ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಬೆಟ್ಟದಲ್ಲಿ ರಥೋತ್ಸವ

Last Updated 15 ಜನವರಿ 2012, 8:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ : ತಾಲ್ಲೂಕಿನ ಪುರಾತನ ದೇವಾಲಯ ಗಳಲ್ಲಿ ಹುಲುಗಿನ ಮರಡಿ  ವೆಂಕಟೇಶ್ವರ ದೇವಾಲ ಯವು ಒಂದು. ವ್ಯಾಘ್ರಾಸುರನೆಂಬ ರಾಕ್ಷಸನನ್ನು ಕೊಂದು ಶಾಪ ವಿಮೋಚನೆ ಮಾಡಿ ವಿಷ್ಣು ನೆಲೆಸಿದ ಕ್ಷೇತ್ರವಾಗಿರುವುದರಿಂದ ಇದನ್ನು “ವ್ಯಾಘ್ರಾದ್ರಿ” ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಇತ್ತೀಚೆಗೆ ಇಲ್ಲಿ ರಾಜಗೋಪುರ ನಿರ್ಮಾಣ ಮಾಡಿದ್ದು, ದೇವಾಲಯದ ಅಂದ ಹೆಚ್ಚಿಸಿದೆ. ಪ್ರತಿ ವರ್ಷ ಸಂಕ್ರಾಂತಿ ದಿನದಂದು ರಥೋತ್ಸವವು ಜರುಗಲಿದ್ದು, ತಮಿಳುನಾಡು ಹಾಗೂ ಕೇರಳದ ಕಡೆಯಿಂದಲೂ ಭಕ್ತರು ಆಗಮಿಸುತ್ತಾರೆ. ರಥೋತ್ಸವದ ವೇಳೆ ಗರುಡವೊಂದು ರಥದ ಮೇಲೆ ಪ್ರದಕ್ಷಿಣೆ ಹಾಕುವುದನ್ನು ನೋಡಲು ಜನರು ಮುಗಿ ಬೀಳುತ್ತಾರೆ.

ಸಂಕ್ರಾಂತಿ ಹಬ್ಬದಂದು ಹೆಚ್ಚಿನ ಜನ ಸೇರುವು ದರಿಂದ ಈ ಬೆಟ್ಟವನ್ನು ಹಳ್ಳಿಗಳಲ್ಲಿ `ಸಂಕ್ರಾಂತಿ ಬೆಟ್ಟ~ ಎಂದು ಕರೆಯು ತ್ತಾರೆ. ನೂತನವಾಗಿ ವಧೂ-ವರರು ರಥಕ್ಕೆ ಹಣ್ಣು ಮತ್ತು ಧವನ ಎಸೆಯುವುದು ವಾಡಿಕೆ.
ಈ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ರಸ್ತೆ ಸಂಪೂರ್ಣವಾಗಿ ಹಾಳಾಗಿ ರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆ. ಮೂಲಸೌಲಭ್ಯದ ಕೊರತೆ ಇದೆ. ಇದನ್ನು ಉತ್ತಮ ಪ್ರವಾಸಿ ತಾಣ ಮಾಡಿದರೆ ಜಿಲ್ಲೆಯ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿಸಿದಂತಾಗುತ್ತದೆ.

ಮೂರು ಬೆಟ್ಟಗಳನ್ನು ಹಂತ ಹಂತವಾಗಿ ಕಣಿವೆ ಯಾಕಾರದಲ್ಲಿ ಸುತ್ತಿ ಹೋದರೆ ದೇವಸ್ಥಾನ ಸಿಗುತ್ತದೆ. ವಿಶಾಲವಾದ ಅಂಗಳದಲ್ಲಿ ಪುರಾತನ ಬಾಗಿಲುಗಳನ್ನೊಳಗೊಂಡ ದೇವಾಲ ಯದ ಮೇಲಿನ ಗೋಪುರದಲ್ಲಿ ರಾಮ, ಕೃಷ್ಣ, ವಿಷ್ಣು, ಲಕ್ಷ್ಮಿ ವಿಗ್ರಹ ಕೆತ್ತಿರು ವುದು ನೋಡುಗರನ್ನು ಆಕರ್ಷಿಸುತ್ತದೆ.

ದೇವಾಲಯದ ಮುಂದೆ ಬಲಿಪೀಠ, ಒಳಕ್ಕೆ ಹೋದರೆ ದಶಾವ ತಾರದ ಪಟಲ ಗಳು, ಮುರಿದ ರಥದ ಅವಶೇಷ, ಆರಾಧನೆ ಸಮಯದಲ್ಲಿ ಬಾರಿಸುವ ಬೃಹತ್ ಘಂಟೆ ಹಾಗೂ ಹಿತ್ತಾಳೆ ಗರುಡ ಕಂಬವಿದೆ.

ಸುಮಾರು ನಾಲ್ಕು ದ್ವಾರ ದಾಟಿದರೆ ಒಳಗೆ ದೇವರ ಗರ್ಭಗುಡಿ ಎದು ರಾಗುತ್ತದೆ. ವೆಂಕಟೇಶ್ವರನ ಕೈಯಲ್ಲಿ ಶಂಖ, ಚಕ್ರ, ಗದಾಧಾರಿಯಾಗಿ ಅಭಯ ಹಸ್ತದಲ್ಲಿರುವ ವಿಗ್ರಹ ನೋಡ ಬಹುದು. ಹೂವಿನ ರಾಶಿಯೊಂದಿಗೆ ಅಲಂಕರಿಸಿ ಕೊಂಡಿರುವ ವಿಗ್ರಹ ಭಕ್ತರಿಗೆ ಆನಂದ ನೀಡುತ್ತದೆ.

ದೇವಾಲಯದ ಹೊರ ಅಂಗಳದ ಎಡಗಡೆ ಬಂಡೆಯಲ್ಲಿ ಬೃಹತ್ ಆಂಜನೇಯನ ಕೆತ್ತನೆ ಇದೆ. ಇಲ್ಲಿಯೇ ನಾಗಪ್ರತಿಷ್ಠೆಯೂ ಆಗಿದೆ. ದೇವಾಲಯದ ಹಿಂಭಾಗ ಪ್ರಕೃತಿ ತನ್ನ ಸೊಬಗನ್ನು ಸೂರೆಗೊಳ್ಳುತ್ತಿದೆ. ಅರಳೀಮರ, ಕೊಳಗಳು, ಮಂಟಪಗಳು ಇವೆ. ಇಲ್ಲಿಯೇ ಜಾರುಕಲ್ಲು ದೊಣೆ ಎಂಬ ಬಾಣದ ಗುರುತಿನ ಕೊಳವಿದೆ. ಇಲ್ಲಿ ಭಕ್ತರು ಜಳಕ ಮಾಡುತ್ತಾರೆ.

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT