ಯಳಂದೂರು: ಸಂಭ್ರಮದ ಗಣೇಶ ಚತುರ್ಥಿ

7

ಯಳಂದೂರು: ಸಂಭ್ರಮದ ಗಣೇಶ ಚತುರ್ಥಿ

Published:
Updated:
Deccan Herald

ಯಳಂದೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ಗಣೇಶ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಅಚರಿಸಲಾಯಿತು.

ಹಬ್ಬದ ನಿಮಿತ್ತ ತಾಲ್ಲೂಕಿನ ಐತಿಹಾಸಿಕ ಎಳೆಪಿಳ್ಳಾರಿ ವಿನಾಯಕ ದೇವರ ಸನ್ನಿಧಿ, ಪಟ್ಟಣದ ವರಾಹಸ್ವಾಮಿ ದೇಗುಲದ ಬಲಬದಿಯಲ್ಲಿರುವ ಗೋಡೆ ಗಣಪತಿ ದೇಗುಲ ಹಾಗೂ ಪಟ್ಟಣದ ಬಳೇಪೇಟೆಯ ಬಲಮುರಿ ವಿನಾಯಕ ದೇಗುಲಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿತು.

ತಾಲ್ಲೂಕಿನ ಹಲವು ಗ್ರಾಮಗಳ ಬೀದಿಬೀದಿಗಳಲ್ಲೂ ಹಸಿರು ಚಪ್ಪರ ಹಾಕಿ ಸಿಂಗರಿಸಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಕೆಲವರು ತಮ್ಮ ತಮ್ಮ ಮನೆಗಳಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಭಕ್ಷ್ಯ, ಹಣ್ಣು, ಪಾನಕಗಳ ನೈವೇದ್ಯ ಇಟ್ಟು ಪೂಜೆ ಮಾಡಿದರು. 

ಕೆಲವರು ಗುರುವಾರವೇ ಮನೆಗಳಲ್ಲಿ ದೊಡ್ಡ ಪಾತ್ರೆಗಳಲ್ಲಿ ಗಣಪನ ಮೂರ್ತಿ ವಿಸರ್ಜಿಸಿದರೆ, ಮತ್ತೆ ಕೆಲವರು ಕಬಿನಿ ಕಾಲುವೆ ಹಾಗೂ ಕೆರೆಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಿದರು.

ಹಬ್ಬದ ಮಾರನೇ ದಿನವಾದ ಶುಕ್ರವಾರ ದೇವರಗುಡ್ಡರು ಹಾಗೂ ದಾಸಯ್ಯರು ತಮ್ಮ ಸಂಪ್ರದಾಯದಂತೆ ಗುಂಪು ಗುಂಪಾಗಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !