ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ.28ಕ್ಕೆ ಸಿಪಿಎಂ ರಾಜಕೀಯ ಸಮಾವೇಶ

Last Updated 24 ಜುಲೈ 2022, 5:31 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಸಿಪಿಎಂನ ಪಾಲಿಟ್ ಬ್ಯೂರೊದ ನಿರ್ಧಾರದಂತೆ ಆಗಸ್ಟ್ 28ರ ಭಾನುವಾರ ಪಟ್ಟಣದಲ್ಲಿ ರಾಜ್ಯ ಮಟ್ಟದ ರಾಜಕೀಯ ಸಮಾವೇಶವನ್ನು ನಿಗದಿಪಡಿಸಲಾಗಿದೆ ಎಂದು ಸಿಪಿಎಂ ರಾಜ್ಯ ಮಟ್ಟದ ಸಮಾವೇಶದ ಸಿದ್ಧತಾ ಸಮಿತಿಯ ಸಂಚಾಲಕ ಡಾ.ಅನಿಲ್‍ಕುಮಾರ್ ಹೇಳಿದರು.

ಸಿಪಿಎಂನ ಸುಂದರಯ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾವೇಶದ ಪೂರ್ವಸಿದ್ಧತಾ ಸಮಿತಿ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಸಮಾವೇಶಕ್ಕೆ ಪ್ರಚಾರ, ಸಾಂಸ್ಕೃತಿಕ, ಕೆಂಪು ಕಾರ್ಯಕರ್ತರ, ಮಾಧ್ಯಮ, ವೇದಿಕೆ ಸಮಿತಿಗಳನ್ನು ಹಾಗೂ ಒಬ್ಬರಿಗೆ ನಾಯಕತ್ವವನ್ನು ನೀಡಲಾಗಿದೆ. ಪ್ರಚಾರಕ್ಕೆ ತೆಲಂಗಾಣದ ಕಲಾವಿದರೊಂದಿಗೆ ಮುಖಂಡರು ಗ್ರಾಮಕ್ಕೆ ತೆರಳಿ ಜನರಿಗೆ ಸಮಾವೇಶದ ಬಗ್ಗೆ ಪ್ರಚಾರ ಮಾಡಬೇಕು. ಸಿಪಿಎಂ ಬಲಿಷ್ಠಗೊಳಿಸಲು ಈ ರಾಜಕೀಯ ಸಮಾವೇಶವು ಮುಂಬರುವ ವಿಧಾನಸಭಾಕ್ಷೇತ್ರದ ಚುನಾವಣೆಗೆ ದಿಕ್ಸೂಚಿಯಾಗಬೇಕು ಎಂದರು.

ಸಮಾವೇಶಕ್ಕೆ ಆಗುವ ಖರ್ಚು-ವೆಚ್ಚಗಳನ್ನು ಸಹ ಮುಖಂಡರು, ಕಾರ್ಯಕರ್ತರು ದೇಣಿಗೆ ಪಡೆಯಬೇಕು. ಸಾಕಷ್ಟು ಕಡಿಮೆ ದಿನಗಳು ಆಗಿರುವುದರಿಂದ ಹೆಚ್ಚು ಶ್ರಮಿಸಬೇಕು. ಜನರಿಂದ ದೇಣಿಗೆ ಪಡೆದು ಸಮಾವೇಶ ಮಾಡಬೇಕಾಗಿದೆ ಎಂದರು.

ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಕ್ಷೇತ್ರದಲ್ಲಿ ಸಿಪಿಎಂನ್ನು ಬಲಪಡಿಸಲು ರಾಜ್ಯ ಮಟ್ಟದ ರಾಜಕೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಸಲಹಾ ಸಮಿತಿಗಳನ್ನು ರಚಿಸಲಾಗಿದೆ. ಸಮಾವೇಶಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ರಾಜ್ಯ, ಅಂತರರಾಜ್ಯ, ರಾಷ್ಟ್ರೀಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಮಹಮದ್ ಅಕ್ರಂ ಮಾತನಾಡಿ, ಆಗಸ್ಟ್ 28ರಂದು ರಾಜಕೀಯ ಸಮಾವೇಶ ಹಮ್ಮಿಕೊಂಡಿರುವುದರಿಂದ, ಜಿಲ್ಲಾ, ತಾಲ್ಲೂಕು ಸಮಿತಿಗಳ ಸದಸ್ಯರು, ಮುಖಂಡರು ಒಟ್ಟಾಗಿ ಜನಜಾಗೃತಿ ಮೂಡಿಸಬೇಕು ಎಂದರು.

ಮುಖಂಡ ಎಚ್.ಪಿ.ಲಕ್ಷ್ಮಿನಾರಾಯಣ, ಭಾಸ್ಕರರೆಡ್ಡಿ, ಬಿ.ಎಚ್.ಆರೀಫ್, ಎನ್.ಎಸ್.ಚಲಪತಿ, ಹೇಮಚಂದ್ರ, ಒಬಳರಾಜು, ಸಿಪಿಎಂನ ಜಿಲ್ಲಾ ಸಮಿತಿ ಸದಸ್ಯ ಪಿ.ಮಂಜುನಾಥ ರೆಡ್ಡಿ, ಎಂ.ಎನ್.ರಘುರಾಮ ರೆಡ್ಡಿ, ಹೇಮಚಂದ್ರ, ಬಿಳ್ಳೂರುನಾಗರಾಜ್, ಶ್ರೀರಾಮನಾಯಕ್, ಎ.ಎನ್.ಶ್ರೀರಾಮಪ್ಪ, ನಗರ ಸಮಿತಿ ಕಾರ್ಯದರ್ಶಿ ಅಶ್ವಥ್ಥನಾರಾಯಣ, ಬಿ.ಎಚ್.ಆರೀಫ್, ದೇವಿಕುಂಟೆಶ್ರೀನಿವಾಸ್, ಆಚೇಪಲ್ಲಿಮದ್ದಿರೆಡ್ಡಿ, ಜಿ.ಕೃಷ್ಣಪ್ಪ, ವೆಂಕಟೇಶಬಾಬು, ಬಿ.ಸಾವಿತ್ರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT