ಬುಧವಾರ, ನವೆಂಬರ್ 13, 2019
17 °C

ಎಸಿಬಿ ದಾಳಿ: ಇಬ್ಬರು ವಶಕ್ಕೆ

Published:
Updated:

ಶಿಡ್ಲಘಟ್ಟ: ಖಚಿತ ಮಾಹಿತಿಯನ್ನಾಧರಿಸಿ ಶಿಡ್ಲಘಟ್ಟ ಉಪನೋಂದಣಾಧಿಕಾರಿಗಳ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳ ತಂಡ ನಡೆಸಿದ ದಾಳಿಯಲ್ಲಿ ₹1 ಲಕ್ಷ ಹಣ ಸೇರಿದಂತೆ ಉಪನೋಂದಣಾಧಿಕಾರಿ ಪ್ರಸಾದ್‌ಕುಮಾರ್ ಮತ್ತು ದ್ವಿತೀಯ ದರ್ಜೆ ಸಹಾಯಕ ಹರೀಶ್ ಅವರನ್ನು ಎಸಿಬಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ನಗರದ ತಾಲ್ಲೂಕು ಕಚೇರಿಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಗೆ ಶುಕ್ರವಾರ ಸಂಜೆ ದಿಢೀರ್ ದಾಳಿ ನಡೆಸಿದ ಎಸಿಬಿ ಡಿವೈಎಸ್‌ಪಿ ವೆಂಕಟೇಶ್‌ನಾಯ್ಡು ನೇತೃತ್ವದ ತಂಡ ಕಚೇರಿಯಲ್ಲಿರುವ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಿ ಕಚೇರಿಯಲ್ಲಿದ್ದ ₹ 1 ಲಕ್ಷ ನಗದು ಸೇರಿದಂತೆ ಉಪನೋಂದಣಾಧಿಕಾರಿ ಪ್ರಸಾದ್‌ಕುಮಾರ್ ಹಾಗೂ ದ್ವಿತೀಯ ದರ್ಜೆ ನೌಕರ ಹರೀಶ್‌ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)