ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಾಸ್ವಾಮಿ ಕೊಲೆ ಪ್ರಕರಣ | ದರ್ಶನ್‌ಗೆ ಗಲ್ಲು ಶಿಕ್ಷೆಯಾಗಲಿ: ನಾರಾಯಣಸ್ವಾಮಿ

Published 13 ಜೂನ್ 2024, 11:21 IST
Last Updated 13 ಜೂನ್ 2024, 11:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು‘ ಎಂದು ಬಿಜೆಪಿ ಮುಖಂಡ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದರ್ಶನ ಅವರ ವರ್ತನೆ ಕಾನೂನಿಗೆ ವಿರುದ್ಧವಾಗಿದೆ. ಸಿನಿಮಾ ನಟರು ಏನು ಮಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಅವರಲ್ಲಿ ಇದೆ. ದೊಡ್ಡ ಸ್ಥಾನಕ್ಕೆ ಹೋದಂತೆ ಸಂಸ್ಕಾರ ಬರಬೇಕು. ಆದರೆ ಇವರದ್ದು ಮ್ಯಾನುಫ್ಯಾಕ್ಚರಿಂಗ್‌ ಡಿಫೆಕ್ಟ್‌’ ಎಂದು ಹೇಳಿದರು.

‘ಇವರ ವಿಚಾರವಾಗಿ ಕಾನೂನುಗಳನ್ನು ಕಠಿಣವಾಗಿ ಜಾರಿಗೊಳಿಸಬೇಕು. ಈ ಹಿಂದಿನಿಂದಲೂ ದರ್ಶನ್ ವರ್ತನೆಗಳು ದುರಹಂಕಾರದಿಂದಲೇ ಕೂಡಿದೆ. ಪತ್ನಿಯ ಮೇಲೆ ಹಲ್ಲೆ, ಮನೆಯ ಮುಂದೆ ನಾಯಿ ಹಿಡಿದುಕೊಂಡು ಹೋದವರ ಮೇಲೆ ಗಲಾಟೆ ಮಾಡಿದ್ದಾರೆ‘ ಎಂದರು.

‘ದರ್ಶನ್ ಅಂಧಾಭಿಮಾನಿಗಳು ಅವರನ್ನು ಸಮರ್ಥಿಸುವ ರೀತಿಯನ್ನು ಯಾರೂ ಒಪ್ಪುವುದಿಲ್ಲ. ಇದೇನು ತಾಲಿಬಾಸ್ ಸ್ಥಿತಿಯೇ’ ಎಂದು ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT