ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೋಣಿ ಸ್ವಾಮಿ ಮೂರ್ತಿ ಧ್ವಂಸ

Last Updated 23 ಡಿಸೆಂಬರ್ 2021, 20:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಸೂಸೆಪಾಳ್ಯ ಬಳಿ ಅಂತೋಣಿ ಸ್ವಾಮಿ ಮೂರ್ತಿಯನ್ನು ದುಷ್ಕರ್ಮಿಗಳು ಗುರುವಾರ ಧ್ವಂಸಗೊಳಿಸಿದ್ದಾರೆ.

ಸೂಸೆಪಾಳ್ಯಕ್ಕೆ ಸಾಗುವ ಹಾಗೂ ರಂಗಧಾಮ ಕೆರೆ ಹಿಂಬದಿಯ ರಸ್ತೆಯಲ್ಲಿ ಚಿಕ್ಕಗುಡಿ ನಿರ್ಮಿಸಿ ಅಂತೋಣಿ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಗುರುವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದ್ದು, ಮೂರ್ತಿಯು ಮುರಿದು ಬಿದ್ದು, ದ್ವಾರದ ಗಾಜು‌ಗಳು ಪುಡಿಯಾಗಿವೆ.ಪ್ರತಿ ಮಂಗಳವಾರ ಇಲ್ಲಿ ಕ್ರೈಸ್ತ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಭಗ್ನವಾದ ಮೂರ್ತಿ ಪೊಲೀಸರ ಸುಪರ್ದಿನಲ್ಲಿದೆ. ಸೂಸೆಪಾಳ್ಯದ ಚರ್ಚ್‌ನಿಂದ ಮತ್ತೆ ಹೊಸದಾಗಿ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.

‘42 ವರ್ಷಗಳ ಹಿಂದೆಯೇ ಅಂತೋಣಿ ಸ್ವಾಮಿ ಮೂರ್ತಿಯನ್ನು ಗವಿಯಲ್ಲಿ ಇಡಲಾಗಿತ್ತು. ನಾವು ಯಾರನ್ನೂ ಇಲ್ಲಿ ಮತಾಂತರ ಮಾಡಿಲ್ಲ. ಯಾರ ಭಾವನೆಗಳಿಗೂ ಧಕ್ಕೆ ತರದಂತೆ ಜೀವಿಸುತ್ತಿದ್ದೇವೆ. ಸೂಸೆಪಾಳ್ಯ ಚರ್ಚ್‌ಗೆ 150 ವರ್ಷಗಳ ಇತಿಹಾಸ ಇದೆ’ ಎಂದು ಚರ್ಚ್‌ನ ಪಾದ್ರಿ ಅಂತೋಣಿ ಡ್ಯಾನಿಯಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT