ಸೋಮವಾರ, ಜನವರಿ 20, 2020
26 °C

ನಾಮಗೊಂಡ್ಲು; ವೆಂಕಟೇಶ್ವರನ ದೇಗುಲದಲ್ಲಿ ಏಕಾದಶಿ ಸಂಭ್ರಮ

ಎ.ಎಸ್.ಜಗನ್ನಾಥ್ Updated:

ಅಕ್ಷರ ಗಾತ್ರ : | |

prajavani

ಗೌರಿಬಿದನೂರು: ತಾಲ್ಲೂಕಿನ ನಾಮಗೊಂಡ್ಲು ‌ಗ್ರಾಮದಲ್ಲಿನ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ‌ ಅಂಗವಾಗಿ ಪ್ರಧಾನ ಅರ್ಚಕ ಎಸ್.ವಿ.ವೆಂಕಟೇಶ ಮೂರ್ತಿ ನೇತೃತ್ವದಲ್ಲಿ ವಿಶೇಷ ಹೂವಿನ ಅಲಂಕಾರ ಮತ್ತು ಪೂಜಾ ಕೈಂಕರ್ಯಗಳನ್ನು‌ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 6ರಿಂದಲೇ ದೇವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಅಭಿಷೇಕ ಹಾಗೂ ಪೂಜಾ ಕಾರ್ಯಗಳನ್ನು ಮಾಡಲಾಗುವುದು. ಪ್ರತಿ ವರ್ಷ ವೈಕುಂಠ ಏಕಾದಶಿ, ಶ್ರಾವಣ ಮಾಸದ ಕೊನೆಯ ಶನಿವಾರ ಹಾಗೂ ಶ್ರೀನಿವಾಸ ಕಲ್ಯಾಣ ಮಹೋತ್ಸವದಂದು ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೂರಾರು ಭಕ್ತರ ಸಮ್ಮುಖದಲ್ಲಿ ‌ನಡೆಯಲಿದೆ.


ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದ ನಾಮಗೊಂಡ್ಲು ಗ್ರಾಮದಲ್ಲಿನ ವೆಂಕಟೇಶ್ವರ ದೇವಾಲಯ

ಸುಮಾರು 600 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ವೆಂಕಟೇಶ್ವರ ದೇವಾಲಯವು ಶಿಥಿಲಗೊಂಡಿದ್ದ ಕಾರಣ ಎರಡು ದಶಕಗಳ ಹಿಂದೆ ಗ್ರಾಮಸ್ಥರು ಹಾಗೂ ದಾನಿಗಳ‌ ಸಹಕಾರದಿಂದ ಹಳೆ ದೇವಾಲಯದ ಜಾಗದಲ್ಲಿಯೇ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿ ಜೀರ್ಣೋದ್ಧಾರ ಮಾಡಲಾಗಿದೆ. ಇದರಿಂದ ಗ್ರಾಮಸ್ಥರು ಶಾಂತಿ ಮತ್ತು ನೆಮ್ಮದಿಯಿಂದ ಬಾಳಲು ಸಹಕಾರಿಯಾಗಿದೆ ಎಂದು ಅರ್ಚಕ ವೆಂಕಟೇಶ್ ಮೂರ್ತಿ ತಿಳಿಸಿದ್ದಾರೆ.

ಶತಮಾನಗಳ ಹಿಂದಿನ ದೇವಾಲಯವು ಶಿಥಿಲಾವಸ್ಥೆಯಲ್ಲಿದ್ದಾಗ ಪುರಾತನವಾದ ಅವಶೇಷಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂಬ ಉದ್ದೇಶದಿಂದ ಹಳೆಯ ದೇವಾಲಯದ ಸ್ಥಳದಲ್ಲಿಯೇ ನೂತನ ದೇವಾಲಯದ ನಿರ್ಮಾಣ ಕಾರ್ಯ ನಡೆದು ನಿರಂತರವಾಗಿ ಪೂಜಾ ಕಾರ್ಯಗಳು ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಗ್ರಾಮದ ಹಿರಿಯ ಅಶ್ವತ್ಥರೆಡ್ಡಿ ತಿಳಿಸಿದರು.

ವೈಕುಂಠ ಏಕಾದಶಿಯ ಅಂಗವಾಗಿ ಇಂದು (ಸೋಮವಾರ) ಬೆಳಿಗ್ಗೆ 6 ಗಂಟೆಯಿಂದಲೇ ‌ದೇವರ ದರ್ಶನಕ್ಕೆ ದೇವಾಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಜೆವರೆಗೆ ಸಾವಿರಾರು ಭಕ್ತರು ದೇವರ ದರ್ಶನ  ಪಡೆಯಲಿದ್ದಾರೆ ಎಂದು ಅರ್ಚಕರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು