ಯಳಂದೂರು: ಬಿಳಿಗಿರಿರಂಗನಬೆಟ್ಟ ವಿಶ್ವದಲ್ಲೇ ಅಪರೂಪದ ವನ್ಯಪ್ರಾಣಿ ಧಾಮ. ಇದರ ಜತೆಗೆ ಬಿಳಿಗಿರಿರಂಗನಾಥಸ್ವಾಮಿ ದೇಗುಲವೂ ಪ್ರಸಿದ್ಧಿ.ಇಷ್ಟೆಲ್ಲಾ ಮಹತ್ವ ಪಡೆದಿರುವ ಬೆಟ್ಟದಲ್ಲಿ ರಥದ ಬೀದಿಯೂ ಪ್ರಮುಖವಾದುದು. ಪ್ರತಿ ವರ್ಷ ಇಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತದೆ. ಇದರ ಅಕ್ಕಪಕ್ಕ ಬಹುತೇಕ ಜನಾಂಗದವರ ಮಂಟಪಗಳೂ ಇವೆ.

ಇಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿದ್ದರೂ ಅವ್ಯಾಹತವಾಗಿ ಬಳಸಲಾಗುತ್ತದೆ. ಈ ತ್ಯಾಜ್ಯವು ವಿಲೇವಾರಿಯಾಗದೇ ರಸ್ತೆಯ ಅಕ್ಕಪಕ್ಕದ್ಲ್ಲಲಿ ಹಾಗೂ ಚರಂಡಿಗಳಲ್ಲೇ ಕೊಳೆತು ನಾರುತ್ತಿದೆ. ಮಳೆಗಾಲ ಆರಂಭವಾಗುವ ಸೂಚನೆ ಇರುವುದರಿಂದ ಇದೆಲ್ಲಾ ಕಾಡಿಗೆ ಸೇರಿ ವನ್ಯ ಪ್ರಾಣಿಗಳ ಹೊಟ್ಟೆ ಸೇರುವ ಅಪಾಯವಿದೆ.

ಆದರೆ, ಇದನ್ನು ಸ್ವಚ್ಛಗೊಳಿಸಲು ದೇಗುಲದ ಆಡಳಿತ ಮಂಡಳಿ ಹಾಗೂ ಯರಗಂಬಳ್ಳಿ ಗ್ರಾಮ ಪಂಚಾಯಿತಿ ನಡುವೆ ಆಗಾಗ ವಾಗ್ಯುದ್ಧಗಳು ನಡೆಯುವುದರಿಂದ ಕಸ ಇಲ್ಲೇ ಬಿದ್ದಿರುತ್ತದೆ. ಇಲ್ಲಿಂದ ಗ್ರಾಮ ಪಂಚಾ ಯಿತಿಗೆ ಯಾವುದೇ ಆದಾಯವಿಲ್ಲ. ಕೇಂದ್ರ ಸ್ಥಾನದಿಂದ ಇದೂ ದೂರವಿದೆ.

ಕನಿಷ್ಟ ಸುಂಕದ ಹಕ್ಕನ್ನಾದರೂ ಪಂಚಾಯಿತಿಗೆ ವಹಿಸುವಂತೆ ಹಲವು ದಿನಗಳಿಂದಲೂ ಬೇಡಿಕೆ ಇದೆ. ಆದರೆ, ಮುಜರಾಯಿ ಇಲಾಖೆ ಇದಕ್ಕೆ ಮಣೆ ಹಾಕಿಲ್ಲ. ಅಲ್ಲದೆ ಕೂಲಿಯಾಳುಗಳು ಸಹ ಸಿಕ್ಕಿಲ್ಲ. ಹಾಗಾಗಿ ಇಲ್ಲಿನ ಸ್ವಚ್ಛತೆಗೆ ಗಮನ ಹರಿಸುತ್ತಿಲ್ಲ ಎಂಬುದು ಹಲವರ ದೂರು.

ಈ ಬಗ್ಗೆ ಹಲವು ಬಾರಿ ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆ ಗಳಲ್ಲೂ ಚರ್ಚೆ ನಡೆದಿದೆ. ಇದಕ್ಕೆ ದೇಗುಲದ ಆಡಳಿತ ಮಂಡಳಿ ಸ್ವಚ್ಛತೆಗೆ ಅನುದಾನ ಇಲ್ಲ ಹಾಗೂ ಕೂಲಿ ಯಾಳುಗಳ ಕೊರತೆ ಇರುವ ನೆಪವೊಡ್ಡುವುದರಿಂದ ತ್ಯಾಜ್ಯವೆಲ್ಲಾ ಇಲ್ಲೇ ಕೊಳೆತು ನಾರುತ್ತದೆ.

`ರಾಜ್ಯಾದ್ಯಂತ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿ ಮೂಗು ಮುಚ್ಚಿ ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈಗಲಾದರೂ ಸಂಬಂಧಪಟ್ಟವರು ಇದರ ಸ್ವಚ್ಚತೆಗೆ ಗಮನ ಹರಿಸಲಿ~ ಎಂಬುದು ಸ್ಥಳೀಯರಾದ ನಾಗೇಂದ್ರ, ಜಡೇಗೌಡ, ಮಾದೇಗೌಡ ಸೇರಿದಂತೆ ಹಲವರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.