ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮುದಾಯ’ ಜಾತಿ ಸೂಚಕವಲ್ಲ

ಸಮುದಾಯಭವನಗಳು ಬಳಕೆಗೆ ಮುಕ್ತವಾಗಬೇಕು: ಕಾಂಗ್ರೆಸ್ ಮುಖಂಡ ವಿಶ್ವನಾಥ್
Last Updated 31 ಜನವರಿ 2017, 7:36 IST
ಅಕ್ಷರ ಗಾತ್ರ

ಯಳಂದೂರು: ಈಚೆಗೆ ಪ್ರತಿ ಗ್ರಾಮ ಗಳಲ್ಲೂ ಜಾತಿಗೊಂದರಂತೆ ಸಮುದಾಯ ಭವನ ನಿರ್ಮಿಸಲಾಗು ತ್ತಿದೆ. ಆದರೆ, ಸಮುದಾಯ ಎಂಬುದಕ್ಕೆ ವಿಶಾಲ ಅರ್ಥವಿದೆ. ಇದು ಜಾತಿಗೆ ಮಿತಗೊಳ್ಳದೆ ಎಲ್ಲರ ಬಳಕೆಗೂ ಬರುವ ಮುಕ್ತ ಭವನಗಳಾಗಬೇಕು ಎಂದು ಕಾಂಗ್ರೆಸ್‌ ಮುಖಂಡ ಎಚ್. ವಿಶ್ವನಾಥ್ ಸಲಹೆ ನೀಡಿದರು.

ಅವರು ತಾಲ್ಲೂಕಿನ ಟಿ. ಹೊಸೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಕನಕ ಸಮುದಾಯಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ದೇಗುಲಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಪದ್ಧತಿ ಜೀವಂತವಾಗಿದೆ. ಇದರ ಬದಲು ಆಸ್ಪತ್ರೆ, ಶಾಲೆಗಳನ್ನು ಕಟ್ಟಲು ರಾಜಕಾರಣಿಗಳ ನೆರವು ಪಡೆಯ ಬೇಕು.  ರಾಜ್ಯದ ಜನಸಂಖ್ಯೆ ಯಲ್ಲಿ ಶೇ  9ರಷ್ಟು ಹಾಗೂ ಭಾರತದಲ್ಲಿ 12 ಕೋಟಿ ಕುರುಬ ಸಮಾಜಕ್ಕೆ ಸೇರಿದವರು ಇದ್ದಾರೆ. ಆದರೆ ಇವರು ಇಂದೂ ಕೂಡ ಹಿಂದುಳಿದ ವರ್ಗದಲ್ಲೇ ಗುರುತಿಸಿ ಕೊಂಡಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಲು ‘ಶೆಫಡರ್್ ಇಂಡಿಯಾ ಇಂಟರ್‌ ನ್ಯಾಷನಲ್ ಸೊಸೈಟಿ’ ಶ್ರಮಿಸುತ್ತಿದೆ ಎಂದರು.

ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಶ್ರೇಯೋಭಿ ವೃದ್ಧಿಗೆ ₹ 19,500 ಕೋಟಿ  ಮೀಸಲಿ ಟ್ಟಿದೆ. ಇದು ಭಾರತದಲ್ಲೇ ರಾಜ್ಯ ವೊಂದು ನೀಡಿರುವ ಅತ್ಯಂತ ಹೆಚ್ಚಿನ ಮೊತ್ತವಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೂ ಅನೇಕ ಯೋಜನೆಗಳನ್ನು ರೂಪಿಸಿದೆ. ಸಮುದಾಯ ಭವನಗಳು ನಿರಂತರ ರಚನಾತ್ಮಕ ಚಟುವಟಿಕೆ ಯಿಂದ ಕೂಡಿರಬೇಕು. ಜೊತೆಗೆ ಕನಕ ದಾಸರ  ತತ್ವಾದರ್ಶಗಳ ಪಾಲನೆಯಾಗ ಬೇಕು ಎಂದರು.

ಶಾಸಕ ಎಸ್.ಜಯಣ್ಣ, ಶಿವಾನಂದ ಪುರಿ ಮಹಾಸ್ವಾಮಿ, ಅಶೋಕ್ ಗುರೂಜಿ, ಮಾಜಿ ಶಾಸಕ ಎಸ್.ಬಾಲ ರಾಜು, ಜಿ.ಪಂ. ಸದಸ್ಯರಾದ ಉಮಾವತಿ ಸಿದ್ದರಾಜು, ಜೆ. ಯೋಗೇಶ್, ಕೆ.ಪಿ.ಸದಾಶಿವಮೂರ್ತಿ, ಮಾಜಿ ಸದಸ್ಯ ಸಿದ್ದರಾಜು, ತಾ.ಪಂ. ಅಧ್ಯಕ್ಷ ನಂಜುಂ ಡಯ್ಯ, ಸದಸ್ಯರಾದ ವೆಂಕಟೇಶ್, ನಿಂರಂಜನ್, ಸಮಾಜ ಸೇವಕ ದುಗ್ಗಹಟ್ಟಿ ಪಿ.ವೀರಭದ್ರಪ್ಪ, ಮುಖಂಡ ಕಿನಕಹಳ್ಳಿ ರಾಚಯ್ಯ, ನಟರಾಜ್, ನಂಜೇಗೌಡ, ಚಿನ್ನಸ್ವಾಮಿ, ಎಲ್.ರಾಜೇ ಗೌಡ, ಸುಬ್ಬಣ್ಣ, ಸೋಮಣ್ಣೇಗೌಡ, ಮಾದಯ್ಯ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಹಾದೇವೇಗೌಡ, ಚಂದ್ರಶೇಖರ್, ನಂಜುಂಡೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT