ದಾವಣಗೆರೆ: ನಗರದಲ್ಲಿ ಗುರುವಾರ ರಾತ್ರಿ ತುಸು ಬಿರುಸಿನ ಮಳೆ ಸುರಿಯಿತು. ಇದರಿಂದಾಗಿ ಬಿಸಿಲಿನ ತಾಪದಿಂದ ಬಸವಳಿದಿದ್ದ ಭೂಮಿಗೆ ತುಸು ತಂಪೆರೆದಂತಾಯಿತು.
ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆ ತುಂತುರು ಹನಿಗಳ ಸಿಂಚನವಾಯಿತು. ರಾತ್ರಿ 10ರ ನಂತರ ತುಸು ಜೋರಾಯಿತು.
ಹರಿಹರ ವರದಿ: ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಭಾರಿ ಗಾಳಿಯಿಂದ ಕೂಡಿದ ತುಂತುರು ಮಳೆಯಾಗಿದೆ. ರಾತ್ರಿ ಬೀಸಿದ ಭಾರಿ ಗಾಳಿಗೆ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತಯ ಉಂಟಾಗಿತ್ತು.