ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದ ಆರೋಪ ಸತ್ಯಕ್ಕೆ ದೂರ

Last Updated 29 ಜುಲೈ 2016, 11:25 IST
ಅಕ್ಷರ ಗಾತ್ರ

ಚಾಮರಾಜನಗರ: ‘ರೈತ ಸಂಘದ ಮುಖಂಡರಿಗೆ ಚೆಂಡು ಹೂ ಸಂಸ್ಕರಣಾ ಘಟಕದ ಬಗ್ಗೆ ಸಭೆ ನಡೆಸಿ ಮನವರಿಕೆ ಮಾಡಿಕೊಡಲಾಗಿದೆ. ಈಗ ಅವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಜಿಲ್ಲಾಧಿ ಕಾರಿ ಬಿ.ರಾಮು ಸ್ಪಷ್ಟಪಡಿಸಿದರು.

‘ಸಂಸ್ಕರಣಾ ಘಟಕ ಸ್ಥಾಪನೆಯಾದರೆ ರೋಗರುಜಿನ ಕಾಡಲಿವೆ. ಚೆಂಡು ಹೂ ಸಂಸ್ಕರಿಸಿದ ನೀರಿನಿಂದ ಅಂತರ್ಜಲ ಕಲುಷಿತಗೊಳ್ಳಲಿದೆ ಎನ್ನುವ ಊಹಾ ಪೋಹದ ಮಾತು ಆಡುವುದರಲ್ಲಿ ಅರ್ಥವಿಲ್ಲ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಮಿಳುನಾಡಿನ ಬಣ್ಣಾರಿಯಲ್ಲಿ ಚೆಂಡು ಹೂ ಸಂಸ್ಕರಣಾ ಘಟಕವಿದೆ. ಅಲ್ಲಿಗೆ ರೈತ ಮುಖಂಡರು ಮತ್ತು ಗ್ರಾಮ ಸ್ಥರ ತಂಡ ತೆರಳಿ ಪರಿಶೀಲನೆ ನಡೆಸಲು ಚೀನಾ ಮೂಲದ ಕಂಪೆನಿಯೇ ವ್ಯವಸ್ಥೆ ಮಾಡಲಿದೆ. ಸಭೆ ಮತ್ತು ಪ್ರತಿಭಟನಾ ಸ್ಥಳದಲ್ಲಿಯೂ ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಅವರು ಪರಿಶೀಲನೆ ನಡೆಸಲು ಸಿದ್ಧರಿಲ್ಲ ಎಂದರು.
‘ಇನ್‌ವೆಸ್ಟ್‌ ಕರ್ನಾಟಕ’ದ ಹೆಸರಿ ನಡಿ ಈ ಘಟಕ ಸ್ಥಾಪನೆಯಾಗುತ್ತಿದೆ. ಇದಕ್ಕೆ ಯಾವುದೇ ಸರ್ಕಾರಿ ಜಾಗ ನೀಡಿಲ್ಲ. ಕಂಪೆನಿಯೇ ರೈತರಿಂದ 58 ಎಕರೆ ಜಮೀನು ಖರೀದಿಸಿದೆ. ಉದ್ಯೋಗ ಮಿತ್ರದಡಿ ಸಲ್ಲಿಸಿದ ಪ್ರಸ್ತಾವದ ಹಿನ್ನೆಲೆಯಲ್ಲಿ ನಾನು ಕಾನೂ ನಾತ್ಮಕವಾಗಿ ಜಮೀನಿಗೆ ಅನುಮೋದನೆ ನೀಡಿದ್ದೇನೆ’ ಎಂದು ವಿವರಿಸಿದರು.


ಇದೊಂದು ಆಗ್ರೋ ಕಾರ್ಖಾನೆ. ಇದರಿಂದ ಜಿಲ್ಲೆಯ 8 ಸಾವಿರಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ. ಹಲವು ಮಂದಿಗೆ ಉದ್ಯೋಗ ಲಭಿಸಲಿದೆ. ಜಿಲ್ಲೆಯು ಕೈಗಾರಿಕೆಗಳು ಇಲ್ಲದೆ ಅಭಿ ವೃದ್ಧಿ ಪಥದಲ್ಲಿ ಸಾಗುತ್ತಿಲ್ಲ. ಇಲ್ಲಿಗೆ ಕಾರ್ಖಾನೆ ಸ್ಥಾಪಿಸಲು ಬರುವವರಿಗೆ ಅಡ್ಡಿಪಡಿಸುವುದರಲ್ಲಿ ಅರ್ಥವಿದೆಯೇ? ಎಂದು ಪ್ರಶ್ನಿಸಿದರು.
ಉದ್ದೇಶಿತ ಘಟಕದಿಂದ 3 ಕಿ.ಮೀ. ದೂರದಲ್ಲಿ ಹಳ್ಳಿಗಳಿವೆ. ವೈಜ್ಞಾನಿಕವಾಗಿ ಪರಿಕರ ಬಳಸಿ ಘಟಕ ಸ್ಥಾಪಿಸಲಾಗುತ್ತದೆ. ಚೆಂಡು ಹೂ ಸಂಸ್ಕರಿಸಿದ ನೀರನ್ನು ಶುದ್ಧೀಕರಿಸಿ ಗಿಡ ಬೆಳೆಸಲು ಬಳಸಲಾಗು ತ್ತದೆ. ರೈತ ಸಂಘದ ಮುಖಂಡರು ಅನ ಗತ್ಯವಾಗಿ ಅಡ್ಡಿಪಡಿಸಬಾರದು. ಘಟಕ ಸ್ಥಾಪನೆಗೆ ಸಹಕರಿಸಬೇಕು ಎಂದರು.

‘ಶೀಘ್ರವೇ, ಮತ್ತೊಮ್ಮೆ ಘಟಕದ ಸ್ಥಳಕ್ಕೆ ತಜ್ಞರು ಭೇಟಿ ನೀಡಿ ಪರಿಶೀಲಿ ಸಲಿದ್ದಾರೆ. ಈ ವೇಳೆ ಗ್ರಾಮಸ್ಥರು ಮತ್ತು ರೈತ ಮುಖಂಡರಿಗೂ ಮಾಹಿತಿ ನೀಡ ಲಾಗುವುದು. ನಾನು ಖುದ್ದಾಗಿ ಜನರು ಮತ್ತು ಹೋರಾಟಗಾರರ ಅಹ ವಾಲು ಆಲಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಆ ಭಾಗದಲ್ಲಿ ಅಂತರ್ಜಲಮಟ್ಟ 600 ಅಡಿವರೆಗೆ ಇದೆ. ಚೆಂಡು ಹೂ ಸಂಸ್ಕರಿಸಿದ ನೀರು 2ರಿಂದ 3 ಅಡಿವರೆಗೆ ಇಂಗಲಿದೆ. ಇದರಿಂದ ಅಂತರ್ಜಲ ಕಲುಷಿತಗೊಳ್ಳುವ ಅಪಾಯ ಇಲ್ಲ. ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸು ವುದು ತಪ್ಪು. ಕಾರ್ಖಾನೆಯಿಂದ ಅನಾ ಹುತಗಳು ಸಂಭವಿಸಿದರೆ ಅದಕ್ಕೆ ಬೀಗ ಮುದ್ರೆ ಹಾಕಲು ಕ್ರಮವಹಿಸುತ್ತೇನೆ. ಅದಕ್ಕೂ ಮೊದಲು ಘಟಕ ಸ್ಥಾಪನೆಗೆ ಅವಕಾಶ ಮಾಡಿಕೊಡುವುದು ಒಳಿತು’ ಎಂದು ಹೇಳಿದರು.

ರೈತ ಸಂಘದ ಪ್ರತಿಭಟನೆ: ಗುಂಡ್ಲುಪೇಟೆ ತಾಲ್ಲೂಕಿನ ಕಗ್ಗಳದಹುಂಡಿ ಬಳಿ ಚೆಂಡು ಹೂ ಸಂಸ್ಕರಣಾ ಘಟಕ ಸ್ಥಾಪನೆ ವಿರೋ ಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಗ್ರಾಮಸ್ಥರ ಮೇಲೆ ಪೊಲೀಸರ ನಡೆಸಿದ ದೌರ್ಜನ್ಯ ಖಂಡಿಸಿ ನಗರದಲ್ಲಿ ಗುರುವಾರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಭುವನೇಶ್ವರಿ ವೃತ್ತದಲ್ಲಿ ರಸ್ತೆತಡೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.

ಘಟಕದ ಸ್ಥಾಪನೆಯಿಂದ ಪರಿಸರ ಮಾಲಿನ್ಯವಾಗಲಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಬೀರಲಿದೆ. ಘಟಕದಿಂದ ಹೊರಬರುವ ತ್ಯಾಜ್ಯವನ್ನು ಎಲ್ಲಿಗೆ ಸಾಗಿಸಲಾಗುತ್ತದೆ ಎನ್ನುವ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರ ಖಂಡನೀಯ. ಕೂಡಲೇ, ಬಂಧಿಸಿರುವ ರೈತರನ್ನು ಬಿಡುಗಡೆಗೊಳಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್‌, ಪ್ರಧಾನ ಕಾರ್ಯದರ್ಶಿ ಡಾ.ಗುರು ಪ್ರಸಾದ್‌, ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT