಮಾಂಸಹಾರಿ ಖಾದ್ಯಗಳ ತಯಾರಿಕೆಯಲ್ಲಿ ಟೊಮೆಟೊಗೆ ಅಗ್ರಸ್ಥಾನ. ಹಾಗಾಗಿ, ದರ ಏರಿಕೆಯಾದರೂ ಖರೀದಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ ಗೃಹಿಣಿಯರು. ದರ ಕಡಿಮೆ ಇದ್ದಾಗ ಎರಡರಿಂದ ಮೂರು ಕೆಜಿ ಖರೀದಿಸುತ್ತಿದ್ದವರು ಈಗ ಅರ್ಧ ಕೆ.ಜಿ, ಒಂದು ಕೆ.ಜಿಗೆ ಸೀಮಿತವಾಗಿದ್ದಾರೆ’ ಎನ್ನುತ್ತಾರೆ ವ್ಯಾಪಾರಿ ಶ್ರೀನಿವಾಸ್.

ಇಳುವರಿಯಲ್ಲಿ ಭಾರಿ ಕುಸಿತ, ಕುಸಿದ ಟೊಮೆಟೊ ಬೆಳೆ ಕ್ಷೇತ್ರ, ಮಾರುಕಟ್ಟೆಗೆ ತಗ್ಗಿದ ಪೂರೈಕೆ ಹೆಚ್ಚಿದ ಬೇಡಿಕೆಯ ಪರಿಣಾಮ ದರ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ಪೂರೈಕೆ ಹೆಚ್ಚಾದರೆ ದರ ಇಳಿಕೆಯಾಗಲಿದೆ ಎನ್ನುತ್ತಾರೆ ಅವರು.

ಬೆಲೆ ಹೆಚ್ಚಾಗಿದ್ದರೂ ಟೊಮೆಟೊಗೆ ಹೂಜಿ ಹುಳುಗಳ ಕಾಟ ಕಾಡುತ್ತಿದೆ. ಹೆಚ್ಚು ದಿನ ಇರಿಸಲು ಸಾಧ್ಯವಾಗದೆ ಕೊಳೆತು ಹೋಗುತ್ತಿವೆ. ಹಾಗಾಗಿ ಮೂರ್ನಾಲ್ಕು ದಿನಗಳಿಗಾಗುವಷ್ಟು ಖರೀದಿ ಮಾಡುತ್ತಿದ್ದೇವೆ ಎನ್ನುತ್ತಾರೆ ಗೃಹಿಣಿ ಮಂಜುಳಾ.

ಕ್ಯಾರೆಟ್ ಅಗ್ಗ, ಬೀನ್ಸ್ ದುಬಾರಿ: ಸಾಮಾನ್ಯವಾಗಿ ಹೆಚ್ಚು ಕಡಿಮೆ ಒಂದೇ ಬೆಲೆಗೆ ಸಿಗುತ್ತಿದ್ದ ಬೀನ್ಸ್ ಹಾಗೂ ಕ್ಯಾರೆಟ್ ದರ ಮೇಲೆ ಕೆಳಗೆ ಆಗಿದೆ. ಕ್ಯಾರೆಟ್ ಕೆ.ಜಿಗೆ ₹ 20ಕ್ಕೆ ಅಗ್ಗದ ದರದಲ್ಲಿ ಸಿಗುತ್ತಿದ್ದರೆ, ಬೀನ್ಸ್ ಮಾತ್ರ ₹ 70 ರಿಂದ ₹ 80 ತಲುಪಿದೆ. ಚಳಿಗಾಲವಾಗಿರುವುದರಿಂದ ಯತೇಚ್ಛವಾಗಿ ಕ್ಯಾರೆಟ್ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದು ದರ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ಮಂಜುನಾಥ್.

ಅವರೆಕಾಯಿ ಇಳಿಕೆ, ತೊಗರಿ ಏರಿಕೆ: ಮಾರುಕಟ್ಟೆಗೆ ಬಂದ ಆರಂಭದಲ್ಲಿ ಕೆ.ಜಿಗೆ 50ಕ್ಕೆ ಸಿಗುತ್ತಿದ್ದ ಅವರೇಕಾಯಿ ಹಾಗೂ ತೊಗರಿಕಾಯಿ ಬೆಲೆ ಹೆಚ್ಚಳವಾಗಿದೆ. ಅವರೇಕಾಯಿ ಕೆ.ಜಿಗೆ 50 ರಿಂದ 60 ಇದ್ದರೆ, ತೊಗರಿಕಾಯಿ 70 ರಿಂದ 80 ತಲುಪಿದೆ. ದರ ಹೆಚ್ಚಾದರೂ ಚಳಿಗಾಲದ ವಿಶೇಷ ತರಕಾರಿಯಾಗಿರುವ ಅವರೇ, ತೊಗರಿ ಖರೀದಿ ಉತ್ಸಾಹ ಮಾತ್ರ ಕುಂದಿಲ್ಲ.

ಈರುಳ್ಳಿ ದರ ಏರಿಕೆ: 15 ದಿನಗಳ ಹಿಂದೆ 100ಕ್ಕೆ 5 ರಿಂದ 6 ಕೆ.ಜಿ ಸಿಗುತ್ತಿದ್ದ ಈರುಳ್ಳಿ ಪ್ರಸ್ತುತ 3 ಕೆ.ಜಿ ಸಿಗುತ್ತಿದೆ. ಚಿಲ್ಲರೆಯಾಗಿ ಖರೀದಿಸಿದರೆ ಕೆ.ಜಿಗೆ ₹ 40 ಪಾವತಿಸಬೇಕು. ಗಾತ್ರ ಹಾಗೂ ಗುಣಮಟ್ಟದ ಮೇಲೆ ದರ ಹೆಚ್ಚು ಕಡಿಮೆ ಇದೆ.

ಮೊಟ್ಟೆ ಒಂದಕ್ಕೆ 8: ಚಳಿಗಾಲದಲ್ಲಿ ಮೊಟ್ಟೆಗಳ ಸೇವನೆ ಹೆಚ್ಚಾಗಿರುವುದು ಹಾಗೂ ಉತ್ಪಾದನೆ ಕುಸಿದಿರುವುದು ದರ ಹೆಚ್ಚಳಕ್ಕೆ ಕಾರಣ. ಕ್ರಿಸ್ಮಸ್ ಹಾಗೂ ಹೊಸ ವರ್ಷ ಸನಿಹದಲ್ಲಿದ್ದು, ಕೇಕ್ಗಳ ತಯಾರಿಕೆಗೆ ಹೆಚ್ಚು ಮೊಟ್ಟೆಗಳನ್ನು ಬಳಕೆ ಮಾಡುವುದರಿಂದ ಬೆಲೆ ಮತ್ತಷ್ಟು ಹೆಚ್ಚಾಗಬಹದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.