ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಡೀಸೆಲ್ ಬೆಲೆ ₹ 100 ದಾಟಿದೆ. ಭಾನುವಾರ ಒಂದು ಲೀಟರ್ ಡೀಸೆಲ್ ಬೆಲೆ ₹ 100.27ಕ್ಕೆ ಹೆಚ್ಚಿದೆ. ದಿನದಿಂದ ದಿನಕ್ಕೆ ಡೀಸೆಲ್ ಬೆಲೆ ಹೆಚ್ಚುತ್ತಲೇ ಸಾಗಿದೆ.

ಅ.10ರಂದು ಲೀಟರ್ ಡೀಸೆಲ್ ₹ 98.22 ಇತ್ತು. ಒಂದೇ ವಾರದಲ್ಲಿದಲ್ಲಿ ₹ 2 ಹೆಚ್ಚಿದೆ. ಪ್ರತಿ ದಿನವೂ ಪೈಸೆಗಳ ಲೆಕ್ಕದಲ್ಲಿ ದರ ಹೆಚ್ಚುತ್ತಲೇ ಇದೆ. ಲೀಟರ್ ಪೆಟ್ರೋಲ್ ದರ ಸಹ ₹ 110 ಸಮೀಪಿದಿದೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಡೀಸೆಲ್ ದರ ₹ 100 ದಾಟಿತ್ತು. ಚಿಕ್ಕಬಳ್ಳಾಪುರವೂ ಈಗ ಆ ಪಟ್ಟಿಗೆ ಸೇರಿದೆ.

ವಾಹನ ಸವಾರರು, ರೈತರು ಸಹ ಡೀಸೆಲ್ ಬೆಲೆ ಹೆಚ್ಚಳಕ್ಕೆ ಕಂಗಾಲಾಗಿದ್ದಾರೆ. ಸಾಂಪ್ರದಾಯಿಕ ಎತ್ತುಗಳ ಜಾಗದಲ್ಲಿ ಈಗ ಕೃಷಿ ಚಟುವಟಿಕೆಗಳಿಗೆ ಟ್ರಾಕ್ಟರ್ ಬಂದಿದೆ. ರೈತರು ಉಳಿಮೆ ಸೇರಿದಂತೆ ಬಹುತೇಕ ಕೃಷಿ ಚಟುವಟಿಕೆಗಳಿಗೆ ಟ್ರಾಕ್ಟರ್‌ಗಳನ್ನು ಅವಲಂಬಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವು ಸರಕು ಸಾಗಾಣಿಕೆ ಸೇರಿದಂತೆ ಕೆಲವು ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರಿದರೆ ಬಹಳಷ್ಟು ಕ್ಷೇತ್ರಗಳ ಮೇಲೆ ಪರೋಕ್ಷ ಪರಿಣಾಮ ಬೀರುತ್ತಿದೆ.

ತೈಲ ಬೆಲೆ ಹೆಚ್ಚಳ ಇದರಿಂದ ಸಹಜವಾಗಿ ಬಡ ಹಾಗೂ ಮಧ್ಯಮ ವರ್ಗದವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.