ತಮಿಳುನಾಡಿಗೆ ಸಂಚರಿಸದ ವಾಹನಗಳು

7

ತಮಿಳುನಾಡಿಗೆ ಸಂಚರಿಸದ ವಾಹನಗಳು

Published:
Updated:
Deccan Herald

ಚಾಮರಾಜನಗರ: ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರು ನಿಧನ ಹೊಂದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಬಸ್‌ಗಳು ಹಾಗೂ ಖಾಸಗಿ ವಾಹನಗಳು ತಮಿಳುನಾಡಿಗೆ ಸಂಚರಿಸುವುದನ್ನು ಬುಧವಾರ ತಡೆ ಹಿಡಿಯಲಾಗಿತ್ತು.

ಇದರಿಂದಾಗಿ ಪಟ್ಟಣದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಲಾರಿಗಳು ಭಾರಿ ಸಂಖ್ಯೆಯಲ್ಲಿ ನಿಂತಿದ್ದವು. ಕರುಣಾನಿಧಿ ಅವರು ನಿಧನರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಮಂಗಳವಾರ ಸಂಜೆ ಮೊದಲಿಗೆ ಎಲ್ಲ ವಾಹನಗಳ ಸಂಚಾರವನ್ನು ಪೊಲೀಸರು ತಡೆ ಹಿಡಿದಿದ್ದರು. ಆದರೆ, ರಾತ್ರಿ ಖಾಸಗಿ ವಾಹನಗಳಿಗೆ ಗಡಿ ದಾಟಲು ಅವಕಾಶ ನೀಡಲಾಗಿತ್ತು.

ಬುಧವಾರ ಕರುಣಾನಿಧಿ ಅವರ ಅಂತ್ಯಕ್ರಿಯೆ ವಿಚಾರವಾಗಿ ಕೋರ್ಟ್‌ನಲ್ಲಿ ತೀರ್ಮಾನ ಆಗುವವರೆಗೂ ಉದ್ವಿಗ್ನ ಪರಿಸ್ಥಿತಿ ಇದ್ದುದರಿಂದ ಮತ್ತೆ ವಾಹನಗಳ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

‘ಇವತ್ತು ಯಾವುದೇ ಬಸ್‌ಗಳನ್ನು ಬಿಟ್ಟಿಲ್ಲ. ಸಂಚಾರ ಪುನರಾರಂಭ ಮಾಡುವ ಬಗ್ಗೆ ಆದೇಶ ಬಂದಿಲ್ಲ. ಹಾಗಾಗಿ, ಬುಧವಾರ ರಾತ್ರಿಯೂ ಬಸ್‌ ಸಂಚಾರ ಇರುವುದು ಅನುಮಾನ’ ಎಂದು ಕೆಎಸ್‌ಆರ್‌ಟಿಸಿ ಚಾಮರಾಜಮನಗರ ವಿಭಾಗದ ನಿಯಂತ್ರಣಾಧಿಕಾರಿ ಆರ್‌. ಅಶೋಕ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬುಧವಾರ ತಡೆರಾತ್ರಿ‌ವರೆಗೂ ವಾಹನಗಳ ಸಂಚಾರಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !