ಭಾನುವಾರ, ಮಾರ್ಚ್ 29, 2020
19 °C

ಚಾಮರಾಜನಗರ: ಕೊಡಗು ಸಂತ್ರ‌ಸ್ತರಿಗೆ ಸಹಾಯಹಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಕೊಡಗಿನ ನೆರೆ ಸಂತ್ರಸ್ತರಿಗೆ ಸಾರ್ವಜನಿಕರು ನೀಡುವ ಅವಶ್ಯ ವಸ್ತುಗಳನ್ನು ಸಂಗ್ರಹಿಸಲು ಜಿಲ್ಲಾಡಳಿತ ಪಟ್ಟಣದ ವಾಲ್ಮೀಕಿ ಭವನದಲ್ಲಿ ತೆರೆದಿರುವ ಸಂಗ್ರಹಣಾ ಕೇಂದ್ರಕ್ಕೆ ಎರಡು ದಿನಗಳಲ್ಲಿ ದೊಡ್ಡ ಮಟ್ಟಿನ ನೆರವು ಹರಿದು ಬಂದಿಲ್ಲ.

ಬುಧವಾರ ಕೊಳ್ಳೇಗಾಲದ ನಿವಾಸಿ ರಾಮಯ್ಯ ಅವರು ₹12 ಸಾವಿರ ಮೊತ್ತದ ಅವಶ್ಯಕ ಸಾಮಗ್ರಿಗಳನ್ನು ಕೇಂದ್ರಕ್ಕೆ ತಲುಪಿಸಿದ್ದಾರೆ. ಎಲ್‌ಐಸಿ ಉದ್ಯೋಗಿ ಆಗಿರುವ ಅವರು, ವೈಯಕ್ತಿಕವಾಗಿ ಈ ನೆರವು ನೀಡಿರುವುದಾಗಿ ತಿಳಿಸಿದರು.

ಉಳಿದಂತೆ ಖಾಸಗಿ ವ್ಯಕ್ತಿಗಳು, ಸಂಘಟನೆಗಳು, ಕೊಡಗು ಹಾಗೂ ಕೇರಳದ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ. 

ಬಕ್ರೀದ್‌ ಹಬ್ಬದ ದಿನವಾದ ಬುಧವಾರ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ದೇಣಿಗೆ ಸಂಗ್ರಹಿಸಿದ್ದಾರೆ. ಪಟ್ಟಣದ ಪಟೇಲ್ ಬಜಾಜ್ ಷೋ ರೂಂ ಮಾಲೀಕ ಎಚ್.ಎಂ.ಪುಟ್ಟಮಾದಪ್ಪ ಹಾಗೂ ಅವರ ಮಗ ಹರ್ಷ ಪಟೇಲ್ ಗ್ರಾನೈಟ್ ಮಾಲೀಕ ಪಿ.ವೃಷಬೇಂದ್ರಪ್ಪ ಅವರು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ 1 ಲಕ್ಷದ ಚೆಕ್‌ ನೀಡಿದ್ದಾರೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು