ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ, ಅಕ್ಟೋಬರ್ ‘ಸವರುವಿಕೆಗೆ’ ಸಕಾಲ

ಗುಲಾಬಿ ಬೆಳೆ: ತೋಟಗಾರಿಕೆ ವಿಜ್ಞಾನಿ ಸಿಂಧು ರೈತರಿಗೆ ಸಲಹೆ
Last Updated 5 ಜುಲೈ 2020, 17:12 IST
ಅಕ್ಷರ ಗಾತ್ರ

ಚಿಂತಾಮಣಿ: ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ಗುಲಾಬಿ ಬೆಳೆಯ ಸವರುವಿಕೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ತೋಟಗಾರಿಕೆ ವಿಜ್ಞಾನಿ ಸಿಂಧು ರೈತರಿಗೆ ಸಲಹೆ ನೀಡಿದರು.

ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರದಿಂದ ಗಿಡ್ನಹಳ್ಳಿ ಗ್ರಾಮದ ಕಾಂತಕುಮಾರ್ ತೋಟದಲ್ಲಿ ಗುಲಾಬಿ ಬೆಳೆಯಲ್ಲಿ ಸಕಾಲದಲ್ಲಿ ಸವರುವಿಕೆ ಮತ್ತು ಗುಲಾಬಿ ಮಿಶ್ರಣ ಬಳಕೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಿಡದ ಸವರುವಿಕೆ ಮಾಡಿದ ವಾರದ ನಂತರ ಪ್ರತಿ ಗಿಡಕ್ಕೆ 50 ಗ್ರಾಂ. ಗುಲಾಬಿ ಮಿಶ್ರಣ ನೀಡುವುದರಿಂದ ಹೂವಿನ ಗುಣಮಟ್ಟ ಹೆಚ್ಚಿಸಬಹುದು. ಗುಲಾಬಿ ಬೆಳೆಯನ್ನು ಸಕಾಲದಲ್ಲಿ ಸವರುವಿಕೆ, ಮಿಶ್ರಣ ನೀಡುವುದು, ಗೊಬ್ಬರ ನೀಡುವುದು ಸೇರಿದಂತೆ ಎಲ್ಲವನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನಿಗಳ ಸಲಹೆಯಂತೆ ಕಾಲಕಾಲಕ್ಕೆ ಅಗತ್ಯವಾದ ಬೇಸಾಯ, ನೀರು ಕೊಡುವುದು, ಸಕಾಲದಲ್ಲಿ ಹೂವಿನ ಕೊಯ್ಲು ಮಾಡುವುದರಿಂದ ಅಧಿಕ ಇಳುವರಿ ಪಡೆದು ಹೆಚ್ಚಿನ ಲಾಭಾಂಶ ಗಳಿಸಬಹುದು
ಎಂದರು.

ಬೇಸಾಯ ತಜ್ಞ ವಿಶ್ವನಾಥ್ ಮಾತನಾಡಿ, ಹೂವಿನ ಮಾರಾಟ, ಮಾರುಕಟ್ಟೆ ವಿವರಗಳನ್ನು ನೀಡಿದರು. ರೇಷ್ಮೆ ಕೃಷಿ ವಿಜ್ಞಾನಿ ಡಾ.ವಿನೋದಾ ಜೈವಿಕ ಗೊಬ್ಬರದ ಬಳಕೆಯ ಮಹತ್ವವನ್ನು ತಿಳಿಸಿಕೊಟ್ಟರು.

ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳ ಗುಲಾಬಿ ಬೆಳೆಗಾರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT