ಶುಕ್ರವಾರ, ಅಕ್ಟೋಬರ್ 22, 2021
28 °C

ಚಿಂತಾಮಣಿ: ಕೈವಾರ ಮಠಕ್ಕೆ ಗೋದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ರಾಜ್ಯದ ಪವಿತ್ರ ಯಾತ್ರಾಸ್ಥಳವಾದ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ನವರಾತ್ರಿ ಉತ್ಸವದ ಆರಂಭದ ದಿನ ಗುರುವಾರ ಶಾಸಕ ಎಂ. ಕೃಷ್ಣಾರೆಡ್ಡಿ ವಿಶೇಷ ಪೂಜೆ  ಸಲ್ಲಿಸಿ, ಗೋದಾನ ಮತ್ತು ಪಾದುಕೆಗಳ ಬೆಳ್ಳಿಪೀಠವನ್ನು ಸಮರ್ಪಿಸಿದರು.

ಶಾಸಕರ ಕುಟುಂಬದಿಂದ ಶ್ರೀಯೋಗಿನಾರೇಯಣ ಯತೀಂದ್ರರಿಗೆ ವಿಶೇಷ ಅಲಂಕಾರ, ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಂಡಿದ್ದರು. ಅರ್ಚಕ ವೃಂದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.

ತಾಲ್ಲೂಕಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ. ಕ್ಷೇತ್ರದ ಜನತೆ ಶಾಂತಿ, ನೆಮ್ಮದಿಯಿಂದ ಬಾಳಲಿ. ಜನರನ್ನು ಕಾಡುತ್ತಿರುವ ಕೋವಿಡ್ ಆದಷ್ಟು ಬೇಗ ದೂರವಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಶಾಸಕರು ಹೇಳಿದರು.

ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.