ಬುಧವಾರ, ಮೇ 12, 2021
18 °C

ಉತ್ತಮ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರವು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಬಿ.ಕಾಂ ಪದವಿಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ ಎಂದು ಪ್ರಾಂಶುಪಾಲೆ ಪ್ರೊ.ಕೆ. ಶಾರದಾ ತಿಳಿಸಿದ್ದಾರೆ.

ನಾಲ್ವರು ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 70 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ಜನ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎ.ವಿ. ನಾಗಾರ್ಜುನ 638 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಾಸ್ಟ್‌ ಮ್ಯಾನೇಜ್‌ಮೆಂಟ್ ವಿಷಯದಲ್ಲಿ 100ಕ್ಕೆ 100, ಬಿ.ಟಿ. ವಿಷಯದಲ್ಲಿ 98, ಬ್ಯಾಂಕಿಂಗ್ ರೆಗ್ಯುಲೇಷನ್ಸ್ ನಲ್ಲಿ 96, ಅಕೌಂಟಿಂಗ್‌‌ನಲ್ಲಿ 95 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾನೆ. ಟಿ.ಎನ್. ನಾಗೇಂದ್ರ 627 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸಿ.ಎಂ 98, ಬಿ.ಟಿ 98, ಬಿ.ಆರ್ 91, ಎಂ.ಎ 96, ಐ.ಟಿ 90 ಅಂಕಗಳನ್ನು ಗಳಿಸಿದ್ದಾನೆ. ಎ.ಮೋಹನ್ ರಾಜ್ 621 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಸಿ.ಎಂ. 98, ಬಿ.ಟಿ 98, ಬಿ.ಆರ್ 92, ಐ.ಟಿ 85, ಪಿ.ಪಿ.ಎ 88 ಅಂಕಗಳನ್ನು ಪಡೆದಿದ್ದಾನೆ. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು, ಪ್ರಾಂಶುಪಾಲೆ ಕೆ.ಶಾರದಾ ಅವರ ಮಾರ್ಗದರ್ಶನ,ಪ್ರೋತ್ಸಾಹ ಉತ್ತಮ ಸಾಧನೆಗೆ ಸಹಕಾರಿಯಾಯಿತು ಎಂದು ವಿದ್ಯಾರ್ಥಿಗಳಾದ ಎ.ವಿ.ನಾಗೇಂದ್ರ, ಮೋಹನ್ ರಾಜ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು