ಕಡ್ಡಾಯವಾಗಿ ಗುರುತಿನ ಚೀಟಿ ಧರಿಸುವಂತೆ ಸಿಬ್ಬಂದಿಗೆ ಸೂಚಿಸಲಾಗುವುದು. ಕಚೇರಿ ಮುಂಭಾಗದ ಚರಂಡಿಗೆ ಸ್ಲ್ಯಾಬ್ ಅಳವಡಿಸಲು ಸಂಬಂಧಪಟ್ಟವರಿಗೆ ತಕ್ಷಣ ತಿಳಿಸಲಾಗುವುದು.
– ಶ್ವೇತಾ ಬಿ.ಕೆ. ತಹಶೀಲ್ದಾರ್ ಚೇಳೂರು
ಪ್ರಮಾಣ ಪತ್ರಕ್ಕೆ ಅಲೆದಾಟ ಸಣ್ಣ ರೈತ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿ 15 ರಿಂದ 20 ದಿನಗಳಾದರೂ ಪ್ರಮಾಣ ಪತ್ರ ದೊರೆತಿಲ್ಲ. ಚೇಳೂರು ತಾಲ್ಲೂಕು ಕಚೇರಿ ಆಡಳಿತ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನವಾಗಿದೆ. ಎಲ್ಲಾ ಪೂರಕ ದಾಖಲೆಗಳನ್ನು ಸಲ್ಲಿಸಿದರೂ ಪ್ರತಿ ದಿನ ಪರದಾಡುವುದು ತಪ್ಪುತ್ತಿಲ್ಲ.
– ಲಕ್ಷ್ಮಣ, ರೈತ
ಕಚೇರಿಗೆ ಅಲೆದಾಟ ಚೇಳೂರಿನಲ್ಲಿ ತಾಲ್ಲೂಕು ಕಚೇರಿ ಇದ್ದರೂ ಖಾತೆ ಬದಲಾವಣೆ ದಾಖಲೆಗಳಿಗಾಗಿ ಬಾಗೇಪಲ್ಲಿ ತಾಲ್ಲೂಕು ಕಚೇರಿ ಅವಲಂಬಿಸಬೇಕಾಗಿದೆ. ಇಲ್ಲಿನ ಅಧಿಕಾರಿಗಳೂ ಸರಿಯಾದ ಮಾಹಿತಿ ನೀಡದೆ ಪ್ರತಿದಿನ ಕಚೇರಿಗಳಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ.