ಇಂದು ವಿಶ್ವ ಮಣ್ಣು ದಿನ: ಹಲವು ಕಾರ್ಯಕ್ರಮ
‘ಮಣ್ಣಿನ ಆರೈಕೆ: ಅಳತೆ ಮೇಲ್ವಿಚಾರಣೆ ಮತ್ತು ನಿರ್ವಹಣೆ’ ಎಂಬುದು 2024ರ ವಿಶ್ವ ಮಣ್ಣು ದಿನದ ಧ್ಯೇಯವಾಕ್ಯವಾಗಿದೆ. ಮಣ್ಣಿನ ಗುಣ–ಲಕ್ಷಣ ಗುಣಮಟ್ಟ ಮೌಲ್ಯಮಾಪನ ಮಣ್ಣಿನ ಮಾದರಿಗಳ ಬಗ್ಗೆ ವಿಜ್ಞಾನಿಗಳು 100ಕ್ಕೂ ಹೆಚ್ಚಿನ ರೈತರಿಗೆ ಮಾಹಿತಿ ನೀಡಲಿದ್ದಾರೆ. ಆಹಾರ ಭದ್ರತೆ ಹವಾಮಾನ ಬದಲಾವಣೆ ತಗ್ಗಿಸುವಿಕೆ ಬೇಸಾಯದ ಬಗ್ಗೆ ಚರ್ಚೆ ನಡೆಯಲಿದೆ. ತಜ್ಞರು ಮಣ್ಣಿನ ಸ್ವಾಸ್ತ್ಯ ಕಾಪಾಡುವ ಬಗ್ಗೆ ಮಾಹಿತಿ ನೀಡುವರು ಎಂದು ಕೃಷಿ ಇಲಾಖೆ ನಿರ್ದೇಶಕ ಎನ್.ಜಿ.ಅಮೃತೇಶ್ವರ ತಿಳಿಸಿದರು.