ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೇ ನಂಬರ್‌ ಕೊಡಲು ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಸರ್ವೇಯರ್

Published 4 ಏಪ್ರಿಲ್ 2024, 14:36 IST
Last Updated 4 ಏಪ್ರಿಲ್ 2024, 14:36 IST
ಅಕ್ಷರ ಗಾತ್ರ

ಚಿಂತಾಮಣಿ: ಜಮೀನಿನ ಪೋಡಿ ಮಾಡಿಕೊಡಲು ರೈತರೊಬ್ಬರಿಂದ ಲಂಚ ಪಡೆಯುತ್ತಿರುವ ಸರ್ವೇಯರ್ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತಾಲ್ಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇಯರ್ ವಸಂತಕುಮಾರ್ ಲೋಕಾಯುಕ್ತರ ಬಲೆಗೆ ಬಿದ್ದ ಆರೋಪಿ.

ತಾಲ್ಲೂಕಿನ ಮೋಟಮಾಕಲಹಳ್ಳಿಯ ರೈತ ಕೆ.ಎನ್.ಹರೀಶ ಬಾಬು ತನ್ನ ತಾಯಿಯ ಹೆಸರಿನಲ್ಲಿರುವ 1 ಎಕರೆ 20 ಗುಂಟೆ ಜಮೀನಿಗೆ ಪೋಡಿ ಮಾಡಿ ಸರ್ವೆ ನಂಬರ್‌ಗಾಗಿ ಅರ್ಜಿ ಸಲ್ಲಿಸಿದ್ದರು. ತಿಂಗಳಾನುಗಟ್ಟಲೇ ತಿರುಗಾಡಿಸಿ ನಂತರ ಒಂದು ಸಾವಿರ ಹಣ ನೀಡಿದರೆ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದರು. ನಂತರ ಮತ್ತೆ ಪ್ರಾರಂಭಿಸಿದ ಸರ್ವೇಯರ್ ₹8 ಸಾವಿರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಕೆ.ಎನ್.ಹರೀಶಬಾಬು ಲೋಕಾಯುಕ್ತರಿಗೆ ನೀಡಿರುವ ದೂರಿ ನೀಡಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್ ಸ್ಪೆಕ್ಟರ್ ಶಿವಪ್ರಸಾದ್, ಮೋಹನ್ ಮತ್ತು ಸಿಬ್ಬಂದಿ ಗುರುವಾರ ಹೊಂಚು ಹಾಕಿ, ದಾಳಿ ನಡೆಸಿ ಸರ್ವೇಯರ್ ರೈತನಿಂದ ಹಣ ಪಡೆಯುವಾಗ ಲಂಚದ ಸಮೇತ ಹಿಡಿದಿದ್ದಾರೆ. ಲೋಕಾಯುಕ್ತರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT