ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಗಂಗಮ್ಮ ದೇಗುಲದ ವಾರ್ಷಿಕೋತ್ಸವ

Last Updated 12 ಜೂನ್ 2022, 6:01 IST
ಅಕ್ಷರ ಗಾತ್ರ

ಚಿಂತಾಮಣಿ: ‘ತೆನೆ ಬಂದ ಭತ್ತವು ಬಾಗುವ ರೀತಿಯಲ್ಲಿ ಮಾನವರು ಅಹಂಕಾರ ತೊರೆದು ದೈವದ ಮುಂದೆ ಬಾಗಲೇಬೇಕು. ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ’ ಎಂದು ಕೈವಾರ ಕ್ಷೇತ್ರದ ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಶನಿವಾರ ನಡೆದ ಶ್ರೀಜಲಗಂಗಮ್ಮ ದೇವಿ ದೇವಾಲಯದ 17ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಕೈವಾರ ತಾತಯ್ಯ ಹಲವಾರು ತತ್ವ ಕೀರ್ತನೆಗಳನ್ನು ರಚಿಸಿ ಭಕ್ತರ ಜನಮಾನಸದಲ್ಲಿ ನೆಲೆಸಿದ್ದಾರೆ. ಒಮ್ಮೆ ತಾತಯ್ಯ ಬಾವಿ ಅಗೆಸಿದಾಗ ನೀರು ಬರಲಿಲ್ಲ. ಆಗ ಮಾತೆಯಾದ ಗಂಗಾ ಭವಾನಿಯನ್ನು ಸ್ತುತಿಸಿ ಏಮಮ್ಮ ಗಂಗಾ ಭವಾನಿ... ಎಂದು ಕೀರ್ತನೆ ಹಾಡುತ್ತಾ ಪ್ರಾರ್ಥಿಸುತ್ತಾರೆ. ತಾತಯ್ಯನವರ ಪ್ರಾರ್ಥನೆಗೆ ಗಂಗಾ ಭವಾನಿಯು ಜಲಧಾರೆಯಾಗಿ ಉದ್ಭವವಾಯಿತು ಎಂಬ ಸಂಗತಿ ಅವರ ಕೀರ್ತನೆ ಹಾಗೂ ಸಾಹಿತ್ಯದಲ್ಲಿದೆ ಎಂದು ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಡಿ. ಕುಮುದ ಮಾತನಾಡಿ, ಮಾನವನಾಗಿ ಹುಟ್ಟಿದ ಮೇಲೆ ಅಧ್ಯಾತ್ಮ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಸುಖ, ದುಃಖದ ನಡುವೆ ಜೀವನ ಸಾಗುತ್ತಿರುತ್ತದೆ. ಕಷ್ಟ ಬಂದಾಗ ಕುಗ್ಗಬಾರದು. ಸುಖ ಬಂದಾಗ ಹಿಗ್ಗಬಾ ರದು. ಜೀವನದಲ್ಲಿ ಸಮನ್ವಯತೆ ಸಾಧಿಸ ಬೇಕು. ಈ ರೀತಿಯಾಗಿ ನಡೆಯಲು ದೈವ ಚಿಂತನೆ ಅಗತ್ಯ ಎಂದರು.

ದೇವಾಲಯದ ಸಂಸ್ಥಾಪಕ ಧರ್ಮದರ್ಶಿ ಈ. ಸಾದಪ್ಪ ಮಾತನಾಡಿದರು. ಸಂಜೆ ಜನಪದ ಕಲಾ ಮೇಳ ಗಳೊಂದಿಗೆ ಹೂವಿನ ಪಲ್ಲಕ್ಕಿ ಉತ್ಸವ ನಡೆಯಿತು. ಗ್ರಾಮದ ಶ್ರೀರಾಮಪ್ಪ, ಕೆ.ಎನ್. ಲಕ್ಷ್ಮಿ ನಾರಾಯಣಪ್ಪ, ನಾರಾಯಣ ಸ್ವಾಮಿ, ಲಕ್ಷ್ಮಿನಾರಾಯ ಣಪ್ಪ, ಶ್ರೀರಾಮರೆಡ್ಡಿ, ಕಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT