ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಪೋಲು

Last Updated 30 ಆಗಸ್ಟ್ 2018, 15:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಎಂ.ಜಿ.ರಸ್ತೆಯಲ್ಲಿ ನಡೆದಿರುವ ಚಿಂತಾಮಣಿಯಿಂದ ಆಂಧ್ರಪ್ರದೇಶದ ಹಿಂದೂಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರ ವಿಸ್ತರಣೆ ಕಾಮಗಾರಿಯಲ್ಲಿ ಎಪಿಎಂಸಿ ಮಾರುಕಟ್ಟೆ ಬಳಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಲಕ್ಷಾಂತರ ಲೀಟರ್ ಕುಡಿಯುವ ನೀರು ರಸ್ತೆ ಪಾಲಾಯಿತು.

ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು ಕತ್ತರಿಸಿದ ಗಿಡಗಳ ಬುಡ ತೆಗೆದು ಹಾಕುತ್ತಿದ್ದ ವೇಳೆ ಜಕ್ಕಲಮಡಗು ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಹೋಯಿತು. ವಿಷಯ ತಿಳಿದು ನಗರಸಭೆ ಅಧಿಕಾರಿಗಳು ತಿಪ್ಪೇನಹಳ್ಳಿ ಬಳಿ ಇರುವ ವಾಲ್ವ್‌ ಬಂದ್ ಮಾಡುವ ವೇಳೆಗೆ ರಸ್ತೆಯುದ್ದಕ್ಕೂ ನೀರು ಹರಿದು ಮಡುಗಟ್ಟಿ ನಿಂತಿತ್ತು.

ವಾಲ್ವ್‌ ಬಂದ್ ಮಾಡಿದ ನಂತರವೂ ಅನೇಕ ಗಂಟೆಗಳ ಕಾಲ ನೀರು ಹರಿಯುತ್ತಲೇ ಇತ್ತು. ಗುರುವಾರ ಬೆಳಿಗ್ಗೆ ನಗರಸಭೆ ಸಿಬ್ಬಂದಿ ಒಡೆದ ಪೈಪ್‌ಲೈನ್ ರಿಪೇರಿ ಮಾಡಿ ಸರಿಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT