ವರ್ಣಮಯ ‘ಪ್ರಜಾವಾಣಿ’ ಬಗ್ಗೆ ಓದುಗರು ಏನಂತಾರೆ?

7

ವರ್ಣಮಯ ‘ಪ್ರಜಾವಾಣಿ’ ಬಗ್ಗೆ ಓದುಗರು ಏನಂತಾರೆ?

Published:
Updated:
Deccan Herald

ವರ್ಣಮಯ ‘ಪ್ರಜಾವಾಣಿ’ ಬಗ್ಗೆ ಓದುಗ ಓದುಗರ ಅಭಿಪ್ರಾಯಗಳು...

ಸಂತಸವಾಯಿತು

ಬುದ್ಧಿ ಬಂದ ದಿನಗಳಿಂದಲೂ ನಾನು ‘ಪ್ರಜಾವಾಣಿ’ ಪತ್ರಿಕೆಯನ್ನು ಓದುತ್ತಿದ್ದೇನೆ. ಎಲ್ಲ ಪುಟಗಳು ಬಣ್ಣದಲ್ಲಿ ಪ್ರಕಟವಾಗಿರುವುದನ್ನು ನೋಡಿ ತುಂಬಾ ಸಂತಸವಾಯಿತು. ಪತ್ರಿಕೆಯು ಗುಣಮಟ್ಟ ಕಾಪಾಡಿಕೊಂಡು ಮಹತ್ವದ ಸುದ್ದಿಗಳನ್ನು ಓದುಗರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇದು ನಮಗೆ ಹೆಮ್ಮೆಯ ಸಂಗತಿ.

–ಮಹದೇವ ಶಂಕನಪುರ, ಇತಿಹಾಸ ತಜ್ಞ, ಕೊಳ್ಳೇಗಾಲ

ಹೆಚ್ಚು ಆಕರ್ಷಕ

ಪತ್ರಿಕೆಯ ಎಲ್ಲ ಪುಟಗಳು ವರ್ಣಮಯವಾಗಿ ಬರುತ್ತಿರುವುದರಿಂದ ಮೊದಲಿಗಿಂತ ಈಗ ಹೆಚ್ಚು ಆಕರ್ಷಕವಾಗಿದೆ. 40 ವರ್ಷಗಳಿಂದ ‘ಪ್ರಜಾವಾಣಿ’  ಓದುತ್ತಿದ್ದೇನೆ. ಈ ಪತ್ರಿಕೆ ಓದಿದರೇ ಅದೇನೋ ತೃಪ್ತಿ. ಆಕರ್ಷಕ ಪುಟಗಳ ಜೊತೆಗೆ ಸುದ್ದಿಗಳಿಗೆ ತಕ್ಕಂತೆ ಫೋಟೋಗಳು ಬರುತ್ತಿರುವುದರಿಂದ ಪತ್ರಿಕೆಯ ಗುಣಮಟ್ಟ ಇನ್ನಷ್ಟು ಹೆಚ್ಚಾಗಿದೆ. ಇನ್ನು ಮುಂದೆಯೂ ಈ ವಿನ್ಯಾಸವನ್ನೇ ಕಾಪಾಡಿಕೊಳ್ಳುವಂತಾಗಲಿ.

–ಸ್ನೇಕ್ ಮಹೇಶ್, ಸಂತೇಮರಹಳ್ಳಿ

ಓದುವಂತೆ ಪ್ರೇರೇಪಿಸುತ್ತದೆ

ಬಣ್ಣ ಎಂದರೆ ಆಕರ್ಷಣೆ. ಅದು ನಮ್ಮನ್ನು ತಕ್ಷಣ ಸೆಳೆದುಬಿಡುತ್ತದೆ. ‘ಪ್ರಜಾವಾಣಿ’ಯ ಎಲ್ಲ ಪುಟಗಳು ಬಣ್ಣಮಯವಾಗಿರುವುದು ಖುಷಿ ಕೊಟ್ಟಿದೆ. ಚಿತ್ರಗಳು ಈಗ ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ. ನಿಮ್ಮ ಪತ್ರಿಕೆಯ ಅಕ್ಷರಗಳ ವಿನ್ಯಾಸ ನನಗೆ ತುಂಬಾ ಇಷ್ಟ. ಕಪ್ಪು– ಬಿಳುಪು ಪುಟಗಳು ಓದುಗರನ್ನು ಅಷ್ಟು ಆಕರ್ಷಿಸುವುದಿಲ್ಲ. ಬಣ್ಣದ ಪುಟಗಳು ಸುದ್ದಿಯನ್ನು ಓದುವಂತೆ ಪ್ರೇರೇಪಿಸುತ್ತವೆ.

–ಸಿ.ಎಂ. ನರಸಿಂಹಮೂರ್ತಿ, ಜನಪದ ಕಲಾವಿದ, ಚಾಮರಾಜನಗರ

ಇನ್ನಷ್ಟು ಆಕರ್ಷಣೀಯ

ಎಲ್ಲ ಪುಟಗಳು ಬಣ್ಣದಲ್ಲಿ ಬರುತ್ತಿರುವುದು ಉತ್ತಮ ಬೆಳವಣಿಗೆ. ಸುದ್ದಿ ಸಹ ಉತ್ತಮವಾಗಿ ಬರುತ್ತಿದೆ. ಬಣ್ಣದ ಪುಟಗಳಿಂದಾಗಿ ಪತ್ರಿಕೆ ಇನ್ನಷ್ಟು ಆಕರ್ಷಣೀಯವಾಗಿದೆ. ನೋಡುತ್ತಿದ್ದಂತೆ ಪತ್ರಿಕೆಯನ್ನು ಕೊಂಡು ಓದಬೇಕು ಎನಿಸುತ್ತದೆ. ‘ಪ್ರಜಾವಾಣಿ’ ಎಲ್ಲ ಬಗೆಯಲ್ಲೂ ವಿನೂತನವಾಗಿದೆ.

–ಉಮೇಶ್, ಗುಂಡ್ಲುಪೇಟೆ

ಯುವಜನರನ್ನು ಸೆಳೆಯಲು ಯಶಸ್ವಿ

ನನ್ನ ನೆಚ್ಚಿನ ‘ಪ್ರಜಾವಾಣಿ’ಯ ಪ್ರತಿ ಪುಟವೂ ವೈವಿಧ್ಯಮಯವಾಗಿ ಮೂಡಿ ಬಂದಿದೆ. ಆಧುನಿಕ ಸಮೂಹ ಮಾಧ್ಯಮಗಳ ಬದಲಾದ ಕಾಲಘಟ್ಟದಲ್ಲಿ ಪತ್ರಿಕೆ ಹೊಸತನಕ್ಕೆ ತೆರೆದುಕೊಂಡಿರುವುದು ಸಂತಸವಾಗಿದೆ. ಅಕ್ಷರ ಮತ್ತು ಚಿತ್ರಗಳು ಆಕರ್ಷಕವಾಗಿ ಯುವ ಪೀಳಿಗೆಯನ್ನು ಸೆಳೆಯುವಲ್ಲೂ ಯಶಸ್ವಿಯಾಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸುಂದರ ಅಯಾಮಗಳೊಂದಿಗೆ ನಮ್ಮ ಕೈಸೇರಲಿ. ವಿಭಿನ್ನ ಪ್ರಯೋಗಗಳಿಗೆ ತೆರೆದುಕೊಳ್ಳುವ ಪತ್ರಿಕೆಯು ಜಾಗತಿಕವಾಗಿ ಮನ್ನಣೆ ಗಳಿಸಲಿ.

–ನಿದಾಖಾನುಮ್, ಪದವಿ ವಿದ್ಯಾರ್ಥಿನಿ, ಯಳಂದೂರು

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !